ಆರೋಗ್ಯದ ರಕ್ಷಣೆಗೆ ಮುನ್ನೆಚ್ಚರಿಕೆ ಅಗತ್ಯ – ಜಯರಾಮ ಪೂಜಾರಿ…
ಬಂಟ್ವಾಳ: ಮಕ್ಕಳಿಂದ ತೊಡಗಿ ಹಿರಿಯರವರೆಗೂ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುವುದರಿಂದ ಮುನ್ನೆಚ್ಚರಿಕೆ ಅತೀ ಅಗತ್ಯ. ಅನಾರೋಗ್ಯ ಉಂಟಾದಾಗ ಸೂಕ್ತವಾದ ಚಿಕಿತ್ಸೆ ಪಡೆಯಲು ಇರುವ ಯೋಜನೆಗಳ ಬಗ್ಗೆ ನಿವೃತ್ತ ಆರೋಗ್ಯ ಅಧಿಕಾರಿ ಜಯರಾಮ ಪೂಜಾರಿ ಮಾಹಿತಿ ನೀಡಿದರು.
ಕೈಕಂಬದ ಸಮೀಪದ ಪೆರಾರ ನಾರ್ಯ ಶ್ರೀನಿವಾಸ ಶೆಟ್ಟಿ ಅವರ ನಿವಾಸದಲ್ಲಿ ಜರಗಿದ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಮೆಲ್ಕಾರ್ ಬಂಟ್ವಾಳ ಇದರ ಮಾಸಿಕ ಸಭೆಯಲ್ಲಿ ಆರೋಗ್ಯ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ರೀಮತಿ ಹೇಮಾವತಿ ಭಂಡಾರಿ ದೀಪ ಪ್ರಜ್ವಲನ ಗೊಳಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರತಿಷ್ಠಾನದ ಗೌರವಾಧ್ಯಕ್ಷ ಪ್ರೊ. ಎ.ವಿ ನಾರಾಯಣ ಪುತ್ತೂರು ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಅಧ್ಯಕ್ಷರಾದ ಕೈಯೂರು ನಾರಾಯಣ ಭಟ್ಟ ಮಾತನಾಡಿ ಏಳು ತಾಲೂಕುಗಳ ವಿವಿಧ ವರ್ಗದ ನಾಯಕರನ್ನು ಗುರುತಿಸಿ ಪ್ರಾತಿನಿಧ್ಯ ನೀಡುವ ಬಗ್ಗೆ ಮತ್ತು ಮುಂದಿನ ಯೋಜನೆಗಳ ಬಗ್ಗೆ ತಿಳಿಸಿದರು.
ಪ್ರತಿಷ್ಠಾನದ ವತಿಯಿಂದ ಹಿರಿಯರ ಸಮಾವೇಶವನ್ನು ಆಯೋಜಿಸುವ ಬಗ್ಗೆ ಟ್ರಸ್ಟಿಗಳಾದ ಎಂ.ಆರ್ ವಾಸುದೇವ, ಲೋಕೇಶ್ ಹೆಗ್ಡೆ ಪುತ್ತೂರು, ಜಯರಾಮ ಭಂಡಾರಿ ಧರ್ಮಸ್ಥಳ, ಭಾಸ್ಕರ ಬಾರ್ಯ, ದುಗ್ಗಪ್ಪ .ಯನ್, ಡಾ. ಬಿ.ಎನ್.ಮಹಾಲಿಂಗ ಭಟ್, ಪಿ. ಮುರಳೀಧರ ರಾವ್ ಹಾಗೂ ಜಯಾನಂದ ಪೆರಾಜೆ, ಸಂತೋಷ್ ಕಾವೂರು, ಲಕ್ಷ್ಮಣ್ ಆಕಾಶಭವನ, ರಾಮಕೃಷ್ಣ ನಾಯಕ್ ಮಂಚಿ, ಶ್ರೀಮತಿ ರಾಜಲಕ್ಷ್ಮಿ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ವರದಿ ಮತ್ತು ಲೆಕ್ಕಪತ್ರ ಮಂಡನೆ ಮಾಡಿದರು. ಉಪಾಧ್ಯಕ್ಷರಾದ ದುಗ್ಗಪ್ಪ ಎನ್ ಸ್ವಾಗತಿಸಿ ಖಜಾಂಜಿ ಎಂ.ಆರ್. ವಾಸುದೇವ ವಂದಿಸಿದರು. ಈ ಕಾರ್ಯಕ್ರಮದ ಪ್ರಾಯೋಜಕರಾಗಿ ಪ್ರತಿಷ್ಠಾನದ ಸಂಚಾಲಕ ನಾರ್ಯ ಶ್ರೀನಿವಾಸಶೆಟ್ಟಿ ಸಹಕರಿಸಿದರು.