ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ , ಬಂಟ್ವಾಳ ತಾಲೂಕು ಸ್ತ್ರೀ ಶಕ್ತಿ ಒಕ್ಕೂಟ- ವಾರ್ಷಿಕ ಮಹಾಸಭೆ…

ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ , ತಾಲೂಕು ಸ್ತ್ರೀ ಶಕ್ತಿ ಒಕ್ಕೂಟ (ರಿ.) ಬಂಟ್ವಾಳ ಇದರ ವಾರ್ಷಿಕ ಮಹಾ ಸಭೆ ಬಿಸಿರೋಡಿನ ಸ್ತ್ರೀ ಶಕ್ತಿ ಸಭಾಭವನದಲ್ಲಿ ಸಂಘದ ಅಧ್ಯಕ್ಷೆ ಸುಧಾ ವಿ.ಪಿ.ಅವರ ಅಧ್ಯಕ್ಷ ತೆಯಲ್ಲಿ ನಡೆಯಿತು.
ಮುಖ್ಯ ಅತಿಥಿ ಬಂಟ್ವಾಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಸಿ.ಡಿ.ಪಿ.ಒ ಗಾಯತ್ರಿ ಕಂಬಳಿ ಸಂಘದ ಜವಬ್ದಾರಿ ಗಳ ಬಗ್ಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ 2022-23 ನೇ ಸಾಲಿನ ನೂತನ ಪಧಾದಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷ ರಾಗಿ ಸುನೀತಾ ಶೆಟ್ಟಿ ಅರಳ, ಉಪಾಧ್ಯಕ್ಷೆ ಪದ್ಮಾವತಿ ಮಾಣಿ, ಕಾರ್ಯದರ್ಶಿ ವಾರಿಜ,ಹಾಗೂ ಹತ್ತು ಜನ ಸದಸ್ಯ ರನ್ನು ಒಳಗೊಂಡ ನೂತನ ಸದಸ್ಯರ ಆಯ್ಕೆ ನಡೆಯಿತು. ವಿಟ್ಲ ಸಿ‌.ಡಿ.ಪಿ.ಒ ಉಷಾ, ಸಹಾಯಕ ಶಿಶು ಯೋಜನಾಧಿಕಾರಿ ಶೀಲಾವತಿ , ಹಿರಿಯ ಮೇಲ್ವಿಚಾರಕರಾದ ಭಾರತಿ ಕುಂದರ್, ಮೇಲ್ವಿಚಾರಕಿಯರಾದ ಶಾಲಿನಿ, ಸವಿತ, ಗುಣವತಿ, ನೀತಾಕುಮಾರಿ,
ಒಕ್ಕೂಟದ ಉಪಾಧ್ಯಕ್ಷೆ ವಿಮಲ, ಕಾರ್ಯದರ್ಶಿ ಗೀತಾಜಯತೀರ್ಥ,ಕೋಶಾಧಿಕಾರಿ ಜಲಜಾಕ್ಷಿ, ಸದಸ್ಯ ರಾದ ಸುಜಾತ, ಹರಿಣಾಕ್ಷಿ, ವಿಶಾಲಾಕ್ಷಿ, ವಜ್ರ ರೈ, ಜ್ಯೋತಿ ಶೆಟ್ಟಿ, ಹೊನ್ನಮ್ಮ, ಎಮ್ಮಿ.ಡಿ.ಸೋಜ ಮತ್ತಿತರರು ಉಪಸ್ಥಿತರಿದ್ದರು.

Sponsors

Related Articles

Back to top button