ದುಬೈ ನಲ್ಲಿ ಎರಡನೇ ಬಾರಿ ಯಶಸ್ವಿಯಾಗಿ ನಡೆದ ತೆಕ್ಕಿಲ್ ಒಕ್ಕೂಟದ ಸಂಗಮ..
. ದುಬೈ: ತೆಕ್ಕಿಲ್ ಪ್ರವಾಸಿ ಒಕ್ಕೂಟದ ವತಿಯಿಂದ “ಬಂದು ಸೇರಿ ಸಂತೋಷಪಡುವ” ಕಾರ್ಯಕ್ರಮ ದುಬೈ ಇತ್ತಿಹಾದ್ ಗ್ರೌಂಡಿನಲ್ಲಿ ನಡೆಯಿತು.
ಯು ಎ ಇ ವಾಸ್ತವ್ಯವಿರುವ ಮತ್ತು ಭಾರತದಿಂದ ಬಂದು ನೆಲೆಸಿರುವ ತೆಕ್ಕಿಲ್ ಒಕ್ಕೂಟದ ಸದಸ್ಯರ ಒಕ್ಕೂಟದ ಎರಡನೇ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ವಿವಿಧ ಕಾರ್ಯಕ್ರಮಗಳೊಂದಿಗೆ ಕಳೆದ ಮೂರು ದಿವಸಗಳ ಕಾಲ ನಡೆಯಿತು.
ದಿನಾಂಕ 25 ನಡೆದ ಸಮಾರೋಪ ಸಮಾರಂಭ ಭಾರತದ ಮತ್ತು ಯು ಎ ಇ ರಾಷ್ಟ್ರ ಗೀತೆಯೊಂದಿಗೆ ಪ್ರಾರಂಭವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆಗೈದ ಟಿ ಎಂ ಶಾಹಿದ್ ತೆಕ್ಕಿಲ್ ಅವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಅಧ್ಯಕ್ಷರಾದ ಅಜೀಜ್ ಕೊವ್ವಲ್ ಸನ್ಮಾನಿಸಿದರು.
ನಂತರ ದಿನ ಪೂರ್ತಿ ವಿವಿಧ ರೀತಿಯ ತಿಂಡಿ ತಿನಿಸುಗಳ ರುಚಿ ಸವಿಯುವ , ವಿವಿಧ ರೀತಿಯ ಭೋಜನ, ವಿವಿಧ ರೀತಿಯ ಸಹಭೋಜನ, ಪುರುಷರಿಗೆ ಮತ್ತು ಮಹಿಳೆಯರಿಗೆ ವಿವಿಧ ತರದ ಸಭಾ ಕಾರ್ಯಕ್ರಮ,ಸಾಧಕರಿಗೆ ಪ್ರಶಸ್ತಿ ಪ್ರಧಾನ, ವಿವಿಧ ವಿನೋದದ ಆಟಗಳು, ಹಗ್ಗ ಜಗ್ಗಾಟ, ಪರಸ್ಪರ ಭೇಟಿಯಾಗಿ ಅಭಿನಂದನಾ ವಿನಿಮಯ, ವಿವಿಧ ಸ್ಥಳದಲ್ಲಿ, ದೇಶದಲ್ಲಿ ವಾಸ್ತವ್ಯವಿರುವವರ ಸದಸ್ಯರ ಆಚಾರ ವಿಚಾರ ವಿನಿಮಯ ಮಧ್ಯರಾತ್ರಿ ವರೆಗೆ ನಡೆಯಿತು ಭಾರತದಿಂದ ಬಂದ ಮತ್ತು ಯು ಎ ಇ ಯಲ್ಲಿ ವಾಸ್ತವ್ಯವಿರುವ ತೆಕ್ಕಿಲ್ ಒಕ್ಕೂಟದ ಸದಸ್ಯರ ಎಂಟು ತಂಡಗಳ ಕ್ರಿಕೆಟ್ ಪಂದ್ಯಾಟದಲ್ಲಿ ವಿಜೇತರ ಫೈನಲ್ ಪಂದ್ಯಾಟ ಮಧ್ಯರಾತ್ರಿಯಿಂದ ನಡೆಯಿತು. ಬೆಳಗ್ಗಿನ ಜಾವ 3 ಗಂಟೆಗೆ ವಿಜೇತ ತಂಡವಾದ ತೆಕ್ಕಿಲ್ ಚುಂಗ್ ಬ್ರದರ್ಸ್ ,ರನ್ನರ್ಸ್ ತೆಕ್ಕಿಲ್ ಯು ಕೆ ರಾಯಲ್ಸ್ ತಂಡಕ್ಕೆ ಐವತ್ತು ಸಾವಿರ ನಗದು ಬಹುಮಾನ ಮತ್ತು ಟ್ರೋಫಿ ಯನ್ನು ತೆಕ್ಕಿಲ್ ಪ್ರತಿಷ್ಟಾನದ ಸ್ಥಾಪಕಧ್ಯಕ್ಷರೂ ಕೆಪಿಸಿಸಿ ಮುಖ್ಯ ವಕ್ತಾರರಾದ ಟಿ ಎಂ ಶಾಹಿದ್ ತೆಕ್ಕಿಲ್ ವಿತರಿಸಿ,ಎಲ್ಲಾ ಸಾಧಕರನ್ನು ಮತ್ತು ಹಿರಿಯ ವ್ಯಕ್ತಿಗಳನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಿದರು. ಕಾರ್ಯಕ್ರಮದ ಮುಖ್ಯ ಸಂಘಟಕರಾದ ತೆಕ್ಕಿಲ್ ಅಜೀಜ್ ಕೊವ್ವಲ್,ಅಬ್ದುಲ್ ರಹ್ಮಾನ್ ತೆಕ್ಕಿಲ್, ಹಮೀದ್ ಪಟೇಲ್ ತೆಕ್ಕಿಲ್ ಅಜೀಜ್ ಬೆಲಿಂಜಮ್ ತೆಕ್ಕಿಲ್ ನೇತೃತ್ವದಲ್ಲಿ ಅಚ್ಚುಕಟ್ಟಾಗಿ ನಡೆದು ಭಾರತದಿಂದ ಮತ್ತು ವಿವಿಧ ರಾಷ್ಟ್ರಗಳಿಂದ ಒಂದು ಸಾವಿರಕ್ಕು ಮಿಕ್ಕಿ ಮಂದಿ ಭಾಗವಹಿಸಿದರು ಸುಳ್ಯದ ಮತ್ತು ಸಂಪಾಜೆ,ಅರಂತೋಡು ಗ್ರಾಮದಿಂದ ದುಬೈನಲ್ಲಿ ವಾಸ್ತವ್ಯವಿರುವ ತೆಕ್ಕಿಲ್ ಕುಟುಂಬದ ಸದಸ್ಯರುಗಳಲ್ಲಿ ಪ್ರಮುಖರಾದ ಮೋಹಿಯದ್ದಿನ್ ಜುಮಾ ಮಸ್ಜಿದ್ ಪೇರಡ್ಕ ಗೂನಡ್ಕ ಇದರ ಅಧ್ಯಕ್ಷ ಹಾಗು ಉದ್ಯಮಿಗಳಾದ ರಹೀಮ್ ಪೇರಡ್ಕ,ತೆಕ್ಕಿಲ್ ರಜಾಕ್ ಪೇರಡ್ಕ, ಇಕ್ಬಾಲ್ ಸಂಟ್ಯಾರ್ ಪೇರಡ್ಕ,ಸಮದ್ ಪೇರಡ್ಕ, ಸಿನಾನ್ ಸಂಪಾಜೆ, ರಜಾಕ್ ಗೂನಡ್ಕ, ಆಸೀಫ್ ಇಕ್ಬಾಲ್,ಇಬ್ರಾಹಿಂ ತೆಕ್ಕಿಲ್ ಪೇರಡ್ಕ ಗೂನಡ್ಕ,ಟಿ ಎಂ ತಾಜುದ್ದೀನ್ ತೆಕ್ಕಿಲ್ ಗೂನಡ್ಕ,ಶರೀಫ್ ತೆಕ್ಕಿಲ್ ಗೂನಡ್ಕ,ಟಿ ಎಂ ಶಾಜ್ ತೆಕ್ಕಿಲ್,ರೇಹಾನ ರಹೀಮ್ ಪೇರಡ್ಕ, ಸಹಿತ ಪುರುಷ ಮಹಿಳಾ ಹಾಗು ಮಕ್ಕಳ ಸಹಿತ ನೂರಕ್ಕೂ ಹೆಚ್ಚು ಮಂದಿ ಭಾಗವಹಿಸಿ ಸಂತಸ ಹಂಚಿಕೊಂಡರು.ತೆಕ್ಕಿಲ್ ಪ್ರವಾಸಿ ಒಕ್ಕೂಟದ ಕಾರ್ಯಕ್ರಮವನ್ನು 2015 ರಲ್ಲಿ ಮತ್ತು ಈ ಭಾರಿ ಅಚ್ಚುಕಟ್ಟಾಗಿ ನಿರ್ವಹಿಸಿದ ಸಂಘಟಕರು ಒಕ್ಕೂಟದ ಸದಸ್ಯರಿಂದ ಮತ್ತು ಅನಿವಾಸಿ ಭಾರತೀಯರ ಪ್ರಶಂಸೆಗೆ ಪಾತ್ರವಾಯಿತು.