ಕರ್ನಾಟಕ – 17 ಗಂಟೆಯಲ್ಲಿ 34 ಜನರಿಗೆ ಕೊರೊನ ಸೋಂಕು ದೃಢ….

ಬೆಂಗಳೂರು: ಬುಧವಾರ ಸಂಜೆ 5 ಗಂಟೆಯ ನಂತರ ಇದುವರೆಗೆ 34 ಹೊಸ ಕೊರೊನ ಸೋಂಕು ಪ್ರಕರಣಗಳು ರಾಜ್ಯದಲ್ಲಿ ದೃಢವಾಗಿದೆ.
ಬೆಳಗಾವಿ ಜಿಲ್ಲೆಯೊಂದರಲ್ಲೇ 17 ಪ್ರಕರಣಗಳು ದೃಢವಾಗಿದ್ದು, ಉಳಿದಂತೆ ವಿಜಯಪುರದಲ್ಲಿ ಏಳು ಪ್ರಕರಣಗಳು, ಬೆಂಗಳೂರು ನಗರದಲ್ಲಿ ಐದು ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದೆ.
ಬುಧವಾರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 66 ವರ್ಷದ ಓರ್ವ ಸೋಂಕಿತ ಸಾವನ್ನಪ್ಪಿದ್ದು, ರಾಜ್ಯದ ಸೋಂಕಿತರ ಸಂಖ್ಯೆ 13ಕ್ಕೇರಿದೆ. ಇಂದಿನ ದಾಖಲೆಯ 34 ಸೋಂಕಿತರೊಂದಿಗೆ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 313 ಕ್ಕೇರಿದ್ದು, 82 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.