ಅಶ್ರಫ್ ಗುಂಡಿ ಯವರಿಗೆ ತೆಕ್ಕಿಲ್ ಪ್ರತಿಷ್ಠಾನದಿಂದ ಸನ್ಮಾನ…

ಸುಳ್ಯ: ತೆಕ್ಕಿಲ್ ಪ್ರತಿಷ್ಠಾನದ ಕಾರ್ಯದರ್ಶಿ,ಅರಂತೋಡು ಪಂಚಾಯತ್ ಮಾಜಿ ಉಪಾಧ್ಯಕ್ಷ ,ಸಾಮಾಜಿಕ ಧಾರ್ಮಿಕ ಕ್ರೀಡಾ ಕ್ಷೇತ್ರದಲ್ಲಿ ದುಡಿಯುತ್ತಿರುವ ಅರಂತೋಡು ಜುಮಾ ಮಸ್ಜಿದ್ ಅಧ್ಯಕ್ಷರೂ ಆದ ಹಿರಿಯ ಮುಂದಾಳು ಅಶ್ರಫ್ ಗುಂಡಿಯವರಿಗೆ 57 ನೇ ಹುಟ್ಟು ಹಬ್ಬದ ಪ್ರಯುಕ್ತ ತೆಕ್ಕಿಲ್ ಪ್ರತಿಷ್ಠಾನದಿಂದ ಸನ್ಮಾನಿಸಲಾಯಿತು.
ತೆಕ್ಕಿಲ್ ಮನೆತನದ ಹಿರಿಯರಾದ ಟಿ ಎಂ ಬಾಬಾ ಹಾಜಿ ತೆಕ್ಕಿಲ್ ಶಾಲು ಹೊದಿಸಿ ,ಮೈಸೂರು ಪೇಟ ತೊಡಿಸಿ ಅವರ ಸೇವೆಯನ್ನೂ ಸ್ಮರಿಸಿ ಮುಂದೆ ಕೂಡಾ ಸಮುದಾಯಕ್ಕೆ ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಲು ಆಯುರಾರೋಗ್ಯ ಸುಖ ಐಶ್ವರ್ಯ ದೊರಕಲಿ ಎಂದು ಹಾರೈಸಿದರು.
,ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ ಎಂ ಶಾಹೀದ್ ತೆಕ್ಕಿಲ್ ಖಜಾಂಜಿ ಟಿ ಎಂ ಜಾವೇದ್ ತೆಕ್ಕಿಲ್, ಮನ್ಸೂರ್ ಪಾರೆಕ್ಕಲ್,ಅಜರುದ್ದೀನ್ ಕೆ ಎ ಯು, ಟಿ ಎಂ ಶಾಝಿಲ್ ತೆಕ್ಕಿಲ್ ಉಪಸ್ಥಿತರಿದ್ದರು.

IMG 20220710 WA0080 225x300

Related Articles