ಅರಂತೋಡು ತೆಕ್ಕಿಲ್ ಪ್ರತಿಷ್ಠಾನದಿಂದ 20 ನೇ ವರ್ಷದ ಸರ್ವಧರ್ಮ ಸೌಹಾರ್ಧ ಇಫ್ತಾರ್ ಕೂಟ…
ಸೌಹಾರ್ಧ ಇಫ್ತಾರ್ ನಿಂದ ದೇಶದ ಭಾವೈಕ್ಯತೆ - ಸಮಾಜಕ್ಕೆ ಉತ್ತಮ ಸಂದೇಶ : ರಾಜೇಶ್ ನಾಥ್ ಜಿ...

ಸುಳ್ಯ:ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ(ರಿ) ಅರಂತೋಡು ಇದರ ವತಿಯಿಂದ 20 ನೇ ವರ್ಷದ ಸರ್ವಧರ್ಮ ಸೌಹಾರ್ಧ ಇಪ್ತಾರ್ ಕೂಟವು ಮಾ.26 ರಂದು ಅರಂತೋಡು ತೆಕ್ಕಿಲ್ ಸಮುದಾಯ ಭವನದಲ್ಲಿ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಅರಂತೋಡು ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಬಹು| ಇಸ್ಮಾಯಿಲ್ ಫೈಝಿ ಗಟ್ಟಮನೆ ದುವಾ ನೆರವೇರಿಸಿದರು.ನಿವೃತ್ತ ಮುಖ್ಯೋಪಾಧ್ಯಾಯ ದಾಮೋದರ ಮಾಸ್ತರ್ ಗೂನಡ್ಕ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅನ್ನ ಪೂರ್ಣೇಶ್ವರಿ ಕ್ಷೇತ್ರ ಯೋಗೇಶ್ವರ ಸಿದ್ದ ಪುರುಷ ಮಠ ಮರ್ಕಂಜ ಇದರ ಧರ್ಮದರ್ಶಿ ರಾಜೇಶ್ ನಾಥ್ ಜಿ. ಮಾತನಾಡಿ ಸರ್ವಧರ್ಮ ಸೌಹಾರ್ಧ ಇಫ್ತಾರ್ ಕೂಟಗಳಿಂದ ದೇಶದ ಬಾವೈಕ್ಯತೆಗೆ ಮತ್ತು ಸಮಾಜಕ್ಕೆ ಉತ್ತಮ ಸಂದೇಶವಾಗಿದೆ. ಎಲ್ಲಾ ಧರ್ಮದ ಗುರುಗಳು ನೆಟ್ಟಗಿದ್ದರೆ ಸಮಾಜವು ನೆಟ್ಟಗಾಗುತ್ತದೆ. ಎಲ್ಲಾ ಧರ್ಮದ ಧರ್ಮ ಗ್ರಂಥಗಳು ಒಳ್ಳೆದನ್ನು ಬೋಧಿಸುತ್ತದೆ. ಅಮಲು ಪದಾರ್ಥದಿಂದಾಗಿ ಎಷ್ಟೋ ಮನೆಗಳು ಹಾಳಾಗುತ್ತಿದೆ, ಇಸ್ಲಾಂ ಧರ್ಮದಲ್ಲಿ ಅಮಲು ಪದಾರ್ಥ ಸೇವನೆಯನ್ನು ನಿಷೇದಿಸಲಾಗಿದೆ, ನಾವುಗಳು ವ್ಯಸನಿಗಳನ್ನು ವ್ಯಸನದಿಂದ ಮುಕ್ತಗೊಳಿಸಿ ಅವರ ಮನೆಗಳನ್ನು ಬೆಳಗಿಸಬೇಕೆಂದರು ತಿಂಗಳಿಗೊಂದು ಸಲ ಎಲ್ಲಾ ಧರ್ಮಗುರುಗಳು ಒಟ್ಟಿಗೆ ಸೇರಿ ಸಮಾಜ ಸುಧಾರಣೆ ಕೋಮು ಸೌಹಾರ್ದತೆ ಬಗ್ಗೆ ಬೈಠಕ್ ಮಾಡಬೇಕೆಂದು ವಿನಂತಿಸಿದರು ಟಿ ಎಂ ಶಾಹಿದ್ ತೆಕ್ಕಿಲ್ ಅವರ ಸಮಾಜಸೇವೆ, ಶಿಕ್ಷಣಕ್ಕೆ ಮತ್ತು ಕೋಮು ಸೌಹಾರ್ದತೆಗೆ ಒತ್ತು ನೀಡುತ್ತಿರುವುದು ಶ್ಲಾಘನೀಯ,ನನ್ನ ಸ್ನೇಹಿತರಾದ ಶಾಹಿದ್ ಅವರ ಅವರ ತಂದೆ ಅಜ್ಜ ಮತ್ತು ಕುಟುಂಬಸ್ಥರು ಸಮಾಜಕ್ಕೆ ನೀಡಿದ ಕೊಡುಗೆ ಅನನ್ಯ ಅದನ್ನು ಮುಂದುವರಿಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಸುಳ್ಯ ಬೀರಮಂಗಿಲ ಚರ್ಚ್ ಧರ್ಮಗುರುಗಳಾದ ವಿಕ್ಟರ್ ಡಿ’ಸೊಜ ಮಾತನಾಡಿ ನಾವೆಲ್ಲ ದೇವರ ಮಕ್ಕಳು, ಶಾಂತಿ, ಸಹಭಾಳ್ವೆಯಿಂದ ಬಾಳಬೇಕೆಂಬ ಸೌಹಾರ್ದತೆಯ ಸಂದೇಶ ನೀಡಿ ಎಲ್ಲಾ ಧರ್ಮದವರು ಸೇರಿ ಇಫ್ತಾರ್ ಕೂಟವನ್ನು ಆಚರಿಸಿ ಎಲ್ಲರು ಒಂದೇ ತಾಯಿಯ ಮಕ್ಕಳು ಎಂಬ ಭಾವನೆ ಉಂಟಾಗಿದೆ ಕಳೆದ 20 ವರ್ಷ ಸಂಸ್ಥೆ ನಡೆಸಿದ ಕಾರ್ಯಕ್ರಮ ಯಶಸ್ವಿಯಾಗಿದೆ ಇಷ್ಟೊಂದು ಜನ ಸಂಖ್ಯೆ ನೋಡಿ ನನಗೆ ಸಂತೋಷವಾಯಿತು ಇನ್ನೂ ಹೆಚ್ಚು ಹೆಚ್ಚು ಇಂತಹ ಕಾರ್ಯಕ್ರಮ ಸಮಾಜದಲ್ಲಿ ನಡೆಯಲಿ ಎಂದು ಆಶಿಸಿದರು ಸರ್ವರಿಗೂ ರಂಜಾನ್ ಶುಭಾಶಯ ತಿಳಿಸಿದರು. ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಕೆ ಎಂ ಮುಸ್ತಫಾ ಮಾತನಾಡಿ ತೆಕ್ಕಿಲ್ ಪ್ರತಿಷ್ಟಾನ ಶಾಹಿದ್ ಅವರ ನೇತೃತ್ವದಲ್ಲಿ ಕಳೆದ ಸತತ 20 ವರ್ಷ ಎಲ್ಲಾ ಧರ್ಮದವರನ್ನು ಸೇರಿಸಿ ಮಾಡಿದ್ದು ಒಂದು ಸಾಧನೆ ಕೋವಿಡ್ ಸಂದಭದಲ್ಲಿ ಕೂಡ ಅದು ಮೊಠಕಾಗಿಲ್ಲ ಎಂದು ಅವರ ಮತ್ತು ತೆಕ್ಕಿಲ್ ಕುಟುಂಬಸ್ಥರ ಕೊಡುಗೆ ಅನನ್ಯ ಎಂದರು.
ರಂಜಾನ್ ತಿಂಗಳ 25 ರ ಉಪವಾಸ ದಿವಸದಂದು ನಡೆದ ಸೌಹಾರ್ದ ಇಪ್ತಾರ್ ಕೂಟದಲ್ಲಿ ಸರ್ವಧರ್ಮದ ಅನೇಕ ಧಾರ್ಮಿಕ-, ಸಾಮಾಜಿಕ, ರಾಜಕೀಯ ಮುಖಂಡರುಗಳು ಮತ್ತು ಅಧಿಕಾರಿಗಳು ಪಾಲ್ಗೊಂಡಿದ್ದರು. ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಅರೆಭಾಷೆ ಮತ್ತು ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಸುಳ್ಯ ತಾಲೂಕು ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಶೆಟ್ಟಿ, ವಲಯ ಅರಣ್ಯಾಧಿಕಾರಿ ಮಂಜುನಾಥ್, ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರಾದ ತಿಮ್ಮಫ್ಪ ನಾಯ್ಕ್, ಫಾರೆಸ್ಟರ್ ಚಂದ್ರು, ಮೆಸ್ಕಾಂ ಇಲಾಖೆಯ ಅಧಿಕಾರಿಗಳು,ಸುಳ್ಯ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ನಿವೃತ್ತ ಪ್ರಾಂಶುಪಾಲ ಕೆ.ಆರ್ ಗಂಗಾಧರ್, ಸುಳ್ಯ ತಾಲೂಕು ಅಲ್ಪ ಸಂಖ್ಯಾತರ ಸಹಕಾರಿ ಸಂಘದ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಎಲಿಮಲೆ, ತಾ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು,ಗೌಡ ಯುವ ಸೇವಾ ಸಂಘದ ಅಧ್ಯಕ್ಷರಾದ ಪಿ.ಎಸ್.ಗಂಗಾಧರ್, ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್.ಸಂಶುದ್ದೀನ್, ಗೋಕುಲ್ ದಾಸ್, ಕಿಸಾನ್ ಘಟಕದ ಅಧ್ಯಕ್ಷರಾದ ಸುರೇಶ್ ಅಮೈ, ಲ್ಯಾಂಪ್ ಸೊಸೈಟಿ ನಿರ್ದೇಶಕ ಭವಾನಿಶಂಕರ, ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ತೀರ್ಥರಾಮ ಪರ್ನೋಜಿ ಉಳುವಾರು, ಹಾಜಿ ಇಬ್ರಾಹಿಂ ಕತ್ತರ್, ಟಿ.ಎಂ ಜಾವೇದ್ ತೆಕ್ಕಿಲ್, ಟಿ.ಎಂ ಶಮೀರ್ ತೆಕ್ಕಿಲ್ , ನ್ಯಾಯವಾದಿ ಮೂಸ, ನಗರ ಪಂಚಾಯತ್ ಸದಸ್ಯ ಧೀರಾಕ್ರಾಸ್ತ, ಸಂಪಾಜೆ ಗ್ರಾ.ಪಂ. ಮಾಜಿ ಅಧ್ಯಕ್ಷ ಜಿ ಕೆ ಹಮೀದ್ ಗೂನಡ್ಕ, ನಗರ ಪಂಚಾಯತ್ ಸದಸ್ಯ ಸಿದ್ಧೀಕ್ ಕೊಕ್ಕೊ,ಸಂಪಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಸ್ ಕೆ ಹನೀಫ್, ಸಂಯುಕ್ತ ಜಮಾತ್ ಖಜಾಂಜಿ ಹಮೀದ್ ಹಾಜಿ ಸುಳ್ಯ ಕೆ ಆರ್ ಪದ್ಮನಾಭ, ದಿನಕರ ಸಣ್ಣಮನೆ ಬದುರುದ್ದೀನ್ ಪಠೇಲ್, ಮೊದಲಾದವರು ಉಪಸ್ಥಿತರಿದ್ದರು. ಸುಮಾರು 300 ಕ್ಕಿಂತ ಅಧಿಕ ಮಂದಿ ಇಫ್ತಾರ್ ನಲ್ಲಿ ಭಾಗವಹಿಸಿದ್ದರು.