ಮಾರ್ನಾಡ್ ಅನಂತ್ರಾಜ್ ಜೈನ್, ಪೆರಿಯಾರ್ ಗುತ್ತು ನಿಧನ…

ಬಂಟ್ವಾಳ: ದೇವಸ್ಯಪಡೂರು ಗ್ರಾಮದ ಪೆರಿಯಾರ್ ಗುತ್ತು ನಿವಾಸಿ ಮಾರ್ನಾಡ್ ಅನಂತ್ರಾಜ್ ಜೈನ್ (85) ಇವರು ಮೇ.14ರಂದು ತನ್ನ ವಯೋಸಹಜ ಖಾಯಿಲೆಯಿಂದ ನಿಧನ ಹೊಂದಿದರು.
ಮೂಲತಃ ಮಾರ್ನಾಡ್ ಹಳೆಮನೆ ಗುತ್ತು ಮನೆಯವರಾದ ಇವರು ತನ್ನ ವ್ರತ್ತಿ ಜೀವನವನ್ನು ಶಿಕ್ಷಕರಾಗಿ ಮೂಡುಬಿದಿರೆ ಜ್ಯೋತಿ ಹೈಸ್ಕೂಲ್ ನಲ್ಲಿ ಆರಂಭಿಸಿ, ತದನಂತರ ಪುಂಜಾಲಕಟ್ಟೆ ಸರಕಾರಿ ಪ್ರೌಢಶಾಲೆ , ವಗ್ಗ ಸರಕಾರಿ ಪ್ರೌಢಶಾಲೆ ಯ ಸ್ಥಾಪಕ ಮುಖ್ಯೋಪಾಧ್ಯಾಯರಾಗಿ , ನಂತರ ಗುರುವಾಯನಕೆರೆ ಪ್ರೌಢಶಾಲೆ ಬಂಟ್ವಾಳ ನಾವುರ ಪ್ರೌಢಶಾಲೆ ಯ ಮುಖ್ಯೋಪಾಧ್ಯಾಯರಾಗಿ ಒಟ್ಟು ಸುಮಾರು ೩೦ ವರ್ಷ ಗಳ ಕಾಲ ಅಧ್ಯಾಪಕ ವೃತ್ತಿ ಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಯಾಗಿರುತ್ತಾರೆ.
ಮೃತರು ಬಂಟ್ವಾಳ ಸ್ಪರ್ಶ ಕಲಾಮಂದಿರದ ಮಮತಾ ಸುಭಾಶ್ಚಂದ್ರ ಜೈನ್ (ಮಗಳು) ಪೆರಿಯಾರ್ ಗುತ್ತು ಮನ್ಮಥರಾಜ್ ಜೈನ್ (ಮಗ) ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.

Sponsors

Related Articles

Back to top button