ಅನನ್ಯ ಎ ಆರ್ – ಈಜು ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ…

ಬಂಟ್ವಾಳ: ವಿದ್ಯಾ ಭಾರತಿ ಕರ್ನಾಟಕ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಬನಶಂಕರಿ ಬೆಂಗಳೂರು ಇಲ್ಲಿ ನಡೆದ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ 14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಕಲ್ಲಡ್ಕ ಶ್ರೀ ರಾಮ ಪ್ರಾಥಮಿಕ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಅನನ್ಯ ಎ ಆರ್ 200ಮೀ ಬಟರ್ ಫ್ಲೈ ಬೆಳ್ಳಿಯ ಪದಕ ಮತ್ತು 200 ಮೀ ಬ್ಯಾಕ್ ಸ್ಟ್ರೋಕ್ ನಲ್ಲಿ ಕಂಚಿನ ಪದಕವನ್ನು ಗಳಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ.
ಇವಳು ರೇಷ್ಮೆ ಇಲಾಖೆಯ ನಿವೃತ್ತ ಇನ್ಸ್ಪೆಕ್ಟರ್ ಬಿ ಕೆ. ನಾಯಕ್ ಇವರ ಶಿಷ್ಯೆಯಾಗಿದ್ದು ಅಲೋಶಿಯಸ್ ಈಜು ಕೊಳದ ಮುಖ್ಯ ತರಬೇತು ದಾರ ಲೋಕರಾಜ್ ವಿಟ್ಲ ಮತ್ತು ವಿನೋದ್ ಕಾರವಾರ ಇವರಿಂದ ತರಬೇತಿ ಪಡೆಯುತ್ತಿದ್ದಾರೆ.