ನೀರು ದುರುಪಯೋಗ ಆಗದಂತೆ ಸಾರ್ವಜನಿಕರು ಎಚ್ಚರ ವಹಿಸಿ-ಮಮತಾ ರಂಜನ್…..
ಪುತ್ತೂರು: ನಗರಸಭಾ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳಲಿರುವ 24/7 ನೀರು ಸರಬರಾಜು ಯೋಜನೆಯಡಿ ಎಲ್ಲರಿಗೂ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತದೆ. ಆದರೆ ನೀರಿನ ದುರುಪಯೋಗ ಆಗದಂತೆ ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದು ನಗರಸಭೆಯ ಸದಸ್ಯೆ ಮಮತಾ ರಂಜನ್ ತಿಳಿಸಿದರು.
ಅವರು ಶನಿವಾರ ಜಲಸಿರಿ 24/7 ನೀರು ಸರಬರಾಜು ಯೋಜನೆಯಡಿ 26 ನೇ ವಾರ್ಡಿನ ಸಾರ್ವಜನಿಕರಿಗೆ ಸಂಜಯನಗರ ಸರಕಾರಿ ಶಾಲೆಯಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ಮಂಗಳೂರು ಕಛೇರಿಯ ಸಿಎಸ್‍ಎಸ್ ಪ್ರಕಾಶ್ ಅವರು ಜಲಸಿರಿ ಯೋಜನೆಯ ಬಗ್ಗೆ ವಿಸ್ತ್ರತ ಮಾಹಿತಿ ನೀಡಿದರು. ಪುತ್ತೂರು ಯೋಜನೆಯ ಅನುಷ್ಠಾನ ಘಟಕದ ಸಹಾಯಕ ಅಭಿಯಂತರ ವಿಜಯಾನಂದ ಎಂ ಸೊಲಾಪುರ್, ಸಮಾಲೋಚನಾ ಅಭಿಯಂತರ ಸಂದೇಶ್ ಅಳಪೆ ಉಪಸ್ಥಿತರಿದ್ದರು.ಮಂಗಳೂರು ಕೆಯುಐಡಿಎಫ್‍ಸಿ ಕಛೇರಿಯ ಸಾಮಾಜಿಕ ಅಭಿವೃದ್ಧಿ ಸಹಾಯಕ ಹಸನ್ ವಿಟ್ಲ ಪ್ರಾಸ್ತಾವಿಕವಾಗಿ ಮತನಾಡಿದರು.ಸಭೆಯಲ್ಲಿ ಹಾಜರಿದ್ದ ಸ್ಥಳೀಯ ಸಾರ್ವಜನಿಕರಾದ ಆನಂದ ಉಡುಪ, ರಾಧಾಕೃಷ್ಣ ಭಟ್, ಸುರೇಶ್, ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಪ್ರಮೀಳ ಮತ್ತಿತರರು ಸಲಹೆ ಸೂಚನೆ ನೀಡಿದರು. ಯೋಜನೆಯ ಸಾಮಾಜಿಕ ಅಭಿವೃದ್ಧಿ ಸಹಾಯಕ ಉಸ್ಮಾನ್ ಸ್ವಾಗತಿಸಿ, ವಂದಿಸಿದರು. ಕಛೇರಿಯ ಚರಣ್ ಸಹಕರಿಸಿದರು.