ಸುಳ್ಯದ ಗಾಂಧಿ ಪಾರ್ಕ್ ಗೆ ಭೇಟಿ ನೀಡಿ ಗೌರವ ನಮನ ಸಲ್ಲಿಸಿದ ಟಿ ಎಂ ಶಾಹಿದ್ ತೆಕ್ಕಿಲ್…

ಸುಳ್ಯ: ಗಾಂಧಿ ಪಾರ್ಕ್ ಉದ್ಘಾಟನೆಯ ದಿನ ವಿದೇಶ ಪ್ರಯಾಣದಲ್ಲಿದ್ದ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಧ್ಯಕ್ಷ ಟಿ ಎಂ ಶಾಹಿದ್ ತೆಕ್ಕಿಲ್ ರವರು ಇಂದು ಗಾಂಧಿ ನಗರದ ಗಾಂಧಿ ಪಾರ್ಕ್ ಗೆ ಭೇಟಿ ನೀಡಿ ಗೌರವ ನಮನ ಸಲ್ಲಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ನಗರ ಪಂಚಾಯತ್ ಸದಸ್ಯ ಗಾಂಧಿ ಪಾರ್ಕ್ ರೂವಾರಿ ಶರೀಫ್ ಕಂಠಿ, ನ ಪಂ ಸದಸ್ಯ ಸಿದ್ದೀಕ್ ಕೊಕ್ಕೊ , ರಾಧಾಕೃಷ್ಣ ಅರಂಬೂರು, ಇಸ್ಮಾಯಿಲ್ ಕುಂಬ್ಳೆಕಾರ್ಸ್, ಹನೀಫ್ ಬೀಜಕೊಚ್ಚಿ, ಅಬೂಬಕ್ಕರ್ ಮುಕ್ರಿ , ಅಬ್ದುಲ್ಲ ಪ್ಲ್ಯಾಸ್ಟೋ, ದಿವಾಕರ್,ಇಬ್ರಾಹಿಂ ಕಡಬ ಮತ್ತಿತರು ಉಪಸ್ಥಿತರಿದ್ದರು.
ಗಾಂಧಿ ಪಾರ್ಕಿನ ರೂವಾರಿಗಳಾದ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ಮತ್ತು ಅವರ ತಂಡವನ್ನು ಅಭಿನಂದಿಸಿದರು.