ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಭಾರತ ಸಂವಿಧಾನ ದಿನಾಚರಣೆ…
ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬ ನಾಗರಿಕನೂ ಅರಿತಿರಬೇಕಾದದ್ದು ನಮ್ಮ ಕರ್ತವ್ಯ: ಕೆ.ಎಂ. ಮುಸ್ತಫ...
ಸುಳ್ಯ: ಪ್ರತೀ ವರ್ಷ ನ. 26 ರಂದು ಇಡೀ ದೇಶದಲ್ಲಿ ಸಂವಿಧಾನ ದಿನವನ್ನು ಆಚರಿಸಲಾಗುತ್ತದೆ. 1949 ನವೆಂಬರ್ 26ರಂದು ಸಂವಿಧಾನ ಸಭೆ ಭಾರತದ ಸಂವಿಧಾನವನ್ನು ಅಂಗೀಕರಿಸಿತು. 1950 ರಲ್ಲಿ ಜ್ಯಾರಿಗೆ ಬಂತು. ಸ್ವಾತ್ರಂತ್ಯ ಸಿಕ್ಕಿ 75 ವರ್ಷಗಳ ನಂತರವೂ ಭಾರತ ವಸುದೈವ ಕುಟುಂಬಕಂ ಮಾದರಿಯಲ್ಲಿ ವಿಶ್ವಕ್ಕೆ ಮಾದರಿಯಾಗಿದೆ. ಸಂವಿಧಾನ ಕಲ್ಪಿಸಿದ ಜಾತ್ಯಾತೀತ, ಸಾಮರಸ್ಯ, ಸರ್ವ ಧರ್ಮ ಸಹಬಾಳ್ವೆಯ ಭಾರತ ಎಂದು ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಮುಸ್ತಫ ಹೇಳಿದರು.
ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗಾಂಧಿನಗರ ಪಿ.ಕೆ.ಕಾಂಪ್ಲೆಕ್ಸ್ ನಲ್ಲಿ ನಡೆದ ಸಂವಿಧಾನ ದಿನಾಚರಣೆ ಮತ್ತು ಸಂವಿಧಾನ ಶೀರ್ಷಿಕೆ ವಾಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಟ್ರಸ್ಟ್ ಅಧ್ಯಕ್ಷ ರಿಯಾಜ್ ಕಟ್ಟೆಕ್ಕಾರ್ಸ್ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸುಕುಮಾರ್ ಪರಿವಾರಕಾನ, ಮಹಮ್ಮದ್ ಕಲ್ಲುಮುಟ್ಲು, ಮಹಮೂದ್ ಗುರುಂಪು, ಸುಕುಮಾರ್, ಸುನಿಲ್ ಕುಮಾರ್, ರಾಜೇಂದ್ರ, ಹಮೀದ್ ಪಂಡಿತ್, ಜನಾರ್ಧನ ಜಟ್ಟಿಪ್ಪಳ್ಳ ಮೊದಲಾದವರು ಭಾಗವಹಿಸಿದ್ದರು.