ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಯವರ 29ನೇ ಪುಣ್ಯಸ್ಮರಣೆ…

ಸುಳ್ಯ: ಆಧುನಿಕ ಭಾರತದ ಮಹಾನ್ ಕನಸು ಹೊತ್ತಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ದುರಂತ ಸಾವನ್ನಪ್ಪಿ ಇವತ್ತಿಗೆ 29 ವರ್ಷ ಗತಿಸಿದೆ. 1991, ಮೇ 21ರಂದು ಚೆನ್ನೈ ಹೊರವಲಯದ ಶ್ರೀಪೆರಂಬುದೂರ್ ಬಳಿ ಉಗ್ರಗಾಮಿಗಳು ಆತ್ಮಾಹುತಿ ದಾಳಿ ನಡೆಸಿ ರಾಜೀವ್ ಗಾಂಧಿ ಅವರ ಹತ್ಯೆಗೈದಿದ್ದರು.
ಈ ಪ್ರಯುಕ್ತ ಇಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕೆ. ಪಿ. ಸಿ. ಸಿ ಯ ಮಾಜಿ ಕಾರ್ಯದರ್ಶಿ ಟಿ. ಎಂ ಶಾಹಿದ್ ತೆಕ್ಕಿಲ್ ಅವರು ಪುಷ್ಪಾಚರಣೆ ಮಾಡಿ ಗೌರವ ಸೂಚಿಸಿದರು . ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಪಿ. ಎಸ್ ಗಂಗಾಧರ್, ಕೆ.ಎಂ.ಮುಸ್ತಫಾ, ನ್ಯಾಯವಾದಿ ದಿನೇಶ್ ಅಂಬೆಕಲ್ಲು, ನಂದರಾಜ್ ಸಂಕೇಶ್ ಉಪಸ್ಥಿತರಿದ್ದರು.

Sponsors

Related Articles

Back to top button