ಸಂಸ್ಕಾರ ಭಾರತಿ ಸಂಚಾಲಕರಾಗಿ ಡಾ.ಗೋವರ್ಧನ ರಾವ್ ಸೂರ್ಯವಂಶ…

ಬಂಟ್ವಾಳ: ಸಂಸ್ಕಾರ ಭಾರತಿ ಬಂಟ್ವಾಳ ಇದರ ಸಂಚಾಲಕರಾಗಿ ಬಿ.ಸಿ.ರೋಡು ಕೈಕಂಬದ ಸೂರ್ಯವಂಶ ಪ್ರತಿಷ್ಠಾನದ ಸಂಸ್ಥಾಪಕ ಡಾ. ಗೋವರ್ಧನ ರಾವ್ ಸೂರ್ಯವಂಶ ಆಯ್ಕೆಯಾಗಿದ್ದಾರೆ.
ಶ್ರೀ ರಕ್ತೇಶ್ವರಿ ದೇವಸ್ಥಾನ ಬಿ.ಸಿ.ರೋಡಿನಲ್ಲಿ ಗುರುವಾರ ನಡೆದ ಪ್ರಥಮ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಸಹಸಂಚಾಲಕರಾಗಿ ಜಯಾನಂದ ಪೆರಾಜೆ, ಶಂಕರನಾರಾಯಣ ಹೊಳ್ಳ ಸರಪಾಡಿ ಯವರಿಗೆ ತಾತ್ಕಾಲಿಕ ಜವಾಬ್ದಾರಿ ನೀಡಿ ಮುಂದಕ್ಕೆ ಪೂರ್ಣ ಪ್ರಮಾಣದ ತಾಲೂಕು ಸಮಿತಿಯನ್ನು ರಚಿಸುವುದಾಗಿ ಸಭೆಯಲ್ಲಿ ನಿರ್ಣಯಿಸಲಾಯಿತು. .
ಸಂಸ್ಕಾರ ಭಾರತಿ ಕರ್ನಾಟಕ ಪ್ರಾಂತ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ ಸಂಸ್ಕಾರ ಭಾರತಿಯ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಸಂಸ್ಕಾರ ಭಾರತಿಯು ವಿವಿಧ ಕಲೆಗಳ ಕಲಾವಿದರಿಗೆ ಪ್ರೋತ್ಸಾಹ ನೀಡುವ ಹಾಗೂ ಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಭಾರತೀಯ ಸಂಸ್ಕೃತಿಯ ತಿಳಿವು ಮತ್ತು ಜಾಗೃತಿಗಾಗಿ ಸಂಘಟನೆಯು ಕೆಲಸಮಾಡುತ್ತಿದೆ ಎಂದು ತಿಳಿಸಿದರು.
ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಸರಪಾಡಿ ಅಶೋಕ ಶೆಟ್ಟಿ , ವಿಭಾಗ ಸಂಚಾಲಕ ಮಾಧವ ಭಂಡಾರಿ, ಮಂಜು ವಿಟ್ಲ , ಸೀತಾರಾಮ ಭಟ್ ಪೆರಾಜೆ, ಡಾ. ವಾರಿಜ ನಿರ್ಬೈಲು ಮಂಚಿ , ರಾಜರಾಮ ನಾಯಕ್ ಸಲಹೆ ಸೂಚನೆಗಳನ್ನು ನೀಡಿದರು. ಗುರು ಪೂಜಾ ಉತ್ಸವವನ್ನು ಹಿರಿಯ ಕಲಾವಿದರನ್ನು ಗುರುತಿಸಿ ಗೌರವಿಸುವ ಮೂಲಕ ನಡೆಸುವುದೆಂದು ತೀರ್ಮಾನಿಸಲಾಯಿತು.

Related Articles

Back to top button