ಸಂವಿಧಾನದ ಸೌಂದರ್ಯವನ್ನು ಸಂರಕ್ಷಿಸಲು ಪಣ ತೊಡೋಣ – ಕೆ. ಎಂ. ಮುಸ್ತಫ…

ಸುಳ್ಯ: ಗಾಂಧಿನಗರ ಮದರಸ ವಠಾರದಲ್ಲಿ ವಿಜೃಂಭಣೆಯ ಗಣರಾಜ್ಯೋತ್ಸವ ಆಚರಣೆ ಮುಹಿಯದ್ದೀನ್ ಜುಮಾ ಮಸ್ಜಿದ್ ತರ್ಭಿಯತುಲ್ ಇಸ್ಲಾಂ ಕಮಿಟಿ ಮತ್ತು ಮುನವ್ವಿರುಲ್ ಇಸ್ಲಾಂ ಮದರಸ ಆಶ್ರಯದಲ್ಲಿ ಆಚರಿಸಲಾಯಿತು.
74ನೇ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಜುಮಾ ಮಸೀದಿ ಅಧ್ಯಕ್ಷ ಕೆ. ಎಂ. ಮುಸ್ತಾಫ ಮಾತನಾಡಿ ಸಂವಿಧಾನದ ಸೌಂದರ್ಯವನ್ನು ಸಂರಕ್ಷಣೆ ನಮ್ಮೆಲ್ಲರ ಹೊಣೆ. ಸಾಮರಸ್ಯ ಸೌಹಾರ್ದ ಪರಂಪರೆ ಮತ್ತು ಸಹಿಷ್ಟುತೆ ದೇಶದ ಸಂವಿಧಾನದ ಸೌಂದರ್ಯವನ್ನು ಹೆಚ್ಚಿಸುತ್ತದೆ. ವಿವಿಧತೆಯಲ್ಲಿ ಏಕತೆಯನ್ನು ಕಂಡ ಭಾರತ ವಿಶ್ವದಲ್ಲೇ ತಮ್ಮ ಸಹೋದರ-ಸಹೋದರಿಯರ ಪರಂಪರೆಯ ಬಗ್ಗೆ ನೆಚ್ಚಿಕೊಂಡಿದೆ. ಪರಸ್ಪರ ದ್ವೇಷ, ಅಸೂಯೆ ಬಿಟ್ಟುದೇಶ,ಕುಟುಂಬ, ರಾಜ್ಯ, ಭಾಷೆ,ಯನ್ನು ಗೌರವಿಸಿ ಮುನ್ನಡೆಯೋಣ. ಸಹೋದರ-ಸಹೋದರಿಯ ರಂತೆ ಬಾಳೋಣ ಎಂದರು.
ಗಾಂಧಿನಗರ ಜುಮಾ ಮಸೀದಿ ಖತೀಬರಾದ ಅಲ್ಹಾಜ್ ಅಶ್ರಫ್ ಖಾಮಿಲ್ ಸಖಾಫಿ ಸಂದೇಶ ಭಾಷಣ ಮಾಡಿದರು. ಮುದರ್ರಿಸ್ ಶರಫುದ್ದೀನ್ ಸಅದಿ ದುವಾ ಆಶೀರ್ವಚನಗೈದರು. ಮದರಸ ಶಿಕ್ಷಕ ಅಬ್ದುಲ್ ಲತೀಫ್ ಸಖಾಫಿ ಸಂವಿಧಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು
ಈ ಸಂದರ್ಭದಲ್ಲಿ ಆಡಳಿತ ಸಮಿತಿ ಉಪಾಧ್ಯಕ್ಷ ಮಹಮ್ಮದ್ ಕೆಎಂಎಸ್, ಕಾರ್ಯದರ್ಶಿ ಕೆ ಬಿ ಅಬ್ದುಲ್ ಮಜೀದ್, ನಿರ್ದೇಶಕರುಗಳಾದ ಹಮೀದ್ ಬೀಜಕೊಚ್ಚಿ, ಇಬ್ರಾಹಿಂ ಶಿಲ್ಪಾ, ಮೊದಲಾದವರು ಉಪಸ್ಥಿತರಿದ್ದರು ಸದರ್ ಉಸ್ತಾದ್ ಇಬ್ರಾಹಿಂ ಸಖಾಫಿ ಪುಂಡೂರ್ ಸ್ವಾಗತಿಸಿ, ವಿಷಯ ಪ್ರಸ್ತಾವನೆ ಗೈದರು.
ಸಹಾಯಕ ಸದರ್ ಅಬ್ದುಲ್ ಖಾದರ್ ಮುಸ್ಲಿಯಾರ್ ಎಡಪ್ಪಾಲಂ ವಂದಿಸಿದರು.

img 20230126 wa0048
Sponsors

Related Articles

Back to top button