ಬಂಟ್ವಾಳ – ಧ್ವನಿ ಬೆಳಕು ಸಂಯೋಜಕ ಒಕ್ಕೂಟ ರಿ. 9ನೇ ವಾರ್ಷಿಕ ಮಹಾಸಭೆ…
ವಿಕಲ ಚೇತನ ಮಕ್ಕಳಿಗೆ ಪುಸ್ತಕ ವಿತರಣೆ, ಕಾರ್ಮಿಕರಿಗೆ ವಿಮೆ, ಹಿರಿಯರಿಗೆ ಸನ್ಮಾನ...

ಬಂಟ್ವಾಳ :ಧ್ವನಿ ಬೆಳಕು ಸಂಯೋಜಕ ಒಕ್ಕೂಟ ರಿ. ಬಂಟ್ವಾಳ ತಾಲೂಕು ಇದರ 9ನೇ ವಾರ್ಷಿಕ ಮಹಾಸಭೆಯು ಬಂಟ್ವಾಳ ತಾಲೂಕಿನ ಅಧ್ಯಕ್ಷರಾದ ಧನ್ ರಾಜ್ ಶೆಟ್ಟಿ ಫರಂಗಿಪೇಟೆ ಇವರ ಅಧ್ಯಕ್ಷತೆಯಲ್ಲಿ ಬಿ ಸಿ ರೋಡ್ ಲಯನ್ಸ್ ಕ್ಲಬ್ ನಲ್ಲಿ ಜು22ರಂದು ನಡೆಯಿತು.
ಈ ಸಂದರ್ಭದಲ್ಲಿ ಒಕ್ಕೂಟದ ಹಿರಿಯ ಸದಸ್ಯರಿಗೆ ಸನ್ಮಾನ ಮತ್ತು ವೀಕಲ ಚೇತನಾ ಮಕ್ಕಳಿಗೆ ಪುಸ್ತಕ ವಿತರಿಸಲಾಯಿತು. ಎಲ್ಲಾ ಸದಸ್ಯರಿಗೂ ಅರೋಗ್ಯ ವಿಮೆ ಸೌಲಭ್ಯ ಹಾಗೂ ಕಾರ್ಮಿಕರ ವಿಮೆ ಮಾಡಲಾಯಿತು ಬಳಿಕ ಒಕ್ಕೂಟದ ಸದಸ್ಯರಿಗೆ ಒಳಾಂಗಣ ಕ್ರೀಡೆ ನಡೆಯಿತು.
ಧ್ವನಿವರ್ದಕ ಬಳಸುವ ಅವಧಿ ಕಡ್ಡಾಯವಾಗಿ ರಾತ್ರಿ 10.00 ಗಂಟೆ ಮುಗಿಸಬೇಕು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯಲ್ಲಿ ಒಕ್ಕೂಟದ ಕಾನೂನು ಸಲಹೆಗಾರದ ಜಯರಾಮ್ ರೈ ವಕೀಲರು, ಧ್ವನಿವರ್ದಕ ಮತ್ತು ದೀಪಾಲಂಕಾರ ಮಾಲಕರ ಜಿಲ್ಲಾ ಸಂಘ ಕಾರ್ಯದರ್ಶಿ ಮಹೇಶ್ ಬೊಳಾರು, ಕೋಶಾಧಿಕಾರಿ ಬೆನ್ಹಟ್ ಡಿ. ಸಿಲ್ಲ್ವ, ಬಂಟ್ವಾಳ ತಾಲೂಕು ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ಪೂಜಾರಿ, ಧ್ವನಿ ಬೆಳಕು ಸಂಯೋಜಕ ಒಕ್ಕೂಟ ರಿ. ಬಂಟ್ವಾಳ ತಾಲೂಕಿನ ಸ್ಥಾಪಕ ಅಧ್ಯಕ್ಷರು ರವಿವರ್ಮ ವಿಟ್ಲ, ಕಾರ್ಯದರ್ಶಿ ಸಂತೋಷ್ ಸುವರ್ಣ ಕುರಿಯಾಳ, ಕೋಶಾಧಿಕಾರಿ ಪ್ರಶಾಂತ್ ಕುಡಂಡ್ಕ ಇವರು ಉಪಸ್ಥಿತರಿದ್ದರು.
ಧನಂಜಯ ಶೆಟ್ಟಿ ಸರಪಾಡಿ ಸ್ವಾಗತಿಸಿ, ಲೊಹಿತ್ ಬ್ರಹ್ಮರಕೂಟ್ಲ ಧನ್ಯವಾದವಿತ್ತು, ಇಸ್ಮಾಯಿಲ್ ಬನಾರಿ ನಿರೂಪಿಸಿದರು.