ಗಾಂದೇವಿ-ಮುಂಬೈಯಲ್ಲಿ ನಾಟ್ಯಾಯನ…
ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಹುಮುಖ ಪ್ರತಿಭೆಯ ಸಾಂಸ್ಕೃತಿಕ ರಾಯಭಾರಿ ವಿದುಷಿ ಅಯನಾ ವಿ.ರಮಣ್ ಮೂಡುಬಿದಿರೆ ಇವರ ‘ನಾಟ್ಯಾಯನ’ ಕಾರ್ಯಕ್ರಮವನ್ನು ಅ. 20 ರಂದು ಮುಂಬೈಯಲ್ಲಿ ಆಯೋಜಿಸಲಾಗಿದೆ.
ನವರಾತ್ರಿಯ ವಿಶೇಷ ಕಾರ್ಯಕ್ರಮವಾಗಿ ವಿದ್ಯಾವಿಹಾರ್ ನಲ್ಲಿರುವ ಶ್ರೀ ಗಾಂದೇವಿ ಶ್ರೀ ಅಂಬಿಕಾ ಶ್ರೀ ಆದಿನಾಥೇಶ್ವರ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಶ್ರೀ ಶ್ರೀ ಡಾ.ಸುಗುಣೇಂದ್ರ ತೀರ್ಥ ಸ್ವಾಮಿಗಳ ಶುಭಾಶೀರ್ವಾದಗಳೊಂದಿಗೆ ನಾಟ್ಯಾಯನ ಪ್ರದರ್ಶನಗೊಳ್ಳಲಿದೆ.
ಅಕ್ಟೋಬರ್ 20, ಶುಕ್ರವಾರ ಸಂಜೆ 6 ರಿಂದ ನಡೆಯುವ ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರದ ಪ್ರಧಾನ ಅರ್ಚಕ ಪೆರ್ಣಂಕಿಲ ಶ್ರೀ ಹರಿದಾಸ ಭಟ್ ಆಶೀರ್ವಚನ ನೀಡಲಿದ್ದು, ಐಒಬಿಯ ಪೂರ್ವಾಧ್ಯಕ್ಷ ಮತ್ತು ಆಡಳಿತ ನಿದೇಶಕ ಎಂ.ನರೇಂದ್ರ, ಮಹಾರಾಷ್ಟ್ರದ ಕನ್ನಡಿಗ ಕಲಾವಿದರ ಪರಿಷತ್ ಅಧ್ಯಕ್ಷ ಸುರೇಂದ್ರ ಕುಮಾರ್ ಹೆಗ್ಡೆ, ತುಳು ಸಿನಿಮಾ ನಟ ಮತ್ತು ಮುಂಬೈಯ ಸಂಘಟಕ ಕರ್ನೂರು ಮೋಹನ್ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕೆನರಾ ರೊಬೇಕೋ ಮ್ಯೂಚ್ಯುವಲ್ ಫಂಡ್‍ನ ನಿವೃತ್ತ ಸಹಾಯಕ ಪ್ರಬಂಧಕಿ ಮತ್ತು ಕೋಟಿಗೀತಾ ಲೇಖನ ಯಜ್ಞದ ಮುಂಬೈ ಪ್ರಚಾರಕಿ ಅಮಿತಾ ಅಶೋಕ್ ಶೆಣೈ ಹಾಗೂ ಮತ್ತೊಬ್ಬ ಪ್ರಚಾರಕಿ, ಪೂರ್ವ ಕಾರ್ಪೋರೇಟ್ ಲಾಯರ್, ಚಿತ್ರ ನಿರ್ಮಾಕಿ – ಧಾರ್ಮಿಕ ಚಿಂತಕಿ ಅಮ್ರೀತಾ ರಾಯ್ ವಿಶೇಷ ಉಪಸ್ಥಿತಿ ನೀಡಲಿದ್ದಾರೆ. ಸಂಕರ್ಷಣ ಪ್ರಖಂಡದ ಪ್ರಚಾರಕ ಕೆ.ವಿ.ರಮಣ್ ಆಚಾರ್ಯ ಮಂಗಳೂರು ಅವರ ಪರಿಕಲ್ಪನೆ-ನಿರ್ದೇಶನ – ನಿರೂಪಣೆಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಭಗವದ್ಗೀತೆ, ಸಂಗೀತ, ನೃತ್ಯ, ನಾಟಕ, ಸಂಸ್ಕೃತಿ ಮತ್ತು ಶಿಕ್ಷಣಗಳ ವಿಶಿಷ್ಟ ಸಮ್ಮಿಲನವಾಗಿ ದೇಶ-ವಿದೇಶಗಳಲ್ಲಿ ಪ್ರದರ್ಶನ ಕಾಣುತ್ತಿರುವ ಈ ಅಪೂರ್ವ ಕಾರ್ಯಕ್ರಮದ ರಸಾಸ್ವಾದನೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ವಿದುಷಿ ಅಯನಾ ವಿ.ರಮಣ್ ಮೂಡುಬಿದಿರೆ ಪರಿಚಯ:
ಕರ್ನಾಟಕ ಕಲಾಶ್ರೀ ವಿ.ಶಾರದಾಮಣಿ ಶೇಖರ್ ಶಿಷ್ಯೆ. ಬೆಂಗಳೂರಿನ ಕಲಾಶ್ರೀ ಸತ್ಯನಾರಾಯಣ ರಾಜು ಅವರಲ್ಲಿ ವಿಶೇಷ ತರಬೇತಿ. ದೇಶ-ವಿದೇಶಗಳಲ್ಲಿ 500ಕ್ಕೂ ಅಧಿಕ ಕಾರ್ಯಕ್ರಮ. ನರ್ತನ, ಗಾಯನ, ಪಠಣ, ಸ್ಮರಣಶಕ್ತಿ, ನಿರೂಪಣ, ಯೋಗ ಇತ್ಯಾದಿಗಳಲ್ಲಿ ವಿಶೇಷ ಪರಿಶ್ರಮ. ಭರತನಾಟ್ಯದಲ್ಲಿ ಡಿಸ್ಟಿಂಕ್ಷನ್‍ನೊಂದಿಗೆ ವಿದ್ವತ್ ಪದವಿ ನಿರಂತರ 10 ವರ್ಷಗಳ ಕಾಲ ಸಿಸಿಆರ್‍ಟಿ ಸ್ಕಾಲರ್‍ಶಿಪ್ ವಿಜೇತೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸ್ಕಾಲರ್‍ಶಿಪ್ ಪಡೆದಾಕೆ. ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ-2011, ನಾಟ್ಯಮಯೂರಿ, ಮೂಡುಬಿದಿರೆಯ ಮಾಣಿಕ್ಯ, ಅರಳು ಮಲ್ಲಿಗೆ, ಬಾಲ ಸರಸ್ವತಿ, ಸಾಂಸ್ಕೃತಿಕ ರಾಯಭಾರಿ ಇತ್ಯಾದಿ ಬಿರುದುಗಳು. ‘ಕಟೀಲು ಶ್ರೀದೇವಿ ಚರಿತೆ’ ಟಿವಿ ಧಾರವಾಹಿಯಲ್ಲಿ ದೇವಿಯಾಗಿ ಅಭಿನಯ, ಕನ್ನಡ-ತುಳು ನಾಟಕ ರೂಪಕಗಳಲ್ಲಿ ಅಭಿನಯ. ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ದತ್ತು ಸ್ವೀಕಾರದ ವಿದ್ಯಾರ್ಥಿ. ಡಿಸ್ಟಿಂಕ್ಷನ್‍ನೊಂದಿಗೆ ಕಲಾ ಪದವಿ ಪೂರೈಸಿ ಮೈಸೂರು ವಿ.ವಿ.ಯ ಪ್ರವೇಶ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದು ಇಂಗ್ಲಿಷ್ ಎಂ.ಎ. ಅಧ್ಯಯನಕ್ಕೆ ಆಯ್ಕೆಯಾಗಿದ್ದಾರೆ. ಉಪನ್ಯಾಸಕಿ ಡಾ| ಮೂಕಾಂಬಿಕಾ ಜಿ.ಎಸ್ – ಪತ್ರಕರ್ತ, ಕಲಾವಿದ, ಕೋಟಿಗೀತಾ ಲೇಖನ ಯಜ್ಞ ಪ್ರಚಾರಕ ಕೆ.ವಿ.ರಮಣ್ ಮಂಗಳೂರು ದಂಪತಿಯ ಪುತ್ರಿ. ಹೆಚ್ಚಿನ ಮಾಹಿತಿಗಾಗಿ 8792158946