ಗೂನಡ್ಕದ ಪೇರಡ್ಕ ಮೋಹಿದ್ದಿನ್ ಜುಮಾ ಮಸ್ಜಿದ್, ತೆಕ್ಕಿಲ್ ಮೊಹಮ್ಮದ್ ಹಾಜಿ ಸ್ಮಾರಕ ತಕ್ವೀಯತುಲ್ ಇಸ್ಲಾಂ ಶಾಲೆಯಲ್ಲಿ 75ನೇ ಗಣರಾಜ್ಯೋತ್ಸವ…

ಸುಳ್ಯ: ಗೂನಡ್ಕ ಪೇರಡ್ಕದ ತೆಕ್ಕಿಲ್ ಮೊಹಮ್ಮದ್ ಹಾಜಿ ಮೆಮೋರಿಯಲ್ ತಕ್ವೀಯತುಲ್ ಇಸ್ಲಾಂ ಮದರಸ ಶಾಲೆಯಲ್ಲಿ ಸಡಗರದಿಂದ 75ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಟಿ ಬಿ ಹನೀಫ ರವರು ಧ್ವಜಾರೋಹಣಗೈದು,ಭಾರತದ ಸರ್ವ ಪ್ರಜೆಗೂ ಸಮಾನತೆ, ಶಿಕ್ಷಣ, ಇತರೆ ಹಕ್ಕುಗಳನ್ನು ನೀಡಿರುವ ಸಂವಿಧಾನವನ್ನು ಜಾರಿಗೆ ತರಲು ಶ್ರಮಿಸಿದ ಎಲ್ಲ ನಾಯಕರ ಸಾಧನೆಯನ್ನು ನೆನೆದು, ಸಂವಿಧಾನದ ಮಹತ್ವವನ್ನು ತಿಳಿಸಿದರು.
ಖತೀಬರಾದ ರಿಯಾಜ್ ಫೈಜಿ ಎಮ್ಮೆಮಾಡು ಸಂದೇಶ ಭಾಷಣಗೈದರು. ಕಾರ್ಯದರ್ಶಿ ಉಮ್ಮರ್ ಗೂನಡ್ಕ,
ಸಹ ಅಧ್ಯಾಪರಾದ ಹಸೈನಾರ್ ಮುಸ್ಲಿಯಾರ್ ಮತ್ತು ಮದರಸ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

whatsapp image 2024 01 26 at 7.59.29 pm

Sponsors

Related Articles

Back to top button