ಸುಳ್ಯ ತಾಲೂಕು ಜಮೀಯ್ಯತ್ತುಲ್ ಫಲಾಹ್ ವತಿಯಿಂದ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ, ಜಾಗೃತಿ ಮತ್ತು ಮಾಹಿತಿ ಕಾರ್ಯಾಗಾರ…

ಸುಳ್ಯ: ಕರ್ನಾಟಕ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಪುರಸ್ಕೃತ ದ. ಕ. ಮತ್ತು ಉಡುಪಿ ಜಿಲ್ಲೆಗಳ ಜಮೀಯ್ಯತ್ತುಲ್ ಸಂಸ್ಥೆಯ ಫಲಾಹ್ ಸುಳ್ಯತಾಲೂಕು ಘಟಕದ ವತಿಯಿಂದ ಸ್ಕಾಲರ್ಷಿಪ್ ವಿತರಣೆ, ಪ್ರತಿಭಾ ಪುರಸ್ಕಾರ ಮತ್ತು ಮಾದಕ ವಸ್ತುಗಳ ವಿರೋಧಿ ಆಂದೋಲನ ಜಾಗೃತಿ ಉಪನ್ಯಾಸ ಮತ್ತು ವಿದ್ಯಾರ್ಥಿ ಗಳಿಗೆ ಶೈಕ್ಷಣಿಕ ಸೌಲಭ್ಯಗಳ ಮಾಹಿತಿ ಕಾರ್ಯಾಗಾರ ಸುಳ್ಯ ಅನ್ಸಾರಿಯಾ ಗಲ್ಫ್ ಆಡಿಟೋರಿಯಂನಲ್ಲಿ ಜರಗಿತು.
ಅಧ್ಯಕ್ಷತೆಯನ್ನು ಸುಳ್ಯ ಘಟಕದ ಅಧ್ಯಕ್ಷ ಮೂಸ ಕುoಞ ಪೈoಬಚಾಲ್ ವಹಿಸಿದ್ದರು. ಸ್ಕಾಲರ್ಷಿಪ್ ವಿತರಣೆಗೆ ಚಾಲನೆ ನೀಡಿದ ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಮಂಡಳಿ ಅಧ್ಯಕ್ಷ ಟಿ. ಎಂ. ಶಹೀದ್ ಅವರು ಮಾತನಾಡಿ ಶಿಕ್ಷಣ ದಿಂದ ಮಾತ್ರ ಯಾವುದೇ ಸಮುದಾಯ ಅಭಿವೃದ್ಧಿ ಕಾಣಲು ಸಾಧ್ಯ, ಕಲಿತು ಉದ್ಯೋಗ ಪಡೆದು ಸಂಪಾದನೆಗೆ ತೊಡಗಿದ ಮೇಲೆ ಇನ್ನೊಬ್ಬರನ್ನು ಪ್ರೋತ್ಸಾಹಿಸುವ ಮನೋಭಾವ ಬೆಳೆಸಬೇಕು ಸಮಾರಂಭಗಳ ಉದ್ದೇಶವೇ ಅದು ಎಂದರು.
ಕಾರ್ಯಕ್ರಮವನ್ನು ದ. ಕ. ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ ಎಸ್. ಮಹಮ್ಮದ್ ಉದ್ಘಾಟಿಸಿದರು.
ಪ್ರತಿಭಾ ಪುರಸ್ಕಾರವನ್ನು ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ) ಅಧ್ಯಕ್ಷ ಕೆ. ಎಂ. ಮುಸ್ತಫ ನೆರವೇರಿಸಿದರು.
ಮಾದಕ ವ್ಯಸನ, ಮಾರಾಟ, ಪ್ರೋತ್ಸಾಹ ಶಿಕ್ಷರ್ಹ ಅಪರಾಧ ಇದರ ಬಗ್ಗೆ ಕಾನೂನಿನ ಅರಿವು ನೀಡಿದ ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ಮಾತನಾಡಿ ವಿದ್ಯಾರ್ಥಿ ಸಮುದಾಯ ಯಾವುದೇ ಸಮಾಜ ವಿರೋಧಿ ಚಟುವಟಿಕೆ ಗಳಲ್ಲಿ ಭಾಗಿಯಾಗದೆ ಪರಿಶುದ್ಧ ಜೀವನ ಸಂಸ್ಕಾರಯುತ ಶಿಕ್ಷಣ ಪಡೆದು ರಾಷ್ಟ್ರ ದ ಅಭಿವೃದ್ಧಿ ಗೆ ಪೂರಕರಾಗೋಣ ಎಂದು ಕರೆ ನೀಡಿದರು.
ಮಾದಕ ದ್ರವ್ಯ ಗಳ ಭೀಕರತೆ, ಶಿಕ್ಷಣ ದ ಮೇಲೆ ಅದು ಬೀರುವ ಪ್ರಭಾವ ದ ಬಗ್ಗೆ ಸುಳ್ಯ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯ ಮುಖ್ಯ ಶಿಕ್ಷಕರಾದ ಇಲ್ಯಾಸ್. ಕೆ. ಕಾಶಿಪಟ್ಣ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಾಮೊಟ್ಟೆ, ಅನ್ಸಾರಿಯ ಎಜುಕೇಶನ್ ಸೆಂಟರ್ ಅಧ್ಯಕ್ಷ ಹಾಜಿ ಕೆ. ಎಂ. ಅಬ್ದುಲ್ ಮಜೀದ್ ಜನತಾ, ಕ್ಷೇತ್ರ ಶಿಕ್ಷಣ ಸಂಪನ್ಮೂಲ ಕೇಂದ್ರದ ಶ್ರೀಮತಿ ಧನಲಕ್ಷ್ಮಿ, ಸುಳ್ಯ ಅಲ್ಪ ಸಂಖ್ಯಾತರ ಸಹಕಾರಿ ಸಂಘದ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಎಲಿ ಮಲೆ, ಜೆಎಫ್ ಉಪಾಧ್ಯಕ್ಷ ಹಾಜಿ ಇಬ್ರಾಹಿಂ ಕತ್ತರ್, ಕಾರ್ಯದರ್ಶಿ ಹಸೈನಾರ್ ವಳಲoಬೆ, ಖಜಾಂಚಿ ಶಾಫಿ ಕುತ್ತಾಮೊಟ್ಟೆ, ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಸದಸ್ಯ ಅಬೂಬಕ್ಕರ್ ಅಡ್ವೋಕೇಟ್, ಮಾಜಿ ಅಧ್ಯಕ್ಷರು ಗಳಾದ ಹೆಚ್. ಎ. ಅಬ್ಬಾಸ್ ಕಲ್ಲುಗುಂಡಿ, ಉಪಾಧ್ಯಕ್ಷ ಅಬ್ದುಲ್ ಖಾದರ್ ಉಪಸ್ಥಿತರಿದ್ದರು.
ಅಮೀರ್ ಕುಕ್ಕುಂಬಳ, ಕೆ. ಬಿ. ಅಬ್ದುಲ್ ಮಜೀದ್ ಕಾರ್ಯಕ್ರಮ ನಿರೂಪಿಸಿದರು.

whatsapp image 2025 12 22 at 9.16.24 am

Related Articles

Back to top button