ಸುಳ್ಯ ಹವ್ಯಕ ವಲಯದ ಸಪ್ಟೆಂಬರ್ ತಿಂಗಳ ಮಾಸಿಕ ಶಾಸನತಂತ್ರ ಸಭೆ…
ಸುಳ್ಯ: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳು ರಾಮಚಂದ್ರಪುರ ಮಠ ಇವರ ಮಾರ್ಗದರ್ಶನದಲ್ಲಿ ಕಾರ್ಯಾಚರಿಸುತ್ತಾ ಶಾಸನ ತಂತ್ರದ ಕಾರ್ಯ ಯೋಜನೆಯಂತೆ ಸುಳ್ಯ ಹವ್ಯಕ ವಲಯದ ಪದಾಧಿಕಾರಿಗಳ ಮಾಸಿಕ ಸಭೆಯು ಸುಳ್ಯ ವಲಯದ ಸರಳಿಕುಂಜ ದಲ್ಲಿರುವ ಧರ್ಮಾರಣ್ಯದಲ್ಲಿ ಸೆ. 6 ರಂದು ವಲಯದ ಅಧ್ಯಕ್ಷರಾದ ಈಶ್ವರ ಕುಮಾರ್ ಉಬರಡ್ಕ ಇವರ ನೇತೃತ್ವದಲ್ಲಿ ನಡೆಯಿತು.
ಧ್ವಜಾರೋಹಣ, ದೀಪೋಜ್ವಲನ, ಶಂಖನಾದ, ಗುರುವಂದನೆ ಹಾಗೂ ಗೋ ಸ್ತುತಿಯೊಂದಿಗೆ ಸಭಾ ಕಾರ್ಯಕ್ರಮವು ಪ್ರಾರಂಭವಾಯಿತು.ವಿ.ವಿ.ವಿ.ಯ ನಿರ್ದೇಶಕರಾದ ಪ್ರೊ.ಟಿ. ಕೃಷ್ಣ ಭಟ್ ಧ್ವಜಾರೋಹಣ ನಡೆಸಿದರು. ವಲಯದಲ್ಲಿ ಅಕಾಲಿಕ ಮರಣ ಹೊಂದಿದವರಿಗೆ ಸಂತಾಪ ಸೂಚಿಸಿ ರಾಮತಾರಕ ಮಂತ್ರ ಜಪಿಸಲಾಯಿತು.ವಲಯದ ಕಾರ್ಯದರ್ಶಿಯಾದ ವಿಷ್ಣು ಕಿರಣ ನೀರಬಿದಿರೆ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿ ಗತ ಸಭೆಯ ವರದಿ ನೀಡಿ ಸಭಾ ನಿರ್ವಹಣೆ ಮಾಡಿದರು. ಕೋಶಾಧಿಕಾರಿಯಾದ ಸರವು ಈಶ್ವರ ಭಟ್ ಲಕ್ಷ್ಮೀ ಖಾತೆಯ ಲೆಕ್ಕ ಪತ್ರ ಮಂಡಿಸಿದರು.ವಲಯ ಪದಾಧಿಕಾರಿಗಳು ವಿಭಾಗವಾರು ವರದಿ ಮಂಡಿಸಿದರು.
ವಿ.ವಿ.ವಿ.ಯ ನಿರ್ದೇಶಕರಾದ ಪ್ರೊ.ಟಿ. ಕೃಷ್ಣ ಭಟ್ ವಿವಿವಿ ಬಗ್ಗೆ ಮಾಹಿತಿಯನ್ನು ನೀಡಿದರು.ಬಳಿಕ ಕಾರ್ಯದರ್ಶಿಗಳಿಂದ ಸಂಘಟನೆಯ ಕಾರ್ಯಸೂಚಿ ವಿಷಯ ಮಂಡನೆಯಾಗಿ ಮಂಡಲದ ಸುತ್ತೋಲೆಗಳ ಬಗ್ಗೆ ವಿವರಣೆ ಸಮಾಲೋಚನೆ ನಡೆಯಿತು.
ವಲಯ ಅಧ್ಯಕ್ಷರಾದ ಈಶ್ವರ ಕುಮಾರ ಉಬರಡ್ಕ ಅವರು ಅಧ್ಯಕ್ಷತೆ ನೆಲೆಯಲ್ಲಿ ಮಾತನಾಡಿದರು.
ವಲಯದ 7 ಪದಾಧಿಕಾರಿಗಳು, 5 ಗುರಿಕಾರರು ಮತ್ತು 3 ಹವ್ಯಕ ಬಂಧುಗಳು ಸೇರಿದಂತೆ ಸುಮಾರು 15 ಜನ ಗುರು ಭಕ್ತರು ಹಾಜರಿದ್ದರು.
ರಾಮ ತಾರಕ ಜಪ, ಶಾಂತಿ ಮಂತ್ರ ದೊಂದಿಗೆ ಧ್ವಜಅವರೋಹಣ, ಶಂಖನಾದವಾಗಿ ಸಭೆಯು ಮುಕ್ತಾಯವಾಯಿತು.