ಅನರ್ಘ್ಯ ಎ ಆರ್- ಈಜು ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ…

ಬಂಟ್ವಾಳ:ವಿದ್ಯಾ ಭಾರತಿ ಕರ್ನಾಟಕ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಬನಶಂಕರಿ ಬೆಂಗಳೂರು ಇಲ್ಲಿ ನಡೆದ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ 17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಕಲ್ಲಡ್ಕ ಶ್ರೀ ರಾಮ ಪ್ರೌಢ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಅನರ್ಘ್ಯ ಎ ಆರ್ 400 ಮೀ ಇಂಡಿಜುವಲ್ ಮೆಡ್ಲೆ ಯಲ್ಲಿ ಚಿನ್ನದ ಪದಕ, 200ಮೀ ಇಂಡಿಜುವಲ್ ಮೆಡ್ಲೆ ಯಲ್ಲಿ ಬೆಳ್ಳಿಯ ಪದಕ ಮತ್ತು 200ಮೀ ಬ್ಯಾಕ್ ಸ್ಟ್ರೋಕ್ ನಲ್ಲಿ ಕಂಚಿನ ಪದಕವನ್ನು ಗಳಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ಇವಳು ರೇಷ್ಮೆ ಇಲಾಖೆಯ ನಿವೃತ್ತ ಇನ್ಸ್ಪೆಕ್ಟರ್ ಬಿಕೆ ನಾಯಕ್ ರವರ ಶಿಷ್ಯೆಯಾಗಿದ್ದು ಅಲೋಶಿಯಸ್ ಈಜು ಕೊಳದ ಮುಖ್ಯ ತರಬೇತು ದಾರ ಲೋಕರಾಜ್ ವಿಟ್ಲ ಮತ್ತು ವಿನೋದ್ ಕಾರವಾರ ಇವರಿಂದ ತರಬೇತಿ ಪಡೆಯುತ್ತಿದ್ದಾರೆ.