ಶ್ರೀ ಬಾಲ ಗಣಪತಿ ದೇವಸ್ಥಾನ ಅನ್ನಪಾಡಿ – ಸಾಂಸ್ಕೃತಿಕ ಕಾರ್ಯಕ್ರಮ…

ಬಂಟ್ವಾಳ: ಶ್ರೀ ಬಾಲ ಗಣಪತಿ ದೇವಸ್ಥಾನ ಅನ್ನಪಾಡಿ ಸಜೀಪ ಮೂಡ ಇದರ ದ್ವಿತೀಯ ವಾರ್ಷಿಕೋತ್ಸವ ಹಾಗೂ ಜಾತ್ರಾ ಮಹೋತ್ಸವ ಅಂಗವಾಗಿ ಜರಗಿದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿಶ್ವ ಭಾರತಿ ಯಕ್ಷ ಸಂಜೀವಿನಿ(ರಿ) ಮಡಿಪು ಇವರಿಂದ ವಾಲಿ ಮೋಕ್ಷ ಯಕ್ಷಗಾನ ತಾಳಮದ್ದಳೆ ಶ್ರೀ ಪ್ರಶಾಂತ್ ಹೊಳ್ಳ ನೇತೃತ್ವದಲ್ಲಿ ಜರಗಿತು.
ಕೆ ಗೋವಿಂದ ಭಟ್, ಜಿ.ಕೆ ನಾವಡ, ಗುಂಡ್ಯಡ್ಕ ಈಶ್ವರ ಭಟ್, ರಾಮದಾಸ್ ವಗೆನಾಡು, ಕುಶಲ ಮುಡಿಪು, ಮಾಸ್ಟರ್ ಅದ್ವೈತ್ ಕಲಾವಿದರಾಗಿ ಭಾಗವಹಿಸಿದರು.
ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಯಶವಂತ ದೇರಾಜೆ ಗುತ್ತು, ಪ್ರೇಮ ಜಿ ಶೆಟ್ಟಿ, ವಿಶ್ವನಾಥ, ಜಯಪ್ರಕಾಶ್, ರಮೇಶ, ಮನೋಜ್, ದೇವದಾಸ, ಲಿಂಗಪ್ಪ ಮೊದಲಾದವರು ಉಪಸ್ಥಿತರಿದ್ದರು.