ಸೆ.21 – ಸಜ್ಜನ ಸಮುದಾಯ ಭವನದಲ್ಲಿ ಬೃಹತ್ ಮಿಲಾದ್ ಸಂಗಮ-ವಿವಿಧ ಸಮಿತಿ ರಚನೆ…

ಸುಳ್ಯ: ಸೆಪ್ಟೆಂಬರ್ 21 ರಂದು ಆದಿತ್ಯವಾರ ಸಜ್ಜನ ಸಮುದಾಯ ಭವನದಲ್ಲಿ 6 ಜಮಾಅತ್ ನೇತೃತ್ವದಲ್ಲಿ ಬೃಹತ್ ಮಿಲಾದ್ ಸಂಗಮ ಹಾಗೂ 6 ಜಮಾಯತ್ ವ್ಯಾಪ್ತಿಯಲ್ಲಿ ಮದ್ರಸಾ ಹಾಗೂ ಶಾಲಾ ವಿದ್ಯಾಬ್ಯಾಸ ಕೇತ್ರದಲ್ಲಿ ಡಿಸ್ಟಿಕ್ಷನ್ ನಲ್ಲಿ ತೇರ್ಗಡೆ ಆದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಮದ್ರಸಾ ಮಕ್ಕಳ ಮಿಲಾದ್ ಸಂಭ್ರಮ ಕಾರ್ಯಕ್ರಮ ನಡೆಸಲು ಸಭೆ ಸೇರಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಕಾರ್ಯಕ್ರಮದ ಉಸ್ತುವಾರಿ ಹಾಗೂ 50 ಜನರ ಸ್ವಾಗತ ಸಮಿತಿ ರಚಿಸಲಾಯಿತು. ಸಂಚಾಲಕರಾಗಿ ಮುಹಿಯುದ್ದೀನ್ ಜುಮ್ಮಾ ಮಸೀದಿ ಪೇರಡ್ಕ ಆಡಳಿತ ಮಂಡಳಿ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್, ಅರಂತೋಡು ಜಮಾಯತ್ ಆಡಳಿತ ಮಂಡಳಿ ಅಧ್ಯಕ್ಷರಾದ ಹಾಜಿ ಅಶ್ರಫ್ ಗುಂಡಿ, ಗೂನಡ್ಕ ಜಮಾಯತ್ ಆಡಳಿತ ಮಂಡಳಿ ಅಧ್ಯಕ್ಷರಾದ ಜಿ.ಮಹಮದ್ ಕುಂಞಿ ಗೂನಡ್ಕ, ಕಲ್ಲುಗುಂಡಿ ಜಮಾಯತ್ ಆಡಳಿತ ಮಂಡಳಿ ಅಧ್ಯಕ್ಷರಾದ ಎಸ್ ಆಲಿ ಹಾಜಿ. ಸಂಪಾಜೆ ಜಮಾಯತ್ ಆಡಳಿತ ಮಂಡಳಿ ಅಧ್ಯಕ್ಷರಾದ ಮಹಮದ್ ಹಮೀದಿಯ. ಕೊಯ್ನಾಡ್ ಜಮಾಯತ್ ಆಡಳಿತ ಮಂಡಳಿ ಅಧ್ಯಕ್ಷರಾದ ಹಾಜಿ ಮೊಯ್ದೀನ್ ಕುಂಞಿ ಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸ್ವಾಗತ ಸಮಿತಿ ಅಧ್ಯಕ್ಷರಾಗಿ ಡಾ. ಉಮ್ಮರ್ ಬೀಜದಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಜಿ ಕೆ ಹಮೀದ್ ಗೂನಡ್ಕ, ಕೋಶಾಧಿಕಾರಿಯಾಗಿ ಮಹಮ್ಮದ್ ಕುಂಞಿ ಗೂನಡ್ಕ, ಉಪಾಧ್ಯಕ್ಷರುಗಳಾಗಿ ಕೆ ಎಂ ಅಶ್ರಫ್ ಕಲ್ಲುಗುಂಡಿ. ಅಶ್ರಫ್ ಹಾಜಿ ಸಂಟ್ಯಾರ್. ಎ. ಟಿ. ಅಶ್ರಫ್ ದೊಡ್ಡಡ್ಕ, ಸಹ ಕಾರ್ಯದರ್ಶಿಗಳಾಗಿ ಎಸ್ ಕೆ ಹನೀಫ್ ಸಂಪಾಜೆ, ಎಸ್ ಪಿ ಹನೀಫ್ ಕೊಯ್ನಾಡ್ ರವರನ್ನು ನೇಮಕ ಮಾಡಲಾಯಿತು.
ಸನ್ಮಾನ ಹಾಗೂ ಪ್ರಶಸ್ತಿ ನಿರ್ವಹಣೆ ಸಮಿತಿ ಉಸ್ತುವಾರಿ ತಾಜ್ ಮಹಮ್ಮದ್ ಸಂಪಾಜೆ ನೇತೃತ್ವದಲ್ಲಿ ಅಬ್ದುಲ್ ರಹಿಮಾನ್ ಸಂಪಾಜೆ, ಸಾದಿಕ್ ಗೂನಡ್ಕ, ಉಮ್ಮರ್ ಪುತ್ರಿ ತಾಜ್ ಟರ್ಲಿ, ರಜಾಕ್ ಸೂಪರ್, ಆರ್ಥಿಕ ಸಮಿತಿ ಉಸ್ತುವಾರಿ ಇರ್ಷಾದ್ ಬದ್ರಿಯಾ ಕಲ್ಲುಗುಂಡಿ ನೇತೃತ್ವದಲ್ಲಿ ರಝಾಕ್ ಕೊಯ್ನಾಡ್. ಹ್ಯಾರಿಸ್ ಝಮ್ ಝಮ್, ಅಜರ್ ಕೊಪ್ಪತಕಜೆ, ಮುನೀರ್ ದಾರಿಮಿ, ಮಹಮದ್ ಹನೀಫ್ ಚಟ್ಟೆಕಲ್ಲು, ಉಮ್ಮರ್ ತಾಜ್, ಜಾಬಿರ್ ಎಂ ಬಿ,ಆಹಾರ ಸಮಿತಿ ರಫೀಕ್ ಕರಾವಳಿ ನೇತೃತ್ವದಲ್ಲಿ ಕೆ ಎಂ ರಫೀಕ್ ಕಲ್ಲುಗುಂಡಿ, ಅಮೀರ್ ಗೂನಡ್ಕ, ಇಬ್ರಾಹಿಂ ಟಿ ಎಂ ಮುಸ್ತಫಾ, ಅಲ್ತಾಫ್ ಗೂನಡ್ಕ. ಲುಕ್ಮನ್ ಪೇರಡ್ಕ, ಸುಹೈಲ್ ಪೇರಡ್ಕ, ನೀರಾವರಿ ಪಾರ್ಕಿಂಗ್ ವ್ಯವಸ್ಥೆಗೆ ಹಸೈನಾರ್ ದೊಡ್ಡಡ್ಕ, ಹಸೈನಾರ್ ಚಟ್ಟೆಕಲ್ಲು, ಮುನೀರ್ ಚಟ್ಟೆಕಲ್ಲು, ಹ್ಯಾರಿಸ್ ಸಂಪಾಜೆ,
ಸ್ವಾಗತ ಸಮಿತಿ ಸದಸ್ಯರುಗಳಾಗಿ ಹಾಜಿ ಅಬ್ಬಾಸ್ ಗೂನಡ್ಕ, ಅಬ್ದುಲ್ಲ ಕೊಪ್ಪತಕಜೆ,
ಎಸ್ ಎಂ. ಅಬ್ದುಲ್ಲ ಗೂನಡ್ಕ, ಉಸ್ಮಾನ್ ಪೇರಡ್ಕ , ಅಬ್ದುಲ್ ಖಾದರ್ ಮೊಟ್ಟಂಗಾರ, ಟಿ ಬಿ. ಹನೀಫ್, ಅಮೀರ್ ಕುಕ್ಕುಂಬಳ, ಅಬ್ದುಲ್ ಖಾದರ್ ಪಟೇಲ್, ತಾಜುದ್ದೀನ್ ಅರಂತೋಡು, ಕೆ. ಕೆ. ಅಬ್ಬಾಸ್ ಸಂಪಾಜೆ, ಜಿ .ಎಂ ಅಬ್ದುಲ್ಲ ಗೂನಡ್ಕ, ಹಂಸ ಕೊಯ್ನಾಡ್, ಮುನೀರ್ ಪ್ರಗತಿ, ಇಬ್ರಾಹಿಂ ಟಿ.ಎ, ಅಬೂಬಕ್ಕರ್ ಎಂ.ಸಿ., ಶರೀಫ್ ಉದಯ ಸ್ಟೋರ್, ಟಿ .ಕೆ.ರಫೀಕ್ ಕೊಯ್ನಾಡ್ ರವರನ್ನು ನೇಮಕ ಮಾಡಲಾಯಿತು. ತಾಜ್ ಮಹಮ್ಮದ್ ಎಲ್ಲರನ್ನು ಸ್ವಾಗತಿಸಿ, ಜಿ. ಕೆ. ಹಮೀದ್ ಗೂನಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. 3 ಸ್ವಲಾತಿನೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಳಿಸಲಾಯಿತು.