ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಉಬರಡ್ಕ ಶಾಲೆಗೆ ಜಾರುಬಂಡಿ ಕೊಡುಗೆ…

ಸುಳ್ಯ: ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಕೊಡಗು ಜಿಲ್ಲಾ ಘಟಕದ ವತಿಯಿಂದ ನಡೆಯುವ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ 29 ನೇ ಅಭಿಯಾನ ಉಬರಡ್ಕ ಶಾಲೆಯಲ್ಲಿ ನಡೆಯಿತು.
ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ ಇದರ ಸಂಘಟಕರಾದ ಉನೈಸ್ ಪೆರಾಜೆ ಯ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕು ಶಿಕ್ಷಣಾಧಿಕಾರಿ ಮಹದೇವ್ ರವರು ಜಾರುಬಂಡಿ ಹಾಗೂ ಆಟೋಪಕರಣ ಸಾಮಾಗ್ರಿಗಳನ್ನು ಉದ್ಘಾಟಿಸಿದರು.
ಅಭಿಯಾನದ ಬಗ್ಗೆ ಉನೈಸ್ ಪೆರಾಜೆ ಯವರು ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಉಬರಡ್ಕ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರಶಾಂತ್, sdmc ಅಧ್ಯಕ್ಷ ನಾರಾಯಣ, ರಾಜೇಶ್ವರಿ, ಪುರುಷೋತ್ತಮ, ಧನಲಕ್ಷ್ಮಿ, ಪ್ರವೀಣ ಕುಮಾರಿ, ಚಂದ್ರ ಶೇಖರ್, ಚೈತ್ರ, ಪವಿತ್ರ, ಕೋಮಲ, ಚಂದ್ರಾವತಿ, ನಳಿನಾಕ್ಷಿ, ಸೀತಾನಂದ, ವಸಂತ, ದಿವ್ಯ ಲತಾ ಜಗದೀಶ್, ಚಿತ್ರವತಿ ವಿಮಲಾ, ಚಿತ್ರ ಲೇಖ ಹಾಗೂ ಪೋಷಕರು, ಶಾಲಾ ಮಕ್ಕಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಉನೈಸ್ ಪೆರಾಜೆ ಯವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ್ ರವರು ಸನ್ಮಾನ ಮಾಡಿ ಗೌರವಿಸಿದರು.

Sponsors

Related Articles

Back to top button