ಸುರತ್ಕಲ್- ಅನಧಿಕೃತ ಕ್ಲಿನಿಕ್ ಬಂದ್ ಮಾಡಿದ ಆರೋಗ್ಯ ಇಲಾಖೆ….
ಸುರತ್ಕಲ್: ನೋಂದಣಿ ನವೀಕರಣಗೊಳ್ಳದೆ ಸುರತ್ಕಲ್ ಪೇಟೆಯಲ್ಲಿ ಕಾರ್ಯಾಚರಿಸುತ್ತಿದ್ದ ಖಾಸಗೀ ವೈದ್ಯರ ಕ್ಲಿನಿಕ್ ಮೇಲೆ ದಾಳಿ ನಡೆಸಿದ ಆರೋಗ್ಯ ಇಲಾಖೆ ಅಧಿಕಾರಿಗಳು ಗುರುವಾರ ಕ್ಲಿನಿಕ್ ಗೆ ಬೀಗ ಹಾಕಿದ್ದಾರೆ.
ಸುರತ್ಕಲ್ ನಲ್ಲಿದ್ದ ಶ್ರೀ ರಾಘವೇಂದ್ರ ಕ್ಲಿನಿಕ್ ಇದರ ನೋಂದಣಿ 2017ರಲ್ಲಿಯೇ ಮುಕ್ತಾಯವಾಗಿದ್ದು, ನಂತರ ನವೀಕರಣವಾಗಿರಲಿಲ್ಲ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರ ನಿರ್ದೇಶನದ ಮೇರೆಗೆ ಇಲಾಖೆಯ ಅಧಿಕಾರಿ ಡಾ.ಸಿಖಂದರ್ ಪಾಶಾ ಅವರು ಕ್ಲಿನಿಕ್ ಗೆ ದಾಳಿ ಮಾಡಿ ಬೀಗ ಹಾಕಿದ್ದಾರೆ. ಮುಂದಿನ ಆದೇಶದವರೆಗೆ ಕ್ಲಿನಿಕ್ ಮುಚ್ಚಿರುತ್ತದೆ.
ಇದರೊಂದಿಗೆ ಜಿಲ್ಲೆಯಲ್ಲಿ ಆಸ್ಪತ್ರೆ, ಕ್ಲಿನಿಕ್ , ಲ್ಯಾಬರೋಟರಿ, ಹೋಮಿಯೋಪತಿ , ಅಯುಷ್ ಕ್ಲಿನಿಕ್ ಪರವಾನಿಗೆ ನವೀಕರಣಗೊಳ್ಳದೆ/ ನೋಂದಣಿಗೊಳಿಸಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರೋಗ್ಯ ಇಲಾಖೆ ಸೂಚಿಸಿದೆ.