ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ ) ಸದಸ್ಯ ಕಾರ್ಯದರ್ಶಿಯಾಗಿ ಗುರುಪ್ರಸಾದ್ ಅಧಿಕಾರ ಸ್ವೀಕಾರ…

ಸುಳ್ಯ:ಜಿಲ್ಲಾ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಸಹಾಯಕ ನಿರ್ದೇಶಕ (ಪ್ರಭಾರ ) ರಾದ ಗುರುಪ್ರಸಾದ್ ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸೂಡ )ಸದಸ್ಯ ಕಾರ್ಯದರ್ಶಿ ಯಾಗಿ ಅಧಿಕಾರ ಸ್ವೀಕರಿಸಿದರು
ಈ ಹಿಂದೆ ಸದಸ್ಯ ಕಾರ್ಯದರ್ಶಿ ಯಾಗಿದ್ದ ಪ್ರವೀಣ್ ರವರು ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ವರ್ಗಾವಣೆ ಹಿನ್ನಲೆಯಲ್ಲಿ ಗುರುಪ್ರಸಾದ್ ಸುಳ್ಯಕ್ಕೆ ವರ್ಗಾವಣೆ ಗೊಂಡು ಅಧಿಕಾರ ಸ್ವೀಕರಿಸಿದರು
ಈ ಸಂದರ್ಭ ದಲ್ಲಿ ಸೂಡ ಅಧ್ಯಕ್ಷ ಕೆ. ಎಂ. ಮುಸ್ತಫ ಮಾತನಾಡಿ ಮಹಾ ಯೋಜನೆ ಯ ಹಂತ ದಲ್ಲಿರುವ ಸುಳ್ಯ ಪ್ರಾಧಿಕಾರಕ್ಕೆ ಗುರುಪ್ರಸಾದ್ ರಂತಹ ಕ್ರಿಯಾಶೀಲ ಅಧಿಕಾರಿ ಆಗಮಿಸಿರುವುದು ಸಂತಸದ ಬೆಳವಣಿಗೆ ಎಂದರು
ನಗರ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ, ಉಪಾಧ್ಯಕ್ಷ ಬುದ್ಧ ನಾಯ್ಕ್, ಮಾಜಿ ಅಧ್ಯಕ್ಷರು ಗಳಾದ ವಿನಯ್ ಕಂದಡ್ಕ, ಎಂ. ವೆಂಕಪ್ಪಗೌಡ, ಸದಸ್ಯರು ಗಳಾದ ಶ್ರೀಮತಿ ಸರೋಜಿನಿ ಪೆಲ್ತಡ್ಕ, ಶಿಲ್ಪಾ ಸುದೇವ್, ಕೆ. ಎಸ್. ಉಮ್ಮರ್, ಧೀರ ಕ್ರಾಸ್ತ, ರಿಯಾಜ್ ಕಟ್ಟೆಕ್ಕಾರ್ಸ್ ಮೊದಲಾದವರು ಉಪಸ್ಥಿತರಿದ್ದರು ಮುಖ್ಯಾಧಿಕಾರಿ ಎಂ. ಎಚ್. ಸುಧಾಕರ್ ಸ್ವಾಗತಿಸಿ, ಟೌನ್ ಪ್ಲಾನರ್ ಫೈರೋಜ್ ವಂದಿಸಿದರು.
ಸುಳ್ಯ ನಗರ ಪಂಚಾಯತ್ ವ್ಯಾಪ್ತಿ ಮತ್ತು ತಾಲೂಕು ವ್ಯಾಪ್ತಿಯಲ್ಲಿ ಇವರು ಇಲಾಖೆ ಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಫೈರೋಜ್ ರವರು ಟೌನ್ ಪ್ಲಾನರ್ ಹುದ್ದೆಯಲ್ಲಿ ಈಗಾಗಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ.