ಕರ್ನಾಟಕ ರಾಜ್ಯ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾಗಿ ಟಿ ಎಂ ಶಾಹಿದ್ ತೆಕ್ಕಿಲ್ ನೇಮಕ…

ಸುಳ್ಯ: ಕರ್ನಾಟಕ ರಾಜ್ಯ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾಗಿ ರಾಜ್ಯ ಸರಕಾರದಿಂದ ಟಿ ಎಂ ಶಾಹಿದ್ ತೆಕ್ಕಿಲ್ ನೇಮಕವಾಗಿದ್ದಾರೆ. ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತನ್ನನ್ನು ತಾನು ಸಕ್ರಿಯವಾಗಿ ತೊಡಗಿಸಿಕೊಂಡು, ಜನಸೇವೆಗಾಗಿ ಶ್ರಮಿಸಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಟಿ ಎಂ ಶಾಹಿದ್ ತೆಕ್ಕಿಲ್ ಜನಪರ ಕಾರ್ಯಕ್ರಮಗಳ ಮೂಲಕ ಜನಮನ್ನಣೆ ಗಳಿಸಿದ್ದಾರೆ.
ಕ್ರಿಯಾಶೀಲ ರಾಜಕಾರಣಿ, ಅಭಿವೃದ್ಧಿ ಹರಿಕಾರ, ಕೆ.ಪಿಸಿ.ಸಿ ಪ್ರಧಾನ ಕಾರ್ಯದರ್ಶಿ, ತೆಕ್ಕಿಲ್ ಪ್ರತಿಷ್ಠಾನದ(ರಿ) ಸ್ಥಾಪಕರು, ತೆಕ್ಕಿಲ್ ಶಿಕ್ಷಣ ಸಂಸ್ಥೆ ಗೂನಡ್ಕ ಸಂಪಾಜೆ ಇದರ ಸ್ಥಾಪಕಾಧ್ಯಕ್ಷ, ಪೇರಡ್ಕ ಮಸೀದಿ ಮತ್ತು ದರ್ಗಾದ ಅಧ್ಯಕ್ಷರು, ಪ್ರತಿಷ್ಠಿತ ತೆಕ್ಕಿಲ್ ಕುಟುಂಬದ ಪ್ರಮುಖರು, ಸಮಾಜಮುಖಿ ಚಿಂತನೆಗೆ ಮುಂಚೂಣಿ ಶಕ್ತಿ, ಎನ್ ಎಸ್ ಯು ಐ (ವಿದ್ಯಾರ್ಥಿ ಕಾಂಗ್ರೆಸ್),ಪ್ರದೇಶ ಯುವ ಕಾಂಗ್ರೆಸ್ ಸಮಿತಿ,ರಾಜ್ಯ ಅಲ್ಪಸಂಖ್ಯಾತರ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ದುಡಿದು, ಕೆಪಿಸಿಸಿ ಕಾರ್ಯದರ್ಶಿ, ಕೆಪಿಸಿಸಿ ವಕ್ತಾರರಾಗಿ, ಸುಳ್ಯ ತಾಲ್ಲೂಕು ಅಲ್ಪ ಸಂಖ್ಯಾತರ ಸಹಕಾರಿ ಸಂಘದ ಸ್ಥಾಪಕ ಅಧ್ಯಕ್ಷರಾಗಿ, ಎರಡು ಬಾರಿ ಕೇಂದ್ರ ನಾರು ಮಂಡಳಿ ಸದಸ್ಯರಾಗಿ, ರಾಜ್ಯ ಕಾರ್ಮಿಕ ಕಲ್ಯಾಣ ಮಂಡಳಿ ಸದಸ್ಯರಾಗಿ, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ನಿರ್ದೇಶಕರಾಗಿ, ರಾಜ್ಯ ವಖ್ಫ್ ಕೌನ್ಸಿಲ್ ಸದಸ್ಯರಾಗಿ ಹಲವಾರು ಸಂಘ ಸಂಸ್ಥೆಗಳಲ್ಲಿ ಅವರು ದುಡಿಯುತ್ತಿದ್ದಾರೆ.
ಪಕ್ಷದ ರಾಜ್ಯಮಟ್ಟದ ಹಿರಿಯ ಮುಖಂಡರಾದ ಶಾಹಿದ್ ತೆಕ್ಕಿಲ್ ಎನ್ ಎಸ್ ಯು ಐ, ಯುವಕ ಕಾಂಗ್ರೇಸ್, ಅಲ್ಪಸಂಖ್ಯಾತರ ಘಟಕ ಹಾಗು ಕೆಪಿಸಿಸಿ ವತಿಯಿಂದ ರಾಜ್ಯದ ಮೂಲೆ ಮೂಲೆ ಗಳಲ್ಲಿ ಪ್ರಯಾಣಿಸಿ ಪಕ್ಷ ಸಂಘಟನೆಗೆ ಕಳೆದ 37 ವರ್ಷಗಳಿಂದ ದುಡಿದಿದ್ದು ಇವರು ಪ್ರತಿಷ್ಟಿತ ತೆಕ್ಕಿಲ್ ಕುಟುಂಬದವರು.