ಕರ್ನಾಟಕ ಬ್ಯಾಂಕ್ ಮಾಜಿ ಅಧ್ಯಕ್ಷ ಅನಂತಕೃಷ್ಣ ಅವರಿಗೆ ಹುಟ್ಟೂರ ಶ್ರದ್ಧಾಂಜಲಿ…

ಬಂಟ್ವಾಳ: ಕರ್ನಾಟಕ ಬ್ಯಾಂಕ್ ಮಾಜಿ ಅಧ್ಯಕ್ಷ ಅನಂತಕೃಷ್ಣ ಅವರಿಗೆ ಹುಟ್ಟೂರ ಶ್ರದ್ಧಾಂಜಲಿ ಕರ್ನಾಟಕ ಬ್ಯಾಂಕ್ ವಠಾರದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಬಿ ಸದಾನಂದ ಪೂಂಜಾ ಅಧ್ಯಕ್ಷತೆಯಲ್ಲಿ ಜರಗಿತು.
ಅನಂತ ಕೃಷ್ಣರ ತೀರ್ಥರೂಪರಾದ ನಾರಾಯಣರಾವ್ ಅವರು ಶಾನುಭೋಗರಾಗಿ ಸಜಿಪದ ಆಸುಪಾಸು ಗ್ರಾಮಗಳಲೆಲ್ಲ ಜನಾನುರಾಗಿಯಾಗಿದ್ದರು. ಅವರ ಪುತ್ರರಾದ ಅನಂತಕೃಷ್ಣ ಸರಳತೆ, ಸಜ್ಜನಿಕೆಯನ್ನು ಮೈಗೂಡಿಸಿಕೊಂಡು ಕರ್ನಾಟಕ ಬ್ಯಾಂಕ್ ನ್ನು ವಿಶ್ವಮಟ್ಟದಲ್ಲಿ ರೂಪಿಸುವಲ್ಲಿ ಯಶಸ್ವಿಯಾಗಿದ್ದರು. ಸಜೀಪದಂತಹ ಗ್ರಾಮೀಣ ಭಾಗದಲ್ಲಿ ಬ್ಯಾಂಕ್ ಶಾಖೆಯನ್ನು ಒದಗಿಸಿಕೊಟ್ಟು ಗ್ರಾಮದ ಆರ್ಥಿಕ ಸುಧಾರಣೆಗೆ ಕಾರಣೀಭೂತರಾಗಿದ್ದಾರೆ ಎಂದು ಸದಾನಂದ ಪೂಂಜಾ ಹೇಳಿದರು.
ನಂತರ ಮೃತರ ಆತ್ಮಕ್ಕೆ ಶಾಂತಿಕೋರಿ ಮೌನವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾಂಕ್ ಸಜಿಪಮೂಡ ಶಾಖ ಪ್ರಬಂಧಕರಾದ ಮಿತಿಲೇಶ್ ಕುಮಾರ್, ಸುಮನ್ ಕೆಎ ರಾಮಚಂದ್ರಯ್ಯ, ರಾಘವೇಂದ್ರ ಕುಮಾರ್, ಪ್ರಣಮ್, ಪ್ರಶಾಂತ್ ಕುಮಾರ್ ಸಿಬ್ಬಂದಿ ಗಳಲ್ಲದೆ ಪ್ರಮುಖರಾದ ಎo ಸುಬ್ರಮಣ್ಯ ಭಟ್, ಜಯಶಂಕರ ಬಾಸ್ರಿ ತಾಯ ,ವೆಂಕಟೇಶ್ವರ ಭಟ್ ,ದೇವಿ ಪ್ರಸಾದ್ ಪೂಂಜಾ ,ಕೆ ಸೀತಾರಾಮ ಶೆಟ್ಟಿ,ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಬಾಬು ಗಾವಂಕರ್, ಹರೀಶ್ ಗಟ್ಟಿ ,ವೆಂಕಟ ರಾಯ ಮಯ್ಯ ,ಶ್ರೀನಾಥ್ ಶೆಟ್ಟಿ, ವಿಶ್ವನಾಥ್ ಬೆಲ್ಚಡ, ವಿಶ್ವನಾಥ್ ಕೊಟ್ಟಾರಿ ಮೊದಲಾದವರು ಉಪಸ್ಥಿತರಿದ್ದರು.