ತೆಕ್ಕಿಲ್ ಮೊಹಮ್ಮದ್ ಹಾಜಿಯವರ 50ನೇ ಪುಣ್ಯ ಸ್ಮರಣೆ ಕಾರ್ಯಕ್ರಮ – ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ…

ವೈವಿಧ್ಯತೆಯಲ್ಲಿಯೂ ಏಕತೆಯನ್ನು ಕಾಣುವುದು ನಮ್ಮ ದೇಶದ ವಿಶೇಷತೆ - ಸಚಿವ ಅಹಮದ್ ದೇವರ ಕೋವಿಲ್…

ಸುಳ್ಯ : ಜಾತ್ಯತೀತ ತತ್ವ, ಭಾಷೆ ,ಸಂಸ್ಕ್ರತಿಯಲ್ಲಿ ವೈವಿದ್ಯತೆ, ಆ ವೈವಿದ್ಯತೆಯಲ್ಲಿಯೂ ಏಕತೆಯನ್ನು ಕಾಣುವುದು ನಮ್ಮ ದೇಶದ ವಿಶೇಷತೆ. ಪರಸ್ಪರ ಪ್ರೀತಿ, ವಿಶ್ವಾಸದಿಂದ ಬದುಕಿ ಪ್ರತಿಯೊಬ್ಬರಿಗೂ ಬೆಳೆಯಲು ಅವಕಾಶ ನೀಡುವ ಮೂಲಕ ನಮ್ಮ ಭಾಷೆ, ಸಂಸ್ಕತಿಯ ವೈವಿಧ್ಯತೆಯನ್ನು ಪೋಷಿಸಬೇಕು ಎಂದು ಕೇರಳ ಸರಕಾರದ ಬಂದರು ಮತ್ತು ವಸ್ತು ಸಂಗ್ರಹಾಲಯ ಸಚಿವರಾದ ಅಹಮ್ಮದ್ ದೇವರ ಕೋವಿಲ್ ಹೇಳಿದ್ದಾರೆ. ಅರಂತೋಡಿನ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ವತಿಯಿಂದ ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆದ ತೆಕ್ಕಿಲ್ ಮೊಹಮ್ಮದ್ ಹಾಜಿಯವರ 50ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಮತ್ತು ಶೈಕ್ಷಣಿಕವಾಗಿ ಸಾಧನೆಗೈದ ವಿಧ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತೆಕ್ಕಿಲ್ ಮೊಹಮ್ಮದ್ ಹಾಜಿ ಅವರು ಅಗಲಿ 50 ವರ್ಷಗಳು ಸಂದರೂ ಅವರನ್ನು ಎಲ್ಲರು ನೆನಪಿಸಿ ಗೌರವಿಸುವುದು ಅವರಿಗೆ ಈ ಸಮಾಜ ನೀಡುವ ಗೌರವಕ್ಕೆ ಸಾಕ್ಷಿಯಾಗಿದೆ. ಅವರ ಪರಂಪರೆಯನ್ನು ಟಿ.ಎಂ ಶಹೀದ್ ನೇತೃತ್ವದಲ್ಲಿ ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ ಜಾತಿ, ದರ್ಮ ಭೇದವಿಲ್ಲದೆ ಶಿಕ್ಷಣ, ಆರೋಗ್ಯ ಸಾಮಾಜಿಕ ಸೇವೆ ನೀಡುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಶಾಸಕಿ ಭಾಗಿರಥಿ ಮುರುಳ್ಯ ಮಾತನಾಡಿ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ವತಿಯಿಂದ ಇನ್ನಷ್ಠು ಸೇವಾಕಾರ್ಯ ನಡೆಸಲು ಸಾಧ್ಯವಾಗಲಿ ಎಂದು ಶುಭ ಹಾರೈಸಿದರು.

ತೆಕ್ಕಿಲ್ ಮೊಹಮ್ಮದ್ ಹಾಜಿಯವರ ಅನುಸ್ಮರಣಾ ಭಾಷಣ ಮಾಡಿದ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಕೆ.ಆರ್ ಗಂಗಾಧರ ಮಾತನಾಡಿ ಮೊಹಮ್ಮದ್ ಹಾಜಿ ಯವರು ಕೃಷಿ, ಉದ್ಯಮ ನಡೆಸಿ ಯಶಸ್ವಿಯಾಗಿರುವುದುದರ ಜೊತೆಗೆ ಇಲ್ಲಿ ಸಾಮಾಜಿಕ, ಧಾರ್ಮಿಕ ನಾಯಕರಾಗಿ ಬೆಳೆದಿದ್ದರು. ಕೊಡುಗೈ ದಾನಿಯಾಗಿ, ಶಿಕ್ಷಣ, ಧಾರ್ಮಿಕ, ಸಾಮಾಜಿಕ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು. ಬೆಳಗ್ಗೆ ಗಂಟೆ10 .30 ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ತೆಕ್ಕಿಲ್ ಎಕ್ಸಲೆನ್ಸ್ ಅವಾರ್ಡ್ ಗೆ ಆಯ್ಕೆಯಾದ ಸ್ಪೀಕರ್ ಖಾದರ್ ಅವರು 9 ಗಂಟೆಗೆ ತೆಕ್ಕಿಲ್ ಗೆ ಆಗಮಿಸಿ ತುರ್ತು ಕಾರ್ಯಕ್ರಮದ ನಿಮಿತ್ತ 10 .20 ಕ್ಕೆ ನಿರ್ಗಮಿಸಿದರು.
ಸ್ಪೀಕರ್ ಯು.ಟಿ.ಖಾದರ್ ಅವರ ಅಭಿನಂದನಾ ಭಾಷಣ ಮಾಡಿದ ಎಂ.ಬಿ. ಪೌಂಡೇಶನ್ ಅಧ್ಯಕ್ಷ ಎಂ.ಬಿ ಸದಾಶಿವ ಮಾತನಾಡಿ ಸ್ಪೀಕರ್ ಆಗಿ ಯು.ಟಿ ಖಾದರ್ ಅವರು ಸದನಕ್ಕೆ ಗೌರವ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಎಲ್ಲರ ಜೊತೆ ಬೆರೆಯುವ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಸುವ ಗುಣ ಅವರಿಗಿದೆ ಎಂದರು.
ತಾಲೂಕಿನ ಪಿ.ಯು.ಸಿ. ಮತ್ತು ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ಸಾಧಕ ವಿದ್ಯಾರ್ಥಿಗಳನ್ನು ಕರ್ನಾಟಕ ಲೋಕ ಸೇವಾ ಆಯೋಗದ ಮಾಜಿ ಅಧ್ಯಕ್ಷ ಟಿ.ಶ್ಯಾಮ್ ಭಟ್ ಗೌರವಿಸಿದರು. ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ಅಧ್ಯಕ್ಷತೆ ವಹಿಸಿದರು. ಸಮಾರಂಭದಲ್ಲಿ ಅತಿಥಿಗಳಾಗಿ ಸುಳ್ಯ ತಹಶೀಲ್ದಾರ್ ಮಂಜುನಾಥ್, ಸಂಪಾಜೆ ಸಂತ ಪ್ರಾನ್ಸಿಸ್ ಚರ್ಚ್ ನ ಧರ್ಮಗುರುಗಳಾದ ಫಾ. ಪೌಲ್ ಕ್ರಾಸ್ತ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಧನಂಜಯ ಅಡ್ಪಂಗಾಯ, ಸುಳ್ಯ ಬ್ಲಾಕ್ ಕಾಂಗ್ರೇಸ್ ನ ಅಧ್ಯಕ್ಷ ಪಿ.ಸಿ.ಜಯರಾಮ, ಇಸಾಕ್ ಸಾಹೇಬ್ ಪಾಜಪಳ್ಳ, ಕೆ.ಎಂ ಮುಸ್ತಫ, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ. ಹಮೀದ್, ಅರಂತೋಡು ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ನಿವೃತ್ತ ಮುಖ್ಯೋಪಾಧ್ಯಾಯ ದಾಮೋದರ್ ಮಾಸ್ತರ್, ಉದ್ಯಮಿ ಮೊಯಿದ್ದೀನ್, ಪ್ರಮುಖರಾದ ಸಮದ್, ಸದಾನಂದ ಮಾವಜಿ, ಕೆ.ಟಿ. ವಿಶ್ವನಾಥ, ಕೆ.ಆರ್ ಜಗದೀಶ್ ರೈ, ಜಿ.ಉಮ್ಮರ್ ಮೂಸನ್ ಹಾಜಿ ತೆಕ್ಕಿಲ್ , ಶರೀಫ್ ಕಂಠಿ, ಮೂಸಾ ಪೈಬೆಂಚಾಲ್, ಸಿದ್ದೀಕ್ ಕೊಕ್ಕೊ, ಟಿ.ಎಂ ಶಮೀರ್ ತೆಕ್ಕಿಲ್, ಟಿ.ಎಂ ಶಾಝ್ ತೆಕ್ಕಿಲ್, ಟಿ.ಎಂ ಜಾವೇದ್ ತೆಕ್ಕಿಲ್, ಉನೈಸ್ ಪೆರಾಜೆ, ತೆಕ್ಕಿಲ್ ಶಾಲಾ ಮುಖ್ಯೋಪಾಧ್ಯಾಯ ಸಂಪತ್, ಸಾಧಿಕ್ ಮಾಸ್ತರ್, ತಾಜ್ ಮೊಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು. ತೆಕ್ಕಿಲ್ ಪ್ರತಿಷ್ಠಾನ ಕಾರ್ಯದರ್ಶಿ ಅಶ್ರಫ್ ಗುಂಡಿ ಸ್ವಾಗತಿಸಿದರು. ನೌಫಲ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

whatsapp image 2023 07 24 at 4.43.26 pm
whatsapp image 2023 07 24 at 4.43.12 pm
Sponsors

Related Articles

Back to top button