ಸಾರ್ವಜನಿಕ ಹಿಂದೂ ರುದ್ರ ಭೂಮಿ ಕಂಚಿನಡ್ಕ ಪದವು -ಸಮಾಲೋಚನ ಸಭೆ…
ಬಂಟ್ವಾಳ: ಸಾರ್ವಜನಿಕ ಹಿಂದೂ ರುದ್ರ ಭೂಮಿ ಕಂಚಿನಡ್ಕ ಪದವು ಸಜೀಪನಡು ಉಳ್ಳಾಲ ತಾಲೂಕು ಇದರ ಸಮಾಲೋಚನ ಸಭೆ ಜು.24 ರಂದು ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಸುಭಾಷ್ ನಗರ ಸಜೀಪ ಮೂಡ ಇಲ್ಲಿ ಗುರುಮಂದಿರ ಸೇವಾ ಸಮಿತಿ ಅಧ್ಯಕ್ಷ ಗಿರೀಶ್ ಕುಮಾರ್ ಫೆರ್ವ ಅಧ್ಯಕ್ಷತೆಯಲ್ಲಿ ಜರಗಿತು.
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಸಂತೋಷ್ ಕುಮಾರ್ ಬೋಳಿಯಾರು, ಸತೀಶ್ ಕುಂಪಲ, ಸಜೀಪ ಮಾಗಣೆ ತಂತ್ರಿ ಎಮ್ ಸುಬ್ರಹ್ಮಣ್ಯ ಭಟ್, ಸಜೀಪ ಪಡು ಗ್ರಾಮ ಪಂಚಾಯತ್ ಅಧ್ಯಕ್ಷ ವಿಠಲ, ಉದ್ಯಮಿ ಸಂಜೀವ ಪೂಜಾರಿ, ಉದ್ಯಮಿ ಗಣೇಶ್, ಚೆನ್ನಯ್ಯ ಸಾಲಿಯಾನ್, ಚಂದ್ರಶೇಖರ ಗಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಹಿಂದೂ ರುದ್ರ ಭೂಮಿ ಸಂಪರ್ಕಿಸುವ ರಸ್ತೆಗೆ ಕಾಂಕ್ರೀಟೀಕರಣಗೊಳಿಸಲು ಸರಕಾರದಿಂದ ಅನುದಾನ ದೊರಕಿಸಲು ಹಾಗೂ ಶವ ಸಾಗಾಟಕ್ಕೆ ಸ್ವಂತ ವಾಹನ ಹೊಂದಲು ಸಭೆಯಲ್ಲಿ ತೀರ್ಮಾನಿಸಲಾಯಿತು. ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಯಶವಂತ ದೇರಾಜೆ ಗುತ್ತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪಂಚಾಯತ್ ಸದಸ್ಯ ಸುರೇಶ್ ಆರ್ಯಪು ಸ್ವಾಗತಿಸಿದರು. ಸತೀಶ್ ಧನ್ಯವಾದ ಅರ್ಪಿಸಿದರು. ಪ್ರಶಾಂತ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು.