ಪಿಎಂ ವಿಶ್ವ ಕಮ೯ ಯೋಜನೆಯ ಮಾಹಿತಿ…

ಬಂಟ್ವಾಳ: ಕೇಂದ್ರ ಸರ್ಕಾರದ ಪಿಎಂ ವಿಶ್ವ ಕಮ೯ ಯೋಜನೆಯ ಮಾಹಿತಿಯನ್ನು ಬಾಳ್ತಿಲ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಬಿ.ಕೆ ಅಣ್ಣುಪೂಜಾರಿ ಯವರ ಮುಂದಾಳುತ್ವ ದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಿ. ಎಸ್. ಸಿ ಪ್ರತಿನಿಧಿ ಪುಷ್ಪ ರಾಜ್ ಕೊಂಗಲಾಯಿ ರವರು ದಾಸಕೋಡಿ ಅಂಗನವಾಡಿಯಲ್ಲಿ ಸ್ರೀಶಕ್ತಿ ಸದಸ್ಯರಿಗೆ ನೀಡಿದರು.
ಅಧ್ಯಕ್ಷ ರು ಗ್ರಾಮದ ಎಲ್ಲಾ ಜನರಿಗೆ ನಮ್ಮ ಕೇಂದ್ರ ಸರ್ಕಾರ ದ ಸೌಲಭ್ಯ ಸರಿಯಾದ ರೀತಿಯಲ್ಲಿ ಬಳಕೆ ಮಾಡಲು ನಾವು ನೀವು ಒಟ್ಟಾಗಿ ಸ್ಪಂದಿಸಿ ದಾಗ ನಮ್ಮ ಕೇಂದ್ರ ಸರ್ಕಾರದ ಅನುದಾನ ಈ ಯೋಜನೆ ಮೂಲಕ ಕಟ್ಟ ಕಡೆಯ ವ್ಯಕ್ತಿಗೆ ಕೂಡ ತಲುಪುತ್ತದೆ. ಪ್ರತಿ ಕುಟುಂಬಕ್ಕೆ ಒಂದು ಉದ್ಯೋಗ ಕಲ್ಪಿಸುವ ರೀತಿಯಲ್ಲಿ ನಮ್ಮ ಕೇಂದ್ರ ಸರ್ಕಾರದ ಪ್ರಧಾನಿ ನರೇಂದ್ರಮೋದಿ ಯವರ ಕನಸು ನನಸಾಗುವು ದರಲ್ಲಿಎರಡು ಮಾತಿಲ್ಲಎಂದು ಅಧ್ಯಕ್ಷರು ಹೇಳಿದರು.

Related Articles

Back to top button