ಅಜಾತಶತ್ರು, ಸರಳ ರಾಜಕಾರಣಿ ಅಮರನಾಥ ಶೆಟ್ಟಿ….

ಮಂಗಳೂರು: ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅಮರನಾಥ ಶೆಟ್ಟಿ(80) ಅವರು ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.
ಅಜಾತಶತ್ರು, ಸರಳಜೀವಿಯಾಗಿದ್ದ ಅಮರನಾಥ ಶೆಟ್ಟರು ಮೂಡುಬಿದಿರೆ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿದ್ದಾರೆ.
1983ರಲ್ಲಿ ಮೊದಲ ಬಾರಿಗೆ ಶಾಸಕರಾದ ಅಮರನಾಥ ಶೆಟ್ಟಿ ರಾಮಕೃಷ್ಣ ಹೆಗಡೆ ಸರಕಾರದಲ್ಲಿ ಮುಜರಾಯಿ ಸಚಿವರಾಗಿದ್ದರು. ಆಬಳಿಕ 1985ರಲ್ಲಿ ಎರಡನೇ ಬಾರಿಗೆ ಶಾಸಕರಾಗಿ ಯುವಜನ ಸೇವೆ, ಕ್ರೀಡಾ ಖಾತೆ ಸಚಿವರಾಗಿದ್ದರು. 1989ರಲ್ಲಿ ಸೋಲು. ಬಳಿಕ 1994ರಲ್ಲಿ ಮತ್ತೆ ಗೆದ್ದು ಜೆ.ಎಚ್ ಪಟೇಲ್ ಸರಕಾರದಲ್ಲಿ ಮುಜರಾಯಿ ಸಚಿವರಾಗಿದ್ದರು. ಅಂದಿನ ಸಂದರ್ಭದಲ್ಲಿ ಅಮರನಾಥ ಶೆಟ್ಟಿ ಎದುರು ಕರಾವಳಿ ಭಾಗದಲ್ಲಿ ಯಾವೊಬ್ಬ ರಾಜಕಾರಣಿಯೂ ಇರಲಿಲ್ಲ. ಸೋಲು, ಗೆಲುವು ಕಂಡರೂ, ಪಕ್ಷ ನಿಷ್ಠೆ ಅಮರನಾಥ ಶೆಟ್ಟಿ ಅವರು ಬಿಟ್ಟವರಲ್ಲ.

ಕಾಂಗ್ರೆಸ್, ಬಿಜೆಪಿಯಿಂದ ದೊಡ್ಡ ಮಟ್ಟದ ಆಫರ್ ಬಂದರೂ, ಪಕ್ಷ ಬಿಡಲ್ಲ. ಸತ್ತರೆ ಜನತಾ ಪಕ್ಷದಲ್ಲೇ ಸಾಯುವೆ ಎನ್ನುತ್ತಿದ್ದ ಅಪ್ಪಟ ರಾಜಕಾರಣಿ. ಹೀಗಾಗಿ ಜೆಡಿಎಸ್ ವರಿಷ್ಠ ದೇವೇಗೌಡರ ಆಪ್ತ ನಿಕಟವರ್ತಿಗಳಲ್ಲಿ ಒಬ್ಬರಾಗಿ ಉಳಿದಿದ್ದರು. ಮೂಡುಬಿದಿರೆ ಕ್ಷೇತ್ರದಲ್ಲಿ 1999ರ ಬಳಿಕ ನಾಲ್ಕು ಬಾರಿ ಸ್ಪರ್ಧಿಸಿದರೂ, ಜೆಡಿಎಸ್ಸಿಗೆ ನೆಲೆ ಇಲ್ಲದ ಕಾರಣ ಗೆಲುವು ಸಿಗಲಿಲ್ಲ. ಪಕ್ಷಕ್ಕೆ ನೆಲೆ ಇಲ್ಲದಿದ್ದರೂ ಸ್ವಂತ ವರ್ಚಸ್ಸಿನಿಂದ ಗೆದ್ದು ಕರಾವಳಿ ಭಾಗದಲ್ಲಿ ಜೆಡಿಎಸ್ ಪಕ್ಷಕ್ಕೆ ನೆಲೆ ತಂದುಕೊಟ್ಟಿದ್ದ ಕೀರ್ತಿ ಇವರದ್ದಾಗಿದೆ.

 

Sponsors

Related Articles

Leave a Reply

Your email address will not be published. Required fields are marked *

Back to top button