ಕಡಬ ಕಾಡಾನೆ ದಾಳಿಗೆ ಇಬ್ಬರ ಬಲಿ – ಕೋಮು ಅಮಲಿನಲ್ಲಿರುವ ಸರಕಾರ-ಕೆ.ಪಿ.ಸಿ.ಸಿ ವಕ್ತಾರ ಟಿ.ಎಂ ಶಹೀದ್ ತೆಕ್ಕಿಲ್ ಆಕ್ರೋಶ…

ಸುಳ್ಯ: ಸುಳ್ಯ ವಿಧಾನ ಸಭಾ ಕ್ಷೇತ್ರದ ಕಡಬ ಎಂಬಲ್ಲಿ ನಡೆದ ಕಾಡಾನೆ ದಾಳಿಗೆ ಒರ್ವ ಮಹಿಳೆ ಸಹಿತ ಇಬ್ಬರು ಮೃತಪಟ್ಟಿರುವುದು ಖೇದಕರ. ಇತ್ತೀಚೆಗೆ ವನ್ಯ ಪ್ರಾಣಿಗಳ ದಾಳಿಯಿಂದ ರಾಜ್ಯದ ಹಲವು ಕಡೆ ರೈತರು, ವಿಧ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ. ಆದರೆ ಸರಕಾರ ಕಣ್ಣು ಮುಚ್ಚಿ ಕುಳಿತಿರುವುದು ಖಂಡನೀಯ. ಇದಕ್ಕೆ ಸರಕಾರ ಸಂಪೂರ್ಣ ಹೊಣೆಯಾಗಿದೆ ಎಂದು ಕೆ.ಪಿ.ಸಿ.ಸಿ ವಕ್ತಾರ ಟಿ.ಎಂ ಶಹೀದ್ ತೆಕ್ಕಿಲ್ ಆರೋಪಿಸಿದ್ದಾರೆ.
ಬದ್ದತೆಯಿಲ್ಲದ ಸರಕಾರದ ಮತ್ತು ಅರಣ್ಯ ಇಲಾಖೆಯ ಬೇಜವಾಬ್ದಾರಿಯಿಂದ ಇಂತಹ ಘಟನೆಗಳು ಮರುಕಳಿಸುತ್ತಿದೆ. ಪ್ರತಿ ನಿತ್ಯ ರಾಜ್ಯದ ನಾನಾ ಭಾಗದಲ್ಲಿ ಮಾನವ ಮತ್ತು ಪ್ರಾಣಿಗಳ ಸಂಘರ್ಷಗಳು ಆಗುತ್ತಿದೆ, ಸರಕಾರ ನಿದ್ರಾವಸ್ಥೆಯಲ್ಲಿದೆ, ಆದುದರಿಂದ ಸರಕಾರ ಕೂಡಲೆ ಅರಣ್ಯ ಇಲಾಖೆಯವರನ್ನು ಗಸ್ತುನಲ್ಲಿರಿಸಿ ವನ್ಯ ಪ್ರಾಣಿಗಳ ಉಪಟಳದಿಂದ ಮನುಷ್ಯರನ್ನು ಮತ್ತು ಅವರ ಆಸ್ತಿ ಪಾಸ್ತಿಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕೆಂದು, ಮೃತರ ಕುಟುಂಬಗಳಿಗೆ ತಲಾ 50 ಲಕ್ಷ ರೂ ಪರಿಹಾರ ಧನವನ್ನು ನೀಡಬೇಕೆಂದು ಕೆ.ಪಿ.ಸಿ.ಸಿ ವಕ್ತಾರ ಟಿ.ಎಂ ಶಹೀದ್ ತೆಕ್ಕಿಲ್ ಒತ್ತಾಯಿಸಿದ್ದಾರೆ.
ಒಂದು ಕಡೆ ಪ್ರಾಣಿ ಮಾನವ ಸಂಘರ್ಷ, ಇನ್ನೊಂದೆಡೆ ಐ ಎ ಎಸ್ ಹಾಗು ಐ ಪಿ ಎಸ್ ಮಹಿಳಾ ಅಧಿಕಾರಿಗಳ ಬೀದಿ ರಂಪಾಟ ಸರಕಾರದ ಮತ್ತು ಅಧಿಕಾರಿಗಳು ಮಾನ ಹರಾಜಾಗಿದ್ದು, ಮುಖ್ಯಮಂತ್ರಿ-ಸಚಿವರು ರಾಜ್ಯದ ಜನರಿಗೆ ಮುಖ ತೋರಿಸದೆ ಪಲಾಯನ ಮಾಡುತ್ತಿದ್ದಾರೆ. ಕೇವಲ ಕೋಮು ಅಮಲನ್ನು ಜನರ ತಲೆಗೆ ತುಂಬಿಸಿ ಮರಳಿ ಅಧಿಕಾರ ಪಡೆಯಬಹುದು, ಕಾನೂನು ಸುವ್ಯವಸ್ಥೆ ಜನರ ರಕ್ಷಣೆ ಮಾಡಬೇಕಾದ ಸರಕಾರದ ಸಚಿವರುಗಳು ಕಾನೂನು ಉಲ್ಲಂಘನೆ ಮಾಡುತ್ತಿದ್ದು, ಕ್ರಿಮಿನಲ್ ಹೇಳಿಕೆಗಳನ್ನು ನೀಡುತ್ತಿದ್ದು, ರಾಜ್ಯದ ಜನರಿಗೆ ಅವಮಾನ ಮಾಡುತ್ತಿದ್ದಾರೆ. ಮುಖ್ಯಮಂತ್ರಿ-ಸಚಿವರು ರಾಜ್ಯದಲ್ಲಿ ಮರಳಿ ಅಧಿಕಾರ ಪಡೆಯುವ ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಟಿ ಎಂ ಶಾಹಿದ್ ತೆಕ್ಕಿಲ್ ಸರಕಾರವನ್ನು ಲೇವಡಿ ಮಾಡಿದ್ದಾರೆ.