ದಾರುಲ್ ಹುದಾ ದಅವಾ ಕಾಲೇಜಿನಲ್ಲಿ ಸಮಸ್ತ -99 ಸ್ಥಾಪನಾ ದಿನ ಸಂಭ್ರಮಾಚರಣೆ…

ಸುಳ್ಯ: ಬೆಳ್ಳಾರೆ ತಂಬಿನಮಕ್ಕಿ ಎಂಬ ಸಂಸ್ಥೆಯಲ್ಲಿ ಸಮಸ್ತ 99 ನೇ ವರ್ಷಾಚರಣೆಯನ್ನು ಧ್ವಜಾರೋಹಣ ಕಾರ್ಯಕ್ರಮದೊಂದಿಗೆ ಚಾಲನೆ ನೀಡಲಾಯಿತು
ಕಾರ್ಯಕ್ರಮಕ್ಕೆ ಸಯ್ಯದ್ ಮಿಸ್ಬಾಹಿ ತಂಙಳ್ ದುಆ ನೇತೃತ್ವ ನೀಡಿದರು. ನಂತರ ಕಾರ್ಯಕ್ರಮದ ಮುಖ್ಯ ಅಥಿತಿಯಾಗಿರುವ ಜಮ್ಇಯ್ಯತುಲ್ ಉಲಮಾ ಬೆಳ್ಳಾರೆ ಝೋನ್ ಅಧ್ಯಕ್ಷರಾದ ಹಸ್ಸನ್ ಸಖಾಫಿ ಉಸ್ತಾದ್ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಸ್ಥೆಯ ಮ್ಯಾನೇಜರ್ ಖಲೀಲ್ ಹಿಮಮಿ ಸಖಾಫಿ ಉಸ್ತಾದ್ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡರು. ಸಂಸ್ಥೆಯ ಮುದರ್ರಿಸರಾದ ಕಲಂದರ್ ಅಲಿ ಹಿಮಮಿ ಸಖಾಫಿ ಉಸ್ತಾದ್ ಸಮಸ್ತದ ಹಿನ್ನಲೆಯ ಬಗ್ಗೆ ವ್ಯಕ್ತವಾದ ಅರಿವನ್ನು ನೀಡುವ ಮೂಲಕ ಕಾರ್ಯಕ್ರಮಕ್ಕೆ ಬಂದ ಅತಿಥಿಗಳಿಗೆ ಸ್ವಾಗತಿಸಿದರು SSF ಸುಳ್ಯ ಡಿವಿಷನ್ ಅಧ್ಯಕ್ಷರಾದ ಸಿದ್ದೀಕ್ ಹಿಮಮಿ ಸಖಾಫಿ ಉಸ್ತಾದ್, SSF ಸುಳ್ಯ ಡಿವಿಷನ್ ದಅವಾ ಕಾರ್ಯದರ್ಶಿಯಾದ ಕಬೀರ್ ಹಿಮಮಿ ಸಖಾಫಿ ಉಸ್ತಾದ್ , ಸಂಸ್ಥೆಯ ಮುದರ್ರಿಸ್ ಅಲ್ ವಾರಿಸ್ ಜಾಫರ್ ಸಖಾಫಿ ಉಸ್ತಾದ್ , ಇಲ್ಯಾಸ್ ಹಿಮಮಿ ಸಖಾಫಿ ಉಸ್ತಾದ್ , ಅಬೂಬಕರ್ ಸಅದಿ ಉಸ್ತಾದ್ ಉಪಸ್ಥಿತರಿದ್ದರು.

whatsapp image 2024 06 26 at 1.35.54 pm

Related Articles

Back to top button