ಶಾಂತಾ ಪುತ್ತೂರು ಅವರಿಗೆ ಗಲ್ಫ್ ಯೂತ್ಸ್ ಕಬಕ ಜಮಾಅತ್ ವತಿಯಿಂದ ಗೌರವ ಸನ್ಮಾನ…

ಪುತ್ತೂರು :ಗಲ್ಫ್ ಯೂತ್ಸ್ ಕಬಕ ಜಮಾಅತ್ ಆಶ್ರಯದಲ್ಲಿ ವಿದ್ಯಾರ್ಥಿ ಗಳಿಗೆ ಪ್ರೇರಣಾ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ಜೂ.11ರಂದು ಸರಕಾರಿ ಪ್ರೌಢಶಾಲೆ ಕಬಕದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಗೌರವ ಡಾಕ್ಟರೇಟ್ ಪಡೆದ ನೆಲೆಯಲ್ಲಿ ಕಬಕ ಪ್ರೌಢಶಾಲಾ ಶಿಕ್ಷಕಿ ಶಾಂತಾ ಪುತ್ತೂರುರವರನ್ನು ಗಲ್ಫ್ ಯೂತ್ಸ್ ಕಬಕ ಜಮಾಅತ್ ವತಿಯಿಂದ ಗೌರವಿಸಲಾಯಿತು.
ಹಾಗೆಯೇ ಎಸ್ .ಎಸ್.ಎಲ್.ಸಿ.ಯಲ್ಲಿ ಉತ್ತಮ ಅಂಕ ಪಡೆದ ಪೂಜಾಶ್ರೀ, ಫಲಕನಾಝ್, ಸವಿತಾ ಲಮಾಣಿಯವರನ್ನು ಗೌರವಿಸಲಾಯಿತು. ಶಾಲೆಗೆ ಉತ್ತಮ ಫಲಿತಾಂಶ ದೊರೆತು ಎ ಗ್ರೇಡ್ ಪಡೆದ ನೆಲೆಯಲ್ಲಿ ಮುಖ್ಯ ಶಿಕ್ಷಕಿ ಸುರೇಖರವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಗಲ್ಫ್ ಯೂತ್ಸ್ ಕಬಕ ಜಮಾಅತ್ ಗೌರವಾಧ್ಯಕ್ಷ ರಾದ ಇಸ್ಮಾಯಿಲ್ ಬಗ್ಗುಮೂಲೆ, ಮಹಮ್ಮದ್ ಬೊಳುವಾರು, sdmc ಸ್ಥಳೀಯ ಜನಪ್ರತಿನಿಧಿ ಶಾಬಾ ಕೆ. ಸ್ಥಳೀಯ ವಾರ್ಡ್ ಪ್ರತಿನಿಧಿ ಉಮ್ಮರ್ ಫಾರೂಕ್,ಗೌರವ ಸಲಹೆಗಾರರಾದ ಬಶೀರ್ ಹಾಜಿ, ಇಸ್ಮಾಯಿಲ್ ಬ್ರೈಟ್, ಗಲ್ಫ್ ಯೂತ್ಸ್ ಕಬಕ ಜಮಾಅತ್ ಸಂಯೋಜಕರಾದ ಅಬ್ಬುಲ್ ಖಾದರ್, ಸದಸ್ಯ ರಾದ ಅಶ್ರಫ್ ಯುನೈನ್ , ಅಬ್ದುಲ್ ರಜಾಕ್,ರಫೀಕ್ ಪೋಳ್ಯ, ,ಶೌಕತ್ ಆಲಿ, ಊರಿನ ಪ್ರತಿನಿಧಿ ಮಹಮ್ಮದ್ ಆರೀಫ್, ಸ್ಥಾಯಿ ಸಮಿತಿ ಸದಸ್ಯ ರಾದ ಪ್ರಶಾಂತ್ ಮುರ ಉಪಸ್ಥಿತರಿದ್ದರು.
ಶಿಕ್ಷಕರಾದ ಉದಯ ಎಸ್. ಸ್ವಾಗತಿಸಿದರು.ಯಶೋಧ ಸನ್ಮಾನಿತರ ಪರಿಚಯ ಮಾಡಿದರು. ಸುಮಿತ್ರ ಕಾರ್ಯಕ್ರಮ ನಿರೂಪಿಸಿದರು. ಕೃಷ್ಣಯ್ಯ ಕೆ.ಧನ್ಯವಾದವಿತ್ತರು. ಸ್ವಪ್ನ ಸಹಕರಿಸಿದರು.

Related Articles

Back to top button