ಪಯಸ್ವಿನಿ ಯುವಕ ಮಂಡಲ ಕೇರ್ಪಳ – ವಾರ್ಷಿಕ ಮಹಾಸಭೆ…

ಸುಳ್ಯ: ಕೇರ್ಪಳ ಪಯಸ್ವಿನಿ ಯುವಕ ಮಂಡಲ ಇದರ ವಾರ್ಷಿಕ ಮಹಾಸಭೆಯು ಡಿ. 19 ರಂದು ಯುವಕ ಮಂಡಲ ಅಧ್ಯಕ್ಷ
ಚಂದ್ರಶೇಖರ ಕೇರ್ಪಳರ ಅಧ್ಲಕ್ಷತೆಯಲ್ಲಿ ನಡೆಯಿತು.
ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ದಯಾನಂದ ಕೇರ್ಪಳ, ಯುವಕ ಮಂಡಲ ಗೌರವಾಧ್ಯಕ್ಷ ಲಕ್ಷ್ಮೀಶ್‌ ದೇವರಕಳಿಯ ಮುಖ್ಯ ಅತಿಥಿಗಳಾಗಿದ್ದರು.
ಕಾರ್ಯದರ್ಶಿ ವಿನ್ಯಾಸ್‌ ಕುರುಂಜಿ ವರದಿ ವಾಚಿಸಿದರು. ಕೋಶಾಧಿಕಾರಿ ಅಜಿತ್‌ ಲೆಕ್ಕಪತ್ರ ಮಂಡಿಸಿದರು.
ಬಳಿಕ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. 2022-23 ನೇ ಸಾಲಿನ ನೂತನ ಅಧ್ಯಕ್ಷರಾಗಿ ಯತೀಶ್‌ ಪೂಜಾರಿ ಕೇರ್ಪಳ, ಪ್ರಧಾನ ಕಾರ್ಯದರ್ಶಿ ಯಾಗಿ ಅಜಿತ್‌ ಕೆ.ಆರ್‌. ಕೋಶಾಧಿಕಾರಿ ಯಾಗಿ ಸುಹಾಸ್‌, ಉಪಾಧ್ಯಕ್ಷ ರಾಗಿ ಭರತ್‌
ಕುರುಂಜಿ, ಜತೆ ಕಾರ್ಯದರ್ಶಿ ಯಾಗಿ ಜಯಪ್ರಕಾಶ್‌, ಸಾಂಸ್ಕೃತಿಕ ಕಾರ್ಯದರ್ಶಿ ಯಾಗಿ ಜನಾರ್ಧನ ನಾಯ್ಕ್‌, ಕ್ರೀಡಾ ಕಾರ್ಯದರ್ಶಿ ಯಾಗಿ ರವಿಪ್ರಸಾದ್‌ ಕೇರ್ಪಳ, ಸಂಘಟನಾ ಕಾರ್ಯದರ್ಶಿ ಯತೀಶ್‌ ಕೇರ್ಪಳ, ಪತ್ರಿಕಾ ಪ್ರತಿನಿಧಿ ಶಿವಪ್ರಸಾದ್‌ ಕೇರ್ಪಳ ಆಯ್ಕೆಯಾದರು. ನಿರ್ದೇಶಕರುಗಳಾಗಿ ಜಯಪ್ರಕಾಶ್‌ ಕೇರ್ಪಳ, ಸುನಿಲ್‌, ಶ್ರೀಧರ, ದಿನೇಶ್‌, ರಘುರಾಮ ಕೇರ್ಪಳ, ಗೌರವ ಸಲಹೆಗಾರರಾಗಿ ಮೋಹನ್‌ ಕೇರ್ಪಳ, ವಿನಯ ಕೇರ್ಪಳ, ಮನೋಜ್‌ ಕೇರ್ಪಳ, ಸುನಿಲ್‌ ಕೇರ್ಪಳ, ಚಂದ್ರಪ್ರಕಾಶ್‌ ಕೇರ್ಪಳ, ಕಮಲಾಕ್ಷ ಕೇರ್ಪಳ, ಲಕ್ಷ್ಮೀಶ್‌ ದೇವರಕಳಿಯ ಆಯ್ಕೆಯಾದರು.
ಪದಾಧಿಕಾರಿಗಳ ಆಯ್ಕೆಯ ಬಳಿಕ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ದಯಾನಂದ ಕೇರ್ಪಳ ಪ್ರತಿಜ್ಞೆ ಬೋಧಿಸಿದರು.

Related Articles

Back to top button