ಪೇರಡ್ಕ ಸರ್ವಧರ್ಮ ಸಮ್ಮೇಳನ -ಮಾನವೀಯ ಧರ್ಮವನ್ನು ಪಾಲಿಸಿ – ಪ್ರೊ| ಅನೀಸ್ ಕೌಸರಿ…
ಸುಳ್ಯ: ನಾವೆಲ್ಲರೂ ಭಾರತೀಯರು ಎಂಬ ಭಾವನೆಯಿಂದ ಇನ್ನೊಂದು ಧರ್ಮವನ್ನು ದ್ವೇಷ ಮಾಡದೆ ಪರಸ್ಪರ ಸೌಹಾರ್ಧತೆಯಿಂದ ಇದ್ದು ಮಾನವೀಯ ಧರ್ಮವನ್ನು ಪಾಲಿಸಿಕೊಂಡು ಬದುಕಬೇಕು. ನಾವು ಹಲವಾರು ಮಹನೀಯರ, ಆದರ್ಶ ಪುರುಷರ ಪ್ರತಿಮೆಗಳನ್ನು ಸ್ಥಾಪಿಸುತ್ತೇವೆ ಆದರೆ ಅವರ ಆದರ್ಶಗಳನ್ನು ಪಾಲಿಕೆ ಮಾಡುತ್ತಿಲ್ಲ ಎಂದು ರಾಜ್ಯ ಎಸ್.ಕೆ.ಎಸ್.ಎಸ್.ಎಫ್. ನ ರಾಜ್ಯಾಧ್ಯಕ್ಷ ಪ್ರೊ| ಅನೀಸ್ ಕೌಸರಿ ಹೇಳಿದರು.
ಅವರು ಫೆಬ್ರವರಿ 20 ರಂದು ಪೇರಡ್ಕ ತೆಕ್ಕಿಲ್ ಮಹಮ್ಮದ್ ಹಾಜಿ ವೇದಿಕೆಯಲ್ಲಿ ನಡೆದ ಇತಿಹಾಸ ಪ್ರಸಿದ್ಧ ವಲಿಯುಲ್ಲಾಹಿ ದರ್ಗಾ ಶರೀಫ್ ನ ಉರೂಸ್ ಕಾರ್ಯಕ್ರಮದ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಮುಖ್ಯ ಭಾಷಣಗಾರರಾಗಿ ಮಾತನಾಡಿದರು.
ಉದ್ಘಾಟಕರಾಗಿ ಆಗಮಿಸಬೇಕಾಗಿದ್ದ ರಾಜ್ಯ ಸಭಾ ಸದಸ್ಯರಾದ ಸಯ್ಯದ್ ನಾಸಿರ್ ಹುಸೈನ್ ರವರು ಅನಿವಾರ್ಯವಾಗಿ ಬರಲು ಅಸಾದ್ಯವಾದುದರಿಂದ ತಮ್ಮ ಮೊಬೈಲ್ ಸಂದೇಶದ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಟಿ.ಎಂ.ಶಹೀದ್ ರವರ ನಾಯಕತ್ವದಲ್ಲಿ ತಮ್ಮ ಪ್ರದೇಶದಲ್ಲಿ ಉತ್ತಮ ಅಭಿವೃದ್ಧಿ ಕೆಲಸಗಳು ಆಗುತ್ತಿದೆ. ತಾವೆಲ್ಲರೂ ಜಾತಿ ಮತ ಬೇಧವಿಲ್ಲದೆ ಮತ ಸೌಹಾರ್ಧತೆಯಿಂದ ಜೀವಿಸಿ ಉತ್ತಮ ಸಮಾಜವನ್ನು ನಿರ್ಮಿಸಲು ಕಂಕಣಬದ್ಧರಾಗಿರಬೇಕು ಮುಂದೆ ಯಾವುದಾದರು ಸಂದರ್ಭದಲ್ಲಿ ನಾನು ಬಂದು ತಮ್ಮೆಲ್ಲರನ್ನು ಭೇಟಿ ಮಾಡುತ್ತೇನೆ ಎಂದು ಶುಭ ಹಾರೈಸಿದರು.
ಸುಳ್ಯ ವಕೀಲ ಸಂಘದ ಅಧ್ಯಕ್ಷ ಎಂ. ವೆಂಕಪ್ಪ ಗೌಡ ಮಾತನಾಡಿ ನಾವು ಇಂತಹ ಸರ್ವ ಧರ್ಮ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಮೂಲಕ ಮತ ಸೌಹಾರ್ಧತೆಯ ಸಂದೇಶವನ್ನು ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯವನ್ನು ಮಾಡಬೇಕೆಂದರು.
ಸುಳ್ಯ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪಿ.ಸಿ.ಜಯರಾಮ ಮಾತನಾಡಿ ಈ ದೇಶದಲ್ಲಿ ನಾವೆಲ್ಲರು ಐಕ್ಯದಿಂದ ಬದುಕಬೇಕು ಎಂದರು. ಕಾರ್ಮಿಕ ಮುಖಂಡ ಕೆ.ಪಿ. ಜಾನಿ ಮಾತನಾಡಿ ಅಂದಿನ ಕಾಲಕ್ಕೆ ಹೋಲಿಸಿದರೆ ಧಾರ್ಮಿಕ ಸಂಸ್ಥೆಗಳು ಶಿಕ್ಷಣ ಸಂಸ್ಥೆಗಳು ಇಂದು 100 ಪಟ್ಟು ಹೆಚ್ಚಾದರು ಅಂದಿನ ಕಾಲದಲ್ಲಿದ್ದ ಸೌಹಾರ್ಧತೆ ಇದೀಗ ಮಾಯವಾಗಿದೆ ಎಂದರು. ಕೆ.ವಿ.ಜಿ. ಆರ್ಯುವೇದಿಕ್ ಕಾಲೇಜಿನ ಆಡಳಿತಾಧಿಕಾರಿ ಡಾ| ಲೀಲಾಧರ ಮಾತನಾಡಿ ನಮ್ಮ ಧರ್ಮವನ್ನು ಅರಿತು ಕೊಂಡು ಬಾಳುವುದರ ಜೊತೆಗೆ ಇನ್ನೊಂದು ಧರ್ಮವನ್ನು ಗೌರವಿಸಬೇಕೆಂದರು.
ಸಮಾರಂಭದ ಅಧ್ಯಕ್ಷತೆಯನ್ನು ಪೇರಡ್ಕ ಮಸೀದಿಯ ಗೌರವಾಧ್ಯಕ್ಷ ಹಾಗೂ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಟಿ.ಎಂ.ಶಹೀದ್ ತೆಕ್ಕಿಲ್ ವಹಿಸಿದರು. ಮುಖ್ಯ ಅತಿಥಿಗಳಾಗಿ ಸುಳ್ಯ ಗಾಂಧಿನಗರ ಮಸೀದಿಯ ಅಧ್ಯಕ್ಷ ಹಾಜಿ .ಕೆ.ಎಂ. ಮುಸ್ತಾಫ, ಮಾಜಿ ನಗರ ಪಂಚಾಯತ್ ಅಧ್ಯಕ್ಷ ಎಸ್. ಸಂಶುದ್ಧಿನ್, ಸಹನಾ ಗ್ರೂಫ್ ನ ಪಿ.ಎ. ಮಹಮ್ಮದ್, ಕಲ್ಲುಗುಂಡಿ ಜುಮಾ ಮಸೀದಿ ಖತೀಬರಾದ ನಹೀಮ್ ಫೈಝಿ, ಅಧ್ಯಕ್ಷ ಹಾಜಿ ಹೆಚ್.ಎ. ಅಬ್ಬಾಸ್, ಅರಂಬೂರು ಜುಮಾ ಮಸೀದಿ ಖತೀಬರಾದ ಮೂಸಾ ಹಾರೀಸ್ ಮಖ್ಹೂಮಿ. ಪೇರಡ್ಕ ಜಮಾಅತ್ ಅಧ್ಯಕ್ಷ ಆಲಿಹಾಜಿ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಅಬ್ದುಲ್ ಗಫೂರ್, ಪೇರಡ್ಕ ಮಸೀದಿಯ ಮಾಜಿ ಅಧ್ಯಕ್ಷ ಟಿ.ಎಂ.ಬಾಬಾ ಹಾಜಿ ತೆಕ್ಕಿಲ್, ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಉಮ್ಮರ್ ಬೀಜದ ಕಟ್ಟೆ, ಸಂಪಾಜೆ ವರ್ತಕರ ಸಂಘದ ಅಧ್ಯಕ್ಷ ಯು.ಬಿ. ಚಕ್ರಪಾಣಿ, ಗ್ರಾ.ಪಂ. ಸದಸ್ಯರಾದ ಜಗದೀಶ್ ರೈ ಕಲ್ಲುಗುಂಡಿ, ಎಸ್.ಕೆ. ಹನೀಫ್ ಸಂಪಾಜೆ, ಡಾ| ಬಶೀರ್ ಆರ್.ಬಿ. ನ್ಯಾಯವಾದಿಗಳಾದ ಮೂಸಾ ಪೈಬಂಚ್ಚಾಲ್, ಧರ್ಮಪಾಲ ಕೊಯಿಂಗಾಜೆ, ಕೊಡಗು ಜಿಲ್ಲೆ ಸಾಮಾಜಿಕ ಜಾಲತಾಣದ ಸೂರಜ್ ಹೊಸೂರು, ರಹೀಂ ಬೀಜದಕಟ್ಟೆ, ಎ.ಕೆ.ಹಸೈನಾರ್ ಕಲ್ಲುಗುಂಡಿ, ಎಸ್.ಕೆ.ಎಸ್.ಎಸ್.ಎಫ್. ಅಧ್ಯಕ್ಷ ರಿಯಾಝ್ ಕಲ್ಲುಗುಂಡಿ, ಅರಂತೋಡು ಜಮಾಅತ್ ಮಾಜಿ ಅಧ್ಯಕ್ಷ ಹಾಜಿ ಅಹಮ್ಮದ್ ಕುಂಞ ಪಠೇಲ್, NSUI ಅಧ್ಯಕ್ಷ ಕೀರ್ತನ್ ಗೌಡ ಕೊಡಪಾಲ, ಮಾಜಿ ಉಪಾಧ್ಯಕ್ಷ ಪಾಂಡಿ ಅಬ್ಬಾಸ್, ಪ್ರಗತಿಪರ ಕೃಷಿಕ ದಿನಕರ ಸಣ್ಣಮನೆ, ಹನೀಫ್ ಮೊಟ್ಟೆಂಗಾರ್, ಹಕೀಂ ಮೊಟ್ಟೆಂಗಾರ್, ಪಿ.ಕೆ. ಉಮ್ಮರ್, ಕೆ.ಎಂ. ಅಶ್ರಫ್ ಕಲ್ಲುಗುಂಡಿ, ತಾಜುದ್ಧೀನ್ ಟರ್ಲಿ ಮೊದಲಾದವರು ಉಪಸ್ಥಿತರಿದ್ದರು.
ಸಂಪಾಜೆ ಗ್ರಾ.ಪಂ. ಅಧ್ಯಕ್ಷ ಜಿ.ಕೆ. ಹಮೀದ್ ಸ್ವಾಗತಿಸಿ, ಜಮಾಅತ್ ಕಾರ್ಯದರ್ಶಿ ಹಾಜಿ ಟಿ.ಎಂ. ಅಬ್ದುಲ್ ರಜಾಕ್ ವಂದಿಸಿದರು.