ಭಾರತದಲ್ಲಿ 15 ಕೋಟಿ ಮಂದಿಗೆ ಕೋವಿಡ್-19 ಲಸಿಕೆ…
ನವದೆಹಲಿ: ಭಾರತದಲ್ಲಿ ಈವರೆಗೆ 15 ಕೋಟಿ ಮಂದಿಗೆ ಕೋವಿಡ್-19 ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಏ.29 ರಂದು ಬೆಳಿಗ್ಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ 22,07,065 ಸೆಷನ್ ಗಳಲ್ಲಿ 15,00,20,648 ಲಸಿಕೆ ಡೋಸ್ ಗಳನ್ನು ನೀಡಲಾಗಿದೆ. ಈ ಪೈಕಿ 93,67,520 ಆರೋಗ್ಯ ಕಾರ್ಯಕರ್ತರು ಮೊದಲ ಡೋಸ್ ಗಳನ್ನು ಪಡೆದಿದ್ದರೆ 61,47,918 ಮಂದಿ ಆರೋಗ್ಯ ಕಾರ್ಯಕರ್ತರು ಎರಡೂ ಡೋಸ್ ಗಳನ್ನು ಪಡೆದಿದ್ದಾರೆ. 1,23,19,903 ಮುನ್ನೆಲೆ ಕಾರ್ಯಕರ್ತರು ಮೊದಲ ಡೋಸ್ ನ್ನು ಪಡೆದಿದ್ದರೆ, 66,12,789 ಮಂದಿ ಎರಡನೇ ಡೋಸ್ ನ್ನು ಪಡೆದಿದ್ದಾರೆ.
60 ವರ್ಷದ ಮೇಲ್ಪಟ್ಟ 5,14,99,834 ಮಂದಿಗೆ ಮೊದಲ ಡೋಸ್ ನೀಡಲಾಗಿದ್ದರೆ, ಎರಡೂ ಡೋಸ್ ಗಳನ್ನು ಇದೇ ವಿಭಾಗದ 98,92,380 ಮಂದಿ ಸ್ವೀಕರಿಸಿದ್ದಾರೆ. 45-60 ವರ್ಷದವರೆಗಿನ 5,10,24,886 ಮಂದಿಗೆ ಮೊದಲ ಡೋಸ್ ನೀಡಲಾಗಿದ್ದರೆ ಎರಡೂ ಡೋಸ್ ಗಳನ್ನು 31,55,418 ಮಂದಿಗೆ ನೀಡಲಾಗಿದೆ.