ಮುಗುಳಿಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ – ಪೂರ್ವಭಾವಿ ಸಭೆ…
ಬಂಟ್ವಾಳ: ಮುಗುಳಿಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಷಷ್ಠಿ ಪೂಜೆ ಮಹೋತ್ಸವ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವದ ಬಗ್ಗೆ ವ್ಯವಸ್ಥಾಪನ ಸಮಿತಿ ಹಾಗೂ ಷಣ್ಮುಖ ಯುವಕ ಸಂಘ ಮುಗುಳಿಯ ಹಾಗೂ ಭಕ್ತಾಭಿಮಾನಿಗಳ ಜಂಟಿ ಪೂರ್ವಭಾವಿ ಸಭೆ ಅ. 3 ರಂದು ದೇವಸ್ಥಾನದ ವಠಾರದಲ್ಲಿ ಸಜೀಪ ಮಾಗಣೆಯ ತಂತ್ರಿ ಎಂ ಸುಬ್ರಮಣ್ಯ ಭಟ್ ಅಧ್ಯಕ್ಷತೆಯಲ್ಲಿ ಜರಗಿತು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯಶಂಕರ ಬಾಸ್ರಿತಾಯ, ಅರ್ಚಕ ಕೃಷ್ಣ ಭಟ್, ಹರಿಪ್ರಸಾದ್ ಭಂಡಾರಿ, ಎನ್ ಕೆ ಶಿವ, ದೇವಪ್ಪ ಮಡಿವಾಳ, ಶ್ರೀನಿವಾಸ್ ನಾಯಕ್, ಚಿತ್ರ ಎಸ್ ರೈ, ರಾಜು ಪೂಜಾರಿ, ಯುವಕ ಸಂಘದ ಅಧ್ಯಕ್ಷ ದೀಕ್ಷಿತ ಶೆಟ್ಟಿ, ಧನಂಜಯ ಶೆಟ್ಟಿ, ಪ್ರಸಾದ್ ಶೆಟ್ಟಿ, ಪ್ರಸಾದ್ ನಾಯಕ್, ಧನೇಶ್ವರ ರಾವ್, ಧನ್ ರಾಜ್ ಶೆಟ್ಟಿ, ಉಮೇಶ್ ರಾವ್ ಮೊದಲಾದವರಿದ್ದರು. ಪಂಚಮಿ ಹಾಗೂ ಷಷ್ಠಿ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಬ್ರಹ್ಮಶ್ರೀ ನೀಲೇಶ್ವರ ಕೆ ಪದ್ಮನಾಭ ಬಿಚ್ಚಿಲ್ಲ ತಾಯ ತಂತ್ರಿಗಳ ನೇತೃತ್ವದಲ್ಲಿ ಶ್ರದ್ಧಾಭಕ್ತಿಯಿಂದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮತ್ತು ಭಜನಾ ಕಾರ್ಯಕ್ರಮಗಳೊಂದಿಗೆ ಪ್ರತಿವರ್ಷದಂತೆ ಆಚರಿಸಲು ತೀರ್ಮಾನಿಸಲಾಯಿತು.