ಬಂಟ್ವಾಳ – ವಸತಿ ಕಾರ್ಯಾದೇಶ ಪತ್ರ ಹಾಗೂ 94ಸಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ…
ಬಂಟ್ವಾಳ: ಬಂಟ್ವಾಳ ಕ್ಷೇತ್ರಕ್ಕೆ ಈಗಾಗಲೇ 2060 ಮನೆಗಳು ಮಂಜೂರಾಗಿದ್ದು, ಸಾವಿರಕ್ಕೂ ಅಧಿಕ ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರ ವಿತರಿಸಲಾಗಿದೆ. ಜತೆಗೆ ಎಲ್ಲಾ ರೀತಿಯ ತಾಂತ್ರಿಕ ಕಾರಣಗಳನ್ನು ಸರಿಪಡಿಸಿ 94ಸಿ ಹಕ್ಕುಪತ್ರಗಳನ್ನೂ ವಿತರಣೆ ಮಾಡಲಾಗುತ್ತಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.
ಅವರು ಶಾಸಕರ ಕಚೇರಿಯಲ್ಲಿ ವಿವಿಧ ಫಲಾನುಭವಿಗಳಿಗೆ ವಸತಿ ಕಾರ್ಯಾದೇಶ ಪತ್ರ ಹಾಗೂ 94ಸಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದರು.
ಸಣ್ಣಪುಟ್ಟ ಗೊಂದಲಗಳ ಕಾರಣಕ್ಕೆ ಮನೆ ಮಂಜೂರಾತಿ ವಿಳಂಬವಾಗಿದ್ದು, ಪ್ರಸ್ತುತ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸಿ ಆದೇಶ ಪತ್ರ ವಿತರಿಸಲಾಗುತ್ತಿದೆ. ಅರ್ಹ ಫಲಾನುಭವಿಗಳಿಗೆ ಪ್ರಧಾನಿ ಮೋದಿಯವರ ಆಶಯದಂತೆ 2025ಕ್ಕೆ ಎಲ್ಲರಿಗೂ ಮನೆ ಹಾಗೂ ಜಲಜೀವನ್ ಮಿಷನ್ ಮೂಲಕ ನಳ್ಳಿ ನೀರಿನ ಸೌಲಭ್ಯ ಒಗದಿಸುವ ಕಾರ್ಯ ಆಗಲಿದೆ. ಬಂಟ್ವಾಳಕ್ಕೆ ಇದರಲ್ಲಿ ಮೊದಲ ಹಂತದಲ್ಲಿ 33 ಕೋ.ರೂ. ಹಾಗುವ2ನೇ ಹಂತದಲ್ಲಿ 39 ಕೋ.ರೂ. ಮಂಜೂರಾಗಿದೆ ಎಂದು ಅವರು ಹೇಳಿದರು.
ಸಂಗಬೆಟ್ಟು ಗ್ರಾ.ಪಂ.ಅಧ್ಯಕ್ಷ ಸತೀಶ್ ಪೂಜಾರಿ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕಿ ಸುಲೋಚನ ಜಿ.ಕೆ.ಭಟ್, ಅಕ್ರಮ ಸಕ್ರಮ ಸಮಿತಿ ಸದಸ್ಯ ರಮನಾಥ ರಾಯಿ, ಪ್ರಮುಖರಾದ ಗಣೇಶ್ ರೈ ಮಾಣಿ, ಮಚ್ಚೇಂದ್ರ ಸಾಲ್ಯಾನ್, ಯಶವಂತ ನಾಯ್ಕ್, ಸದಾನಂದ ನಾವೂರು, ವಿಶ್ವನಾಥ ಚಂಡ್ತಿಮಾರ್, ಮಣಿನಾಲ್ಕೂರು ಗ್ರಾ.ಪಂ.ಸದಸ್ಯರಾದ ಸಾಂತಪ್ಪ ಪೂಜಾರಿ, ದಯಾನಂದ ಸುಳ್ಯ, ಕಳ್ಳಿಗೆ ಗ್ರಾ.ಪಂ.ಸದಸ್ಯ ಮನೋಜ್ ವಳವೂರು, ಚೆನ್ನೈತ್ತೋಡಿ ಗ್ರಾ.ಪಂ.ಪಿಡಿಒ ರಾಜಶೇಖರ ರೈ, ಬಂಟ್ವಾಳ ಕಂದಾಯ ನಿರೀಕ್ಷಕ ಸಂತೋಷ್, ಗ್ರಾಮ ಲೆಕ್ಕಾಧಿಕಾರಿಗಳಾದ ಪ್ರಕಾಶ್, ಸ್ವಾತಿ ಕೊಟ್ಟಾರಿ, ನಿಶ್ಮಿತಾ, ಅಶ್ವಿನಿ ಮೊದಲಾದವರು ಉಪಸ್ಥಿತರಿದ್ದರು.
ತಾ.ಪಂ.ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಪ್ರಸ್ತಾವನೆಗೈದರು. ತಾ.ಪಂ.ಸಿಬಂದಿ ಗಣೇಶ್ ಶೆಟ್ಟಿಗಾರ್ ಫಲಾನುಭವಿಗಳ ವಿವರ ನೀಡಿದರು.