ಸುದ್ದಿ

ಮಳೆಯಿಂದಾಗಿ ಪೇರಡ್ಕದಲ್ಲಿ ಹಾನಿ – ಪ್ರಮುಖರಿಂದ ವೀಕ್ಷಣೆ…

ಸುಳ್ಯ: ಸಂಪಾಜೆ ಗ್ರಾಮದ ಇತಿಹಾಸ ಪ್ರಸಿದ್ಧ ಊರಾದ ಪೇರಡ್ಕದಲ್ಲಿ ಸೇತುವೆ ಹಾಗು ಟಿ ಎಂ ಶಾಹೀದ್ ಹಾಗೂ ಪೇರಡ್ಕದ ಹಲವರ ತೋಟಗಳಿಗೆ ಮಳೆಗೆ ಪಯಸ್ವಿನಿ ಹೊಳೆಯ ನೀರು ಬಂದಿರುವುದರಿಂದ ಆಗಿರುವ ಹಾನಿ ಮತ್ತು ನಷ್ಟವನ್ನು ಪೇರಡ್ಕ ಜಮಾತಿನ ಗೌರವ ಅಧ್ಯಕ್ಷ ಹಾಗೂ ತೆಕ್ಕಿಲ್ ಪ್ರತಿಷ್ಟಾನದ ಅಧ್ಯಕ್ಷರಾದ ಟಿ ಎಂ ಶಾಹೀದ್ ತೆಕ್ಕಿಲ್, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ,ಪೇರಡ್ಕ ಇತಿಹಾಸ ಪ್ರಸಿದ್ಧ ಮಸೀದಿಯ ಖತೀಬ್ ರಿಯಾಝ್ ಫೈಝಿ ಎಮ್ಮೆಮಾಡು, ಟಿ ಎಂ ಮೊಹಮ್ಮದ್ ಕುಂಞ ತೆಕ್ಕಿಲ್ ಪೇರಡ್ಕ ನೂರುದ್ದೀನ್ಅನ್ಸಾರಿ ಮತ್ತಿತರರು ವೀಕ್ಷಿಸಿದರು.
ಸರಕಾರ ಅಗತ್ಯ ಪರಿಹಾರ ನೀಡುವಂತೆ ಟಿ ಎಂ ಶಾಹೀದ್ ತೆಕ್ಕಿಲ್ ಆಗ್ರಹಿಸಿದ್ದಾರೆ. ಮಳೆಯಿಂದ ಹಾನಿಯಾದ ರಸ್ತೆಗಳನ್ನು ಹಾಗೂ ನೂತನ ಸಂಪರ್ಕ ರಸ್ತೆಯನ್ನು ನಿರ್ಮಿಸಲು ಪ್ರಯತ್ನ ಪಡುವುದಾಗಿ ಟಿ ಎಂ ಶಾಹೀದ್ ತೆಕ್ಕಿಲ್ ಭರವಸೆ ನೀಡಿದ್ದಾರೆ.

Advertisement

Related Articles

Back to top button