SSF ಗಾಂಧಿನಗರ ಶಾಖೆಯ ವತಿಯಿಂದ ಗಣರಾಜ್ಯೋತ್ಸವ ಆಚರಣೆ…

ಸುಳ್ಯ: ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಗಾಂಧಿನಗರ ಶಾಖೆಯ ವತಿಯಿಂದ ಗಣರಾಜ್ಯೋತ್ಸವದ ಝಂಡಾ ಊಂಚ ಕಾರ್ಯಕ್ರಮ ಸುನ್ನೀ ಸೆಂಟರ್ ಅನ್ಸಾರ್ ಕಾಂಪ್ಲೆಕ್ಸ್ ನಲ್ಲಿ SSF ಯುನಿಟ್ ಅಧ್ಯಕ್ಷ ಆಬಿದ್ ಕಲ್ಲುಮುಟ್ಲು ಅಧ್ಯಕ್ಷತೆಯಲ್ಲಿ ಜರುಗಿತು.
ಧ್ವಜಾರೋಹಣವನ್ನು ಎಸ್.ವೈ.ಎಸ್ ರಾಜ್ಯ ಸಮಿತಿ ಸದಸ್ಯರಾದ ಹಮೀದ್ ಬೀಜಕೊಚ್ಚಿ ನೆರವೇರಿಸಿದರು. ಅಬ್ದುಲ್ ರಹಿಮಾನ್ ಸಅದಿ ಉಸ್ತಾದ್ ದುಆದೊಂದಿಗೆ ಉದ್ಘಾಟಿಸಿದರು. ಪ್ರಾಸ್ತಾವಿಕ ಭಾಷಣವನ್ನು SSF ಗಾಂಧಿನಗರ ಶಾಖೆಯ ಕ್ಯಾಂಪಸ್ ಕಾರ್ಯದರ್ಶಿ ಮುಖ್ತಾರ್ ಅರಂಬೂರು ಸಂವಿಧಾನದ ಬಗ್ಗೆ ಅರಿವು ಮೂಡಿಸಿದರು.
ಪ್ರಸ್ತುತ ಕಾರ್ಯಕ್ರಮದಲ್ಲಿ ಎಸ್.ವೈ.ಎಸ್ ಗಾಂಧಿನಗರ ಬ್ರಾಂಚ್ ಅಧ್ಯಕ್ಷರಾದ ಸಿದ್ದೀಕ್ ಕಟ್ಟೆಕ್ಕಾರ್, ಕಾರ್ಯದರ್ಶಿ ಹಾರಿಸ್ ಬೋರುಗುಡ್ಡೆ, SSF ಸದಸ್ಯರುಗಳಾದ ಬಶೀರ್ ಕಲ್ಲುಮುಟ್ಳು, ಮಫಾಝ್ ಗುರುಂಪು, ಫಾಝಿಲ್ ನಾವೂರು, ಸ್ವಬಾಹ್ ಗಾಂಧಿನಗರ, ಹಿಮಾಸ್ ಬೀಜಕೊಚ್ಚಿ ಭಾಗವಹಿಸಿದರು. ಆರಿಫ್ ಬುಶ್ರ ಸ್ವಾಗತಿಸಿ ವಂದಿಸಿದರು.