ದ.ಕ – ಪ್ರತಿಯೊಬ್ಬರಿಗೂ ಕೋವಿಡ್ ತಪಾಸಣೆ ಕಡ್ಡಾಯ…
ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅದನ್ನು ತಡೆಯುವ ಅಂಗವಾಗಿ ಜಿಲ್ಲೆಯ ಒಟ್ಟು 224 ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಸ್ಥರನ್ನು ಕೋವಿಡ್ ತಪಾಸಣೆಗೆ ಒಳಪಡುವಂತೆ ದ.ಕ. ಜಿ. ಪಂ ಆದೇಶಿಸಿದೆ.
ತಾಲೂಕುಗಳಲ್ಲಿರುವ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಆಯಾಯ ಗ್ರಾಮಸ್ಥರು ಬಂದು ಕೋವಿಡ್ ತಪಾಸಣೆಗೆ ಒಳಗಾಗಬೇಕಿದೆ. ಈ ಸಂಬಂಧ ಎಲ್ಲಾ ಜವಾಬ್ದಾರಿಗಳನ್ನು ಆಯಾಯ ತಾಲೂಕು, ಹೋಬಳಿಯ ವೈದ್ಯಾಧಿಕಾರಿಗಳೇ ವಹಿಸಿಕೊಳ್ಳಬೇಕೆಂದು ಜಿ.ಪಂ. ಆದೇಶದಲ್ಲಿ ತಿಳಿಸಿದೆ. ಸೆ.28 ರಿಂದ ತಪಾಸಣೆ ಆರಂಭವಾಗಲಿದೆ.