ಕಮಿಲ – ವಿದ್ಯುತ್ ಲೈನ್ ಮೇಲಿನ ಅಪಾಯಕಾರಿ ಮರ ತೆರವು…

ಸುಳ್ಯ: ಗುತ್ತಿಗಾರು ಗ್ರಾಮದ ಕಮಿಲದಲ್ಲಿ ಎಚ್ ಟಿ ಲೈನ್ ಮೇಲೆ ಅಪಾಯಕಾರಿ ಸ್ಥಿತಿಯಲ್ಲಿದ್ದ ಮರವನ್ನು ಮೆಸ್ಕಾಂ ಸಹಾಯದೊಂದಿಗೆ‌ ಕಮಿಲದ‌ ಯುವಕರ ತಂಡವು ತೆರವುಗೊಳಿಸಿತು.
ಕಳೆದ ಕೆಲವು ದಿನಗಳಿಂದ ಅಪಾಯಕಾರಿ ಸ್ಥಿತಿಯಲ್ಲಿದ್ದ ಮರವನ್ನು ಸ್ಥಳೀಯರು ಬಳ್ಳಿ ಹಾಕಿ ಕಟ್ಟಿದ್ದರು.‌ ಕಮಿಲದ ನಾಗರಿಕ ಕ್ರಿಯಾ ಸಮಿತಿ ಸದಸ್ಯರೂ ಆದ ಯುವಕರ ತಂಡವು ಶುಕ್ರವಾರ ಬೆಳಗ್ಗೆ ಮೆಸ್ಕಾಂ‌ ಸಹಾಯದೊಂದಿಗೆ ಅಪಾಯಕಾರಿ ಮರವನ್ನು ತೆರವು ಮಾಡಿದರು.
ಈ ಸಂದರ್ಭ ಮೆಸ್ಕಾಂ‌ ಸಿಬಂದಿಗಳು ಹಾಗೂ ಸ್ಥಳೀಯ ಯುವಕರಾದ ನಿರಂಜನ‌ ಕಾಂತಿಲ, ಪುನೀತ್ ಕಮಿಲ, ರಘುವೀರ್ ಮೊಗ್ರ, ಹರ್ಷಿತ್ ಕಾಂತಿಲ, ಭರತ್ ಕಾಂತಿಲ, ಧರ್ಮಪಾಲ ಕಮಿಲ, ನಿಖಿಲ್ ಬರೆಪ್ಪಾಡಿ, ಸುಂದರ ಬರೆಪ್ಪಾಡಿ, ದಿನೇಶ್ ಕಮಿಲ, ಪ್ರದೀಪ್ ಕಮಿಲ, ಶಿವಕುಮಾರ್ ಕಮಿಲ, ಯುವರಾಜ ಹೊಳೆಕೆರೆ, ಅಚ್ಚುತ ಎಂ, ಚನಿಯ ಕಮಿಲ, ಅಣ್ಣು ನಾಯ್ಕ್ ಕಮಿಲ ಮೊದಲಾದವರು ಇದ್ದರು.

WhatsApp Image 2020 11 20 At 8.01.00 PM 300x169 WhatsApp Image 2020 11 20 At 8.00.59 PM 300x169 WhatsApp Image 2020 11 20 At 8.00.58 PM 300x169

Related Articles

Leave a Reply

Your email address will not be published. Required fields are marked *