ಬಾಲಕಿಯರ ಸಮಸ್ಯೆಗಳ ಪರಿಹಾರಕ್ಕೆ ಆಪ್ತ ಸಲಹೆ ಅಗತ್ಯ – ಡಾ.ಶಶಿಕಲ… 

ಬಂಟ್ವಾಳ, ಜ.23:ಹದಿಹರೆಯದ ವಿದ್ಯಾರ್ಥಿನಿಯರು ದೈಹಿಕ ಮತ್ತು ಮಾನಸಿಕ ಬದಲಾವಣೆಗಳಿಂದ  ಕೆಲವೊಮ್ಮೆ ವರ್ತನೆಗಳಲ್ಲಿ ವ್ಯತ್ಯಾಸವಾಗಬಹುದು . ಅವರಿಗೆ  ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಸೂಕ್ತ ಆಪ್ತ ಸಲಹೆ ಅಗತ್ಯವಾಗಿದೆ ಎಂದು ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರ ಡಾ. ಶಶಿಕಲ ಹೇಳಿದರು.
ಅವರು ಮಾಣಿ ಕರ್ನಾಟಕ ಪ್ರೌಢ ಶಾಲೆಯ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲಾ ಹೆಣ್ಣು ಮಕ್ಕಳಿಗೆ ತಿಂಗಳ ಋತುಚಕ್ರ ಮತ್ತು ವೈಯಕ್ತಿಕ ನೈರ್ಮಲ್ಯದ ಬಗ್ಗೆ ಮಾಹಿತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಡಾ. ಶ್ರುತಿ ಶೆಟ್ಟಿ ಅವರು ವಿದ್ಯಾರ್ಥಿನಿಯರ  ವೈಯಕ್ತಿಕ ಸಮಸ್ಯೆಗಳನ್ನು  ಪರಿಹರಿಸುವ ಬಗ್ಗೆ ಆಪ್ತ ಸಲಹೆಗಳನ್ನು ನೀಡಿದರು.
ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು  ಮಹಿಳಾ , ಮಕ್ಕಳ , ವಯಸ್ಕರ ಅಭಿವೃದ್ಧಿ ಸಂಸ್ಥೆ ದ.ಕ.ಜಿಲ್ಲಾ ಇವರ ಸಹಯೋಗ ಮತ್ತು ಲಯನ್ಸ್ ಕ್ಲಬ್ ಮಾಣಿ ವತಿಯಿಂದ  ಕರ್ನಾಟಕ ಪ್ರೌಢ ಶಾಲೆ ಮಾಣಿಯಲ್ಲಿ ವಿಚಾರ ಸಂಕೀರ್ಣವನ್ನು ಏರ್ಪಡಿಸಲಾಗಿತ್ತು. ಮಾಣಿ ಲಯನ್ಸ್ ಕ್ಲಬ್ ಅಧ್ಯಕ್ಷ ಜನಾರ್ದನ ಪೆರಾಜೆ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಮಾನವ ಹಕ್ಕು ಸಂಸ್ಥೆಯ ಜಿಲ್ಲಾಧ್ಯಕ್ಷ ಸಚ್ಚಿದಾನಂದ ರೈ ಸ್ವಾಗತಿಸಿ, ಉಪಾಧ್ಯಕ್ಷ ಜಯಾನಂದ ಪೆರಾಜೆ ಪಸ್ತಾವಣೆ ಗೈದರು. ಶಾಲಾ ಸಂಚಾಲಕ ಇಬ್ರಾಹಿಂ ಕೆ., ಸಹಶಿಕ್ಷಕ ಗಂಗಾಧರ ಗೌಡ, ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಸಾರಿಕಾ ಜೆ.ಪಿ. , ಪಿಟಿಎ ಅಧ್ಯಕ್ಷ ಮೆಲ್ವಿನ್ ಮಾರ್ಟಿಸ್, ರವೀಂದ್ರ ಶೆಟ್ಟಿ ಮಂಜುಳಾ ಕೆ. ಪೆರಾಜೆ , ಉಪಸ್ಥಿತರಿದ್ದರು. ಜೀವಿತಾ ಶೆಟ್ಟಿ ನಿರೂಪಿಸಿ ವಂದಿಸಿದರು.

Related Articles

Back to top button