ನೇತ್ರಾವತಿ ಬಳಗ ಮಂಜಲ್ ಪಾದೆ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ…

ಬಂಟ್ವಾಳ:ನೇತ್ರಾವತಿ ಬಳಗ ಮಂಜಲ್ ಪಾದೆ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ವಠಾರದಲ್ಲಿ ನಡೆಯಿತು.
ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ದೀಪ ಬೆಳಗಿ ಉದ್ಘಾಟಿಸಿದರು. ಅರ್ಚಕ ಅಜಯ್ ಭಟ್, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಗಣೇಶ್ ಕುಲಾಲ್, ಪ್ರಮೀಳಾ ಗಟ್ಟಿ, ಪ್ರಮುಖರಾದ ನರೇಂದ್ರ ಆಳ್ವ, ಸುಕೇಶ್, ರಾಕೇಶ್, ಹೇಮಂತ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮಕ್ಕಳಿಗೆ, ಯುವಕರಿಗೆ ವಿವಿಧ ಆಟೋ ಸ್ಪರ್ಧೆಗಳನ್ನು ಹಮ್ಮಿ ಕೊಳ್ಳಲಾಯಿತು.