ಮಂಗಳೂರಿನ ಬೋಳೂರಿನಲ್ಲಿ ಮತ್ತೊಂದು ಕೊರೊನಾ ಪ್ರಕರಣ ಪತ್ತೆ….

ಮಂಗಳೂರು: ಮಂಗಳೂರಿನ ಬೋಳೂರು ಪ್ರದೇಶದ ಮತ್ತೋರ್ವ ವ್ಯಕ್ತಿಗೆ ಕೊರೊನಾ ಸೋಂಕು ತಾಗಿರುವುದು ಇಂದು ದೃಢವಾಗಿದೆ.

ಮಂಗಳೂರಿನ ಮಹಾನಗರ ಪಾಲಿಕೆ ವ್ಯಾಪ್ತಿಯ ಬೋಳೂರಿನ 51 ವರ್ಷದ ಪುರುಷನಿಗೆ ಸೋಂಕು ದೃಢವಾಗಿದೆ. ಈತನಿಗೆ ಸೋಂಕಿತ 536ರ ವ್ಯಕ್ತಿಯಿಂದ ಸೋಂಕು ಹರಡಿರುವುದು ಖಚಿತವಾಗಿದೆ.

ಬೋಳೂರಿನ 58 ವರ್ಷದ ಮಹಿಳೆ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಕಳೆದ 15 ದಿನಗಳ ಹಿಂದೆ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದರು. ಇಲ್ಲಿ ಪಿ-501 ಸಂಪರ್ಕಕ್ಕೆ ಬಂದಿದ್ದ ಇವರಿಗೆ ಸೋಂಕು ತಗುಲಿರುವುದು ಖಚಿತವಾಗಿತ್ತು. ಇದಾದ ಬಳಿಕ ಮೇ 1 ರಂದು ಮಹಿಳೆಯ 62 ವರ್ಷದ ಪತಿಯಲ್ಲೂ ಸೋಂಕು ದೃಢಪಟ್ಟಿತ್ತು.

ಇವರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಬೋಳಾರಿನ ನಿವಾಸಿ, 51 ವರ್ಷದ ವ್ಯಕ್ತಿಗೂ ಇದೀಗ ಸೋಂಕು ಬಾಧಿಸಿದ್ದು, ಒಂದೇ ಪ್ರದೇಶದಲ್ಲಿ ಮೂವರು ಸೋಂಕು ಪೀಡಿತರಿದ್ದಾರೆ.

ಇನ್ನು ರಾಜ್ಯದಲ್ಲಿ ಇಂದು ಎಂಟು ಹೊಸ ಸೋಂಕು ಪ್ರಕರಣಗಳು ದೃಢವಾಗಿದೆ. ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 659ಕ್ಕೆ ಏರಿಕೆಯಾಗಿದೆ.

Sponsors

Related Articles

Leave a Reply

Your email address will not be published. Required fields are marked *

Back to top button