ಅರಂತೋಡು ಶಾದಿ ಮಹಲ್ ಬಳಿ ಭಾರಿ ಗಾತ್ರದ ಮರ ಬಿದ್ದು ರಸ್ತೆ ತಡೆ…

ಸುಳ್ಯ: ಅರಂತೋಡು ಉದಯನಗರ ಎಂಬಲ್ಲಿ ಹಾಸ್ಟೆಲ್ ಬಳಿ ಇರುವ ಬೃಹತ್ ಮರವೊಂದು ರಾತ್ರಿ ಬೀಸಿದ ಗಾಳಿಗೆ ಅನ್ವಾರುಲ್ ಹುದಾ ಶಾದಿ ಮಹಲ್ ಕಟ್ಟಡ ಸಮೀಪ ಬಿದ್ದು ರಸ್ತೆಗೆ ತಡೆ ಉಂಟಾಗಿದ್ದು ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ವರದಿಯಾಗಿದೆ.
ತಕ್ಷಣವೇ ಶಾದಿ ಮಹಲ್ ಪಕ್ಕದ ಮನೆಯವರು ಮಜೀದ್ ಸಿಟಿ ಮೆಡಿಕಲ್ಸ್ ರವರಿಗೆ ತಿಳಿಸಿದರು. ತೆರವು ಗೊಳಿಸುವ ಕಾರ್ಯದಲ್ಲಿ ಖಾದರ್ ಮೊಟ್ಟoಗಾರ್, ನವಾಝ್, ಖಾದರ್, ಯು. ಎಸ್ ಜಿ ಶಾಮಿಯಾನ ಮನೀಶ್ ಉಳುವಾರು, ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ಜುಬೇರ್, ಸುಕುಮಾರ ಉಳುವಾರು, ಮುಜಾಮ್ಮಿಲ್ ,ಆರಿಫ್ ದರ್ಖಾಸ್, ಮಿಸ್ಬಾ, ಬಾತಿಷ, ತಾಜುದ್ದೀನ್ ಅರಂತೋಡು ಸಹಕರಿಸಿದರು.

whatsapp image 2025 07 29 at 10.38.31 pm

Related Articles

Back to top button