ಶೈಖುನಾ ಎಡಪ್ಪಾಲಂ ಮಹಮ್ಮೂದ್ ಮುಸ್ಲಿಯಾರ್ ನಿಧನ – ಕೆಸಿಎಫ್ ಒಮಾನ್ ಸಂತಾಪ…

ಒಮಾನ್: ಸಮಸ್ತ ಕೇರಳ ಜಂಇಯತುಲ್ ಉಲಮಾ ಸದಸ್ಯರು, ಕೊಡಗು ಜಿಲ್ಲಾ ಸಂಯುಕ್ತ ಜಮಾಅತ್ ಸಹಾಯಕ ಖಾಝಿ , ಸುನ್ನೀ ಜಂಇಯತುಲ್ ಉಲಮಾ ಕರ್ನಾಟಕ ಪ್ರಧಾನ ಕಾರ್ಯದರ್ಶಿ , ಕರ್ನಾಟಕ ಮುಸ್ಲಿಂ ಜಮಾಅತ್ ಉಪಾಧ್ಯಕ್ಷರು, ಪ್ರಮುಖ ವಿದ್ವಾಂಸರು , ಹಲವಾರು ಪಂಡಿತರನ್ನು ಸಮುದಾಯಕ್ಕೆ ಅರ್ಪಿಸಿದ ಶೈಖುನಾ ಅಲ್ ಹಾಜ್ ಎಡಪ್ಪಾಲಂ ಮಹಮ್ಮೂದ್ ಮುಸ್ಲಿಯಾರ್ ಅವರ ಮರಣವು ಅತೀವವಾಗಿ ದುಖಃವನ್ನುಂಟುಮಾಡಿದೆ, ಇವರ ನಿಧನಕ್ಕೆ ಕರ್ನಾಟಕ ಕಲ್ಚರಲ್ ಫೌಂಡೇಶನ್ ಒಮಾನ್ ರಾಷ್ಟ್ರೀಯ ಸಮಿತಿಯು ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ.
ಮರ್ಕಝುಲ್ ಹಿದಾಯಾ ಕೊಡಗು ಕೊಟ್ಟುಮುಡಿ ಅಧ್ಯಕ್ಷರು , ತಮ್ಮ ಜೀವನವನ್ನು ದೀನಿಗಾಗಿ ಮೀಸಲಿಟ್ಟ, ಅಪಾರ ಪಾಂಡಿತ್ಯವನ್ನು ಕರಗತ ಮಾಡಿಕೊಂಡಿದ್ದ ಉಸ್ತಾದ್ ರವರ ಅಗಲಕುವಿಕೆಯು ಸಮುದಾಯಕ್ಕೆ ಮತ್ತು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅಲ್ಲಾಹನು ಅವರ ಪರಲೋಕ ಜೀವನವನ್ನು ವಿಜಯ ಗೊಳಿಸಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಕರ್ನಾಟಕ ಕಲ್ಚರಲ್ ಫೌಂಡೇಶನ್ ಒಮಾನ್ ರಾಷ್ಟ್ರೀಯ ಸಮಿತಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Sponsors

Related Articles

Back to top button