ವೀ ಆರ್ ಒನ್ ವಾಟ್ಸಪ್ಪ್ ಗ್ರೂಪ್ ಇದರ ಆಶ್ರಯದಲ್ಲಿ ರಕ್ತದಾನ ಕಾರ್ಯಕ್ರಮ…

ಸುಳ್ಯ: ಸಂಪಾಜೆ ಗ್ರಾಮ ಪಂಚಾಯತ್ ದ. ಕ. ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ,ಲೇಡಿಗೋಷನ್ ಆಸ್ಪತ್ರೆ,ಅಕ್ಷಯ ಚಾರಿಟೇಬಲ್ ಟ್ರಸ್ಟ್ , ಲಯನ್ಸ್ ಕ್ಲಬ್ ಮಂಗಳೂರು ಹಾಗು ವೀ ಆರ್ ಒನ್ ವಾಟ್ಸಪ್ಪ್ ಗ್ರೂಪ್ ಇದರ ಆಶ್ರಯದಲ್ಲಿ ರಕ್ತದಾನ ಕಾರ್ಯಕ್ರಮ ಗೂನಡ್ಕ ದರ್ಕಾಸ್ ಆರೋಗ್ಯ ಸಹಾಯಕ ಕೇಂದ್ರದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ. ಕೆ.ಹಮೀದ್ ವಹಿಸಿ, ಜಾತಿ ಧರ್ಮ ಬೇದ ಮರೆತು ರಕ್ತದಾನ ಮಾಡಿ ಸಾಮರಸ್ಯ ಮೆರೆದ ಗ್ರಾಮದ ಜನರು ಎಲ್ಲರಿಗೂ ಮಾದರಿ ಎಂದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಟಿ. ಎಂ.ಶಾಹಿದ್ , ಈ ಪ್ರದೇಶದ ಯುವಕರು ಬಹಳ ಉತ್ಸಾಹದಿಂದ ಬಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ ಎಂದರಲ್ಲದೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸೊಸೈಟಿ ಉಪಾಧ್ಯಕ್ಷ ಮಹಮದ್ ಕುಂಞ, ಲಯನ್ಸ್ ಕ್ಲಬ್ ಮಂಗಳೂರು ಅಧ್ಯಕ್ಷ ಶ್ರಿದರ್ ಶೆಟ್ಟಿ, ನಾಗೇಶ್ ಅಕ್ಷಯ ಟ್ರಸ್ಟ್ ಅಧ್ಯಕ್ಷ ಜಕರಿಯ ನಾರ್ಷ,ಸಂಘಟಕ ಕರೀಂ ಕೆದ್ಕರ್ ,ರೆಡ್ ಕ್ರಾಸ್ ಸಂಸ್ಥೆಯ ಪ್ರವೀಣ್, ಗ್ರಾಮ ಪಂಚಾಯತ್ ಸದಸ್ಯ ಸವಾಧ್, ಎಸ್ ಕೆ ಹನೀಫ್ ಭಾಗಿಯಾದರು.
ರಕ್ತದಾನ ಕಾರ್ಯಕ್ರಮದ ಪ್ರಮುಖ ರೂವಾರಿ ಅಬುಸಾಲಿ, ಸಿದ್ದೀಕ್ ದರ್ಕಾಸ್ ,ಆಶಾ ಕಾರ್ಯಕರ್ತೆ ಕೋಮಲಾಂಗಿ, ಅಂಗನವಾಡಿ ಕಾರ್ಯಕರ್ತೆ ಶಾರದಾ, ಲೇಡಿಗೋಷನ್ ಸಿಬ್ಬಂದಿವರ್ಗ, ಸಾಮಾಜಿಕ ಕಾರ್ಯಕರ್ತ ರಿಯಾಝ್ ಕಲ್ಲುಗುಂಡಿ, ಚಿದಾನಂದ ಮಾಸ್ಟರ್, ನಮ್ಮೂರು ನಮ್ಮ ಹೆಮ್ಮೆ ಗ್ರೂಪ್ ಸದಸ್ಯರು ಪಾಲ್ಗೊಂಡಿದ್ದರು.ಹಾರಿಸ್. ಕೆ.ಎಸ್. ಬಾಲಚಂದ್ರ, ಜಾಬಿರ್ ಎಂ ಬಿ ,ಅಜರ್,ಅಯ್ಯೂಬ್, ವಿಶೇಷ ಸಹಕಾರ ನೀಡಿದರು. ರಕ್ತದಾನ ದಲ್ಲಿ 61 ಜನ ಸಹಕರಿಸಿದರು
ರಕ್ತದಾನ ಕಾರ್ಯಕ್ರಮದ ಸಂಪೂರ್ಣ ಉಸ್ತುವಾರಿಯನ್ನು ವೀ ಆರ್ ಒನ್ ವಾಟ್ಸಪ್ಪ್ ಗ್ರೂಪಿನ ಸದಸ್ಯರು ವಹಿಸಿದ್ದರು.

372d5048 C207 4096 Aec8 A5b8e3472354 300x225

Related Articles