ಕೊರೊನ ನಿಯಂತ್ರಣ- ರಾಜ್ಯ ಸರಕಾರದಿಂದ ಮಾರ್ಗಸೂಚಿ ಪ್ರಕಟ…

ಬೆಂಗಳೂರು: ಅತಿ ವೇಗವಾಗಿ ಹಬ್ಬುತ್ತಿರುವ ಕೊರೊನ ನಿಯಂತ್ರಣಕ್ಕಾಗಿ ಏ.21 ರಿಂದ ಮೇ. 4 ರ ವರೆಗೆ ಅನ್ವಯವಾಗುವಂತೆ ಹೊಸ ಮಾರ್ಗಸೂಚಿಯನ್ನು ರಾಜ್ಯ ಸರಕಾರ ಪ್ರಕಟಿಸಿದೆ.
ಮಾರ್ಗಸೂಚಿಯ ಮುಖ್ಯಾಂಶಗಳು:
ಅನಗತ್ಯವಾಗಿ, ಸಕಾರಣ ಇಲ್ಲದೇ ಸಾರ್ವಜನಿಕ ಪ್ರದೇಶಗಳಲ್ಲಿ ಜನ ಓಡಾಡುವಂತಿಲ್ಲ.
ಸಕಾರಣ ಇದ್ದರೆ ಮಾತ್ರ ಸಮೂಹ ಸಾರಿಗೆಗಳು, ಆಟೋ, ಮ್ಯಾಕ್ಸಿ ಕ್ಯಾಬ್ ಗಳು, ಸ್ವಂತ ವಾಹನಗಳ‌ ಮೂಲಕ ಓಡಾಡಲು ಅವಕಾಶ.
ಸಾರ್ವಜನಿಕರು ಮತ್ತು ಸರಕು ಸಾಗಣೆ ವಾಹನಗಳಿಗೆ ಅಂತರ್ ಜಿಲ್ಲೆ ಮತ್ತು ಅಂತರ್ ರಾಜ್ಯಗಳ ಓಡಾಟಕ್ಕೆ ನಿರ್ಬಂಧ ಇಲ್ಲ. ಓಡಾಟಕ್ಕೆ ವಿಶೇಷ ಅನುಮತಿ ಅನಗತ್ಯ.
ಬಸ್ ಗಳಲ್ಲಿ ಸೀಟುಗಳ ಸಾಮರ್ಥ್ಯದಷ್ಟೇ ಪ್ರಯಾಣಿಕರಿಗೆ ಅವಕಾಶ.
ಆಟೋ, ಕ್ಯಾಬ್, ಸ್ವಂತ ಕಾರುಗಳಲ್ಲಿ ಓಡಾಡುವರಿಗೆ ಸಾಮಾಜಿಕ ಅಂತರ ಕಡ್ಡಾಯ.
ಸ್ವಂತ ವಾಹನಗಳಿದ್ದವರು ಅನಗತ್ಯ ಓಡಾಟಗಳಲ್ಲಿ ನಿಯಂತ್ರಣ‌ ಹಾಕಿಕೊಳ್ಳಬೇಕು.
ಹೊರ ರಾಜ್ಯಗಳಿಂದ ಬರುವ ಪ್ರಯಾಣಿಕರಿಗೆ ಆರ್ಟಿಪಿಸಿಆರ್ ಟೆಸ್ಟ್ ನೆಗೆಟಿವ್ ರಿಸಲ್ಟ್ ಕಡ್ಡಾಯ.
ಸರಕು, ಸೇವೆ, ತುರ್ತು ಸೇವೆಯ ವಾಹನಗಳಿಗೆ ನಿರ್ಬಂಧ ಇಲ್ಲ.
ಮೆಟ್ರೋದಲ್ಲಿ 50% ಪ್ರಯಾಣಿಕರಿಗೆ ಮಾತ್ರ ಅವಕಾಶ.
ಬಸ್, ಮ್ಯಾಕ್ಸಿ ಕ್ಯಾಬ್ , ಟೆಂಪೋ ಟ್ರಾವೆಲರ್ ಗಳಲ್ಲಿ 50% ಅವಕಾಶ
ಇವುಗಳಿಗೆ ಅನುಮತಿ:
ದಿನಸಿ ಅಂಗಡಿಗಳು, ಮಾಂಸದ ಅಂಗಡಿಗಳು, ಹಣ್ಣು, ತರಕಾರಿ ಮಾರಾಟ ಕೇಂದ್ರಗಳು, ಹಾಲಿನ ಬೂತ್ ಗಳಿಗೆ ಅವಕಾಶ.
ಹೋಮ್ ಡೆಲಿವರಿ ಸೇವೆಗಳಿಗೆ ಅವಕಾಶ.
ಬ್ಯಾಂಕ್, ಎಟಿಎಂ ಕೇಂದ್ರಗಳು, ವಿಮೆ ಸಂಸ್ಥೆಗಳು, ಮಾಧ್ಯಮಗಳು, ಇ-ಕಾಮರ್ಸ್ ನ‌ ಹೋಂ ಡೆಲಿವರಿಗೆ ಅವಕಾಶ
ಸೆಲೂನ್ ಶಾಪ್ ಗಳು, ಸ್ಪಾ, ಬ್ಯೂಟಿ ಪಾರ್ಲರ್ ಗಳಿಗೆ ಅವಕಾಶ.
ತರಕಾರಿ, ಹಣ್ಣುಗಳ ಮಾರುಕಟ್ಟೆಗಳು, ಕೃಷಿ ಮಂಡಿಗಳು, ಇ-ಮಾರ್ಕೆಟ್ ಗಳು, ರಸಗೊಬ್ಬರ, ಕೀಟನಾಶಕಗಳ ಮಾರಾಟ ಮಳಿಗೆಗಳು‌ ಅಬಾಧಿತ.
ಮೀನುಗಾರಿಕೆ ಅವಲಂಬಿತ ಎಲ್ಲ ಚಟುವಟಿಕೆಗಳೂ‌ ಅಭಾದಿತ.
ಪಶುಸಂಗೋಪನೆ ವಲಯದಲ್ಲೂ ಎಲ್ಲಾ ಬಗೆಯ ಕಾರ್ಯಚಟುವಟಿಕೆ, ವಹಿವಾಟುಗಳಿಗೂ ಅವಕಾಶ.
ವೀಕೆಂಡ್ ಕರ್ಫ್ಯೂ ದಿನ ಬೆಳಗ್ಗೆ ನಾಲ್ಕು ಗಂಟೆ ಮಾತ್ರ ಅವಶ್ಯಕ ವಸ್ತುಗಳ ಖರೀದಿಗೆ ಅವಕಾಶ,ಬೆಳಗ್ಗೆ 6-10 ರವರೆಗೆ ಮಾತ್ರ ಖರೀದಿ.ಉಳಿದ ಸಮಯ ಮೆಡಿಕಲ್ ಸೇವೆ ಹೊರತುಪಡಿಸಿ ಉಳಿದೆಲ್ಲ ಬಂದ್.
ರಾಜ್ಯದಲ್ಲಿ 15 ದಿನಗಳ ಕಾಲ ಬಿಗಿ ಕ್ರಮ,ಐದು ದಿನ ಜನತಾ ಕರ್ಫ್ಯೂ,ಎರಡು ದಿನ ವೀಕೆಂಡ್ ಕರ್ಫ್ಯೂ,ಎಲ್ಲ ರಾತ್ರಿಗಳೂ ನೈಟ್ ಕರ್ಫ್ಯೂ.
ಇವುಗಳು ನಿರ್ಬಂಧ:
ಭೌತಿಕ ಶಾಲಾ ಕಾಲೇಜುಗಳು, ಟ್ಯೂಷನ್, ತರಬೇತಿ, ಕೋಚಿಂಗ್ ಸೆಂಟರ್ ಗಳು ಬಂದ್.
ಸಿನಿಮಾ ಮಂದಿರಗಳು, ಥಿಯೇಟರ್ ಗಳು, ಶಾಪಿಂಗ್ ಮಾಲ್ ಗಳು, ಜಿಮ್ ಸೆಂಟರ್ ಗಳು, ಕ್ರೀಡಾ ಸಂಕೀರ್ಣಗಳು, ಸ್ಟೇಡಿಯಂಗಳು, ಸ್ವಿಮ್ಮಿಂಗ್ ಪೂಲ್ ಗಳು, ಮನರಂಜನಾ ಪಾರ್ಕ್ ಗಳು, ಆಡಿಟೋರಿಯಂಗಳು, ಸಭಾಂಗಣ, ಸೆಮಿನಾರ್ ಹಾಲ್ ಗಳು ಸಂಪೂರ್ಣ ಬಂದ್.
ಕ್ರೀಡಾಪಟುಗಳಿಗೆ ಮಾತ್ರ ಸ್ವಿಮ್ಮಿಂಗ್ ಪೂಲ್ ಗಳ ಬಳಕೆಗೆ ಅವಕಾಶ.
ಎಲ್ಲ ಸಾಮಾಜಿಕ, ರಾಜಕೀಯ, ಕ್ರೀಡಾ, ಮನರಂಜನಾ , ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳೂ, ಸಭೆಗಳೂ ಬಂದ್.
ಸ್ಡೇಡಿಯಂ, ಆಟದ ಮೈದಾನಗಳಲ್ಲಿ ಕ್ರೀಡಾ ಚಟುವಟಿಕೆಗಳ ಅಭ್ಯಾಸಕ್ಕೆ ಮಾತ್ರ ಅವಕಾಶ.
ಎಲ್ಲ ಧಾರ್ಮಿಕ ಪ್ರಾರ್ಥನಾ ಕೇಂದ್ರಗಳೂ ಬಂದ್. ಮಂದಿರ, ಮಸೀದಿ, ಚರ್ಚ್ ಗಳು ಬಂದ್. ಪೂಜಾಮಂದಿರಗಳಲ್ಲಿ ಅಲ್ಲಿನ ಸಿಬ್ಬಂದಿಗೆ ಮಾತ್ರ ಪೂಜಾ ಕೈಂಕರ್ಯ, ಪ್ರಾರ್ಥನೆ, ಇತರೇ ಸೇವೆಗಳಿಗೆ ಅವಕಾಶ.
ಮದುವೆಗಳಿಗೆ ಇನ್ನಷ್ಟು ನಿರ್ಬಂಧ. ಹಾಲ್ ಗಳಲ್ಲಿ 50 ಜನ, ತೆರೆದ ಪ್ರದೇಶಗಳಲ್ಲಿ 100 ಜನರಿಗೆ ಮಾತ್ರ ಅವಕಾಶ.
ಅಂತಿಮ‌ ಸಂಸ್ಕಾರಕ್ಕೂ ಜನ‌ಮಿತಿ. ನಾಲ್ಕು ಗೋಡೆಯೊಳಗೆ 20, ತೆರೆದ ಜಾಗದಲ್ಲಿ 50 ಜನ ಮಾತ್ರ ಭಾಗವಹಿಸಬೇಕು
ಹೊಟೇಲ್ ಗಳು, ರೆಸ್ಟೋರೆಂಟ್ ಗಳು, ಫುಡ್ ಸ್ಟ್ರೀಟ್ ಗಳಲ್ಲಿ ಶೇ.50 ರಷ್ಟು ಗ್ರಾಹಕರಿಗೆ ಮಾತ್ರ ಅನುಮತಿ. ಪಾರ್ಸಲ್ ಗಳಿಗೆ ಅವಕಾಶ.
ಮದ್ಯದಂಗಡಿಗಳು, ಔಟ್ ಲೆಟ್ ಗಳಲ್ಲಿ ಪಾರ್ಸಲ್ ವ್ಯವಸ್ಥೆ.
ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡಗಳಲ್ಲಿ ಶೇ.50 ರಷ್ಟು ಸರ್ಕಾರಿ‌ ನೌಕರರಿಗೆ ಅವಕಾಶ.
ಸರ್ಕಾರಿ, ಅರೆ ಸರ್ಕಾರಿ, ನಿಗಮ, ಮಂಡಳಿ ಸಂಸ್ಥೆಗಳ ಶೇ.50 ರಷ್ಟು ನೌಕರರು ಕೋವಿಡ್ ಕರ್ತವ್ಯಕ್ಕೆ ನಿಯೋಜನೆ.
ಎಲ್ಲಾ ಬಗೆಯ ಖಾಸಗಿ ಸಂಸ್ಥೆಗಳಲ್ಲೂ ವರ್ಕ್ ಫ್ರಂ ಹೋಮ್ ವ್ಯವಸ್ಥೆ ಜಾರಿ. ಸೀಮಿತ ಸಂಖ್ಯೆಯ‌ ನೌಕರರಿಗೆ ಭೌತಿಕ ಕೆಲಸ ಮಾಡಲು ಅವಕಾಶ.
ಮದುವೆ ಮನೆಯಲ್ಲಿ 50ಜನರಿಗೆ ಮಾತ್ರ ಅವಕಾಶ.

Sponsors

Related Articles

Leave a Reply

Your email address will not be published. Required fields are marked *

Back to top button